ಉಡುಪಿ: ಮೈ ಮೆಲೋಡಿ ಡಾಟ್ ಇನ್‌ನಿಂದ ವೈದ್ಯರಿಗೆ ಸನ್ಮಾನ

KannadaprabhaNewsNetwork |  
Published : Jul 03, 2024, 12:21 AM IST
ಸನ್ಮಾನ2 | Kannada Prabha

ಸಾರಾಂಶ

ಮೈ ಮೆಲೋಡಿ ಡಾಟ್ ಇನ್ ತಂಡದ ಐದನೇ ವರ್ಷಾಚರಣೆ, ವಿಶ್ವ ವೈದ್ಯರ ದಿನಾಚರಣೆ ಪ್ರಯುಕ್ತ ‘ವಾಯ್ಸ್ ಆಫ್ ಹೀಲಗ್ಸ್‌’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಗರದ ಮೈ ಮೆಲೋಡಿ ಡಾಟ್ ಇನ್ ತಂಡದ ಐದನೇ ವರ್ಷಾಚರಣೆ, ವಿಶ್ವ ವೈದ್ಯರ ದಿನಾಚರಣೆ ಪ್ರಯುಕ್ತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಐಎಂಎ, ಐಡಿಎ, ಆಯುಷ್, ಪ್ರಸಾದ್ ನೇತ್ರಾಲಯಗಳ ಸಹಯೋಗದಲ್ಲಿ ‘ವಾಯ್ಸ್ ಆಫ್ ಹೀಲಗ್ಸ್‌’ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಮಣಿಪಾಲ ಟೆಕ್ನಾಲಜಿಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಗೌತಮ್ ಪೈ, ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ ಜಿ.ಶಂಕರ್ ಅವರಿಗೆ ಜೀವಮಾನಶೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೈದ್ಯಕೀಯ ಶಿಕ್ಷಕ ಡಾ. ಆನಂದ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕೆಎಂಸಿ ಡೀನ್ ಡಾ. ಪದ್ಮರಾಜ ಹೆಗ್ಡೆ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌‌ನ ಡೀನ್ ಡಾ. ಮೋನಿಕಾ ಸೊಲೋಮನ್, ಎಸ್‌ಡಿಎಂ ಆಯುರ್ವೇದ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್. ಹಾಗೂ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ಈಶ್ವರ ಮಲ್ಪೆ, ವಿಶು ಶೆಟ್ಟಿ ಅಂಬಲಪಾಡಿ, ಇಕ್ಬಾಲ್ ಅಹಮ್ಮದ್ ಹಾಗೂ ರವಿರಾಜ್ ಎಚ್.ಪಿ. ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿ.ಪ. ಸದಸ್ಯ ಡಾ. ಧನಂಜಯ ಸರ್ಜಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೂಡ್ಲು ಕೃಷ್ಣಪ್ರಸಾದ್, ಉದ್ಯಮಿಗಳಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಸಾಯಿರಾಧಾ ಡೆವಲಪರ್ಸ್‌ನ ಪ್ರವರ್ತಕ ಮನೋಹರ ಎಸ್. ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ ಐ.ಪಿ.ಗಡಾದ್, ಐಎಂಎ ಉಪಾಧ್ಯಕ್ಷ ಡಾ. ನವೀನ್ ಬಲ್ಲಾಳ್, ಕಾರ್ಯದರ್ಶಿ ಅರ್ಚನಾ ಭಕ್ತ, ಖಜಾಂಚಿ ಡಾ. ಆಮ್ನ ಹೆಗ್ಡೆ, ಐಡಿಎ ಅಧ್ಯಕ್ಷ ಡಾ. ಜಗದೀಶ್ ಜೋಗಿ, ಕಾರ್ಯದರ್ಶಿ ಡಾ. ಅತುಲ್ ಯು., ಕೋಶಾಧಿಕಾರಿ ಡಾ. ವಿಜೇಶ್ ಶೆಟ್ಟಿ, ಜಿಲ್ಲಾ ಆಯುಷ್ ಅಧ್ಯಕ್ಷ ಡಾ. ಎನ್.ಟಿ.ಅಂಚನ್, ಕಾರ್ಯದರ್ಶಿ ಡಾ. ಸತೀಶ್, ಕೋಶಾಧಿಕಾರಿ ಡಾ. ಸಂದೀಪ್ ಸನಿಲ್, ಕಾರ್ಯಕ್ರಮದ ರುವಾರಿಗಳಾದ ಡಾ. ಮನೋಜ್ ಮ್ಯಾಕ್ಸಿಮ್ ಡಿಲಿಮಾ, ಡಾ. ಸತೀಶ್ ಶೆಟ್ಟಿ, ಡಾ. ಜಗದೀಶ್, ಡಾ. ವಿಜಯೇಂದ್ರ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ