ಉಡುಪಿ: ಬಸಳೆಗೂ ಬಂತು ನುಸಿ ರೋಗ ಪೀಡೆ

KannadaprabhaNewsNetwork | Published : Mar 4, 2024 1:22 AM

ಸಾರಾಂಶ

ಎಳೆ ಎಲೆಗಳು ಬಾಡಿ, ಕ್ರಮೇಣ ಇಡೀ ದಂಟೆ ಒಣಗುತ್ತಿದೆ. ಮೇಲ್ನೋಟಕ್ಕೆ ಈ ಬಸಳೆ ಬಳ್ಳಿಗೆ ನೀರು ಹಾಕದೇ ಒಣಗಿದಂತೆ ಕಾಣತ್ತದೆ. ಆದರೆ ಸಾಕಷ್ಟು ನೀರುಣಿಸಿದರೂ ಬಸಳೆ ಎಲೆಗಳು ಒಣಗಿ ಸಾಯುತ್ತಿದೆ.

ಕನ್ನಡಪ್ರಭ ವಾರ್ತೆ ಬ್ರಹ್ಮಾವರಇಲ್ಲಿನ ಹಾವಂಜೆ ಗ್ರಾಮದ ಕೀಳಂಜೆ ಪರಿಸರದಲ್ಲಿ ರೈತರು ಬೆಳೆಸಿದ ಬಸಳೆ ತರಕಾರಿ ಇದ್ದಕ್ಕಿದ್ದಂತೆ ಒಣಗಿ ಸಾಯುತ್ತಿದ್ದು, ಇದಕ್ಕೆ ನುಸಿರೋಗ ಬಾಧೆ ಕಾರಣವಾಗಿದೆ.ಇಲ್ಲಿನ ಸುಧಾಕರ ಪೂಜಾರಿ ಅವರ ಮನೆಯಂಗಳದಲ್ಲಿ ವರ್ಷವಿಡೀ ಬಸಳೆ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಮಾತ್ರ ಚಪ್ಪರ ಹಾಕಲಾಗಿದ್ದ ಬಸಳೆ ವಿಚಿತ್ರ ರೀತಿಯಲ್ಲಿ ನಾಶವಾಗಿದೆ. ಅಕ್ಕಪಕ್ಕದಲ್ಲಿ ಅಲಸಂಡೆ, ಮೆಣಸು, ಸೌತೆಕಾಯಿ, ಗೆಣಸು, ಹರಿವೆ, ಬದನೆ ಇತ್ಯಾದಿಗಳ‍ನ್ನು ಬೆಳೆಸಲಾಗಿದ್ದರೂ ಅವುಗಳಿಗೆ ಯಾವುದೇ ತೊಂದರೆಯಾಗಿಲ್ಲ.ಜಯಶೆಟ್ಟಿ ಬನ್ನಂಜೆ ಅವರ ಮನೆಯ ಅಂಗಳದಲ್ಲಿ ಬೆಳೆಸಿದಂತಹ ಬಸಳೆ ಕೂಡ ಸಂಪೂರ್ಣ ನಾಶವಾಗಿದೆ. ಎಳೆ ಎಲೆಗಳು ಬಾಡಿ, ಕ್ರಮೇಣ ಇಡೀ ದಂಟೆ ಒಣಗುತ್ತಿದೆ. ಮೇಲ್ನೋಟಕ್ಕೆ ಈ ಬಸಳೆ ಬಳ್ಳಿಗೆ ನೀರು ಹಾಕದೇ ಒಣಗಿದಂತೆ ಕಾಣತ್ತದೆ. ಆದರೆ ಸಾಕಷ್ಟು ನೀರುಣಿಸಿದರೂ ಬಸಳೆ ಎಲೆಗಳು ಒಣಗಿ ಸಾಯುತ್ತಿದೆ.ಈ ಭಾಗದಲ್ಲಿ ಮನೆ ಬಳಕೆ ಮತ್ತು ಮಾರಾಟಕ್ಕಾಗಿ ಬಸಳೆ ಬೆಳೆಸುವ ಸುಧಾಕರ ಪೂಜಾರಿ, ದಿನೇಶ್ ಪೂಜಾರಿ, ರವಿ ಪೂಜಾರಿ ಅವರಲ್ಲಿಯೂ ಇದೇ ಸಮಸ್ಯೆ ಕಂಡುಬಂದಿದ್ದು, ಈ ರೀತಿ ಆಗಿರುವುದು ನಮ್ಮ ಅನುಭವದಲ್ಲಿ ಇದೇ ಮೊದಲು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೆಬೆಟ್ಟು ಅವರು.* ಗೋಮೂತ್ರವೇ ಮನೆಮದ್ದುಈ ಬಗ್ಗೆ ಜನಪದ ತಜ್ಞರಾದ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಬಸಳೆಯ ನುಸಿರೋಗಕ್ಕೆ ದೇಸಿ ದನಗಳ ಗೋಮೂತ್ರ ಸಿಂಪರಣೆ ಉತ್ತಮ ಔಷಧಿ ಎಂದು ತಿಳಿಸಿದ್ದಾರೆ.ಒಂದು ಲೀಟರ್ ಗೋಮೂತ್ರಕ್ಕೆ 7 ಲೀಟರ್ ನೀರನ್ನು ಬೆರೆಸಿ, ಬಸಳೆ ಎಲೆಗಳ ಮೇಲೆ ಸಿಂಪಡಿಸಿದರೆ ನುಸಿ ರೋಗ ಹತೋಟಿಗೆ ಬರುತ್ತದೆ. ಜೊತೆಗೆ ಗೋಮೂತ್ರ ಉತ್ತಮ ಸಾವಯವ ಗೊಬ್ಬರವೂ ಹೌದು ಎಂದವರು ಹೇಳಿದ್ದಾರೆ.* ಮೀನು ಹಾಕಿ ಬಸಳೆ ಸಾರುವಿಟಮಿನ್ ಎ, ಸಿ, ಕಬ್ಬಿಣ, ಕ್ಯಾಲ್ಸಿಯಂ ಹೆಚ್ಚಾಗಿರುವ ಬಸಳೆ ಉತ್ತಮ ಪೌಷ್ಠಿಕ ತರಕಾರಿಯಾದರೂ, ತುಳುನಾಡಿನಲ್ಲಿ ಬಸಳೆಯ ಜೊತೆಗೆ ಒಣ ಮೀನು- ಸಿಗಡಿ ಸೇರಿಸಿ ಸಾರು - ಸಾಂಬರು ಮಾಡುವ ಪದ್ಧತಿ ಇದೆ.ಕೊಂಕಣಿ ಸಮುದಾಯದಲ್ಲಿ ಜೊತೆಗೆ ಹಸಿ ಪಪ್ಪಾಯಿ, ಉದ್ದು, ಹುರುಳಿಯನ್ನೂ ಕೂಡ ಹಾಕಿ ಮಾಡದ ಬಸಳೆ ಪದಾರ್ಥ ಹೆಚ್ಚು ಜನಪ್ರಿಯವಾಗಿದೆ. ಬಸಳೆ ಎಲೆಯ ವಡೆ, ಬೋಂಡಾ ಕೂಡ ಮಾಡುತ್ತಾರೆ.

Share this article