ಉದ್ಯೋಗವಕಾಶಕ್ಕಾಗಿ ಉದ್ಯಾನ ಕಾಶಿ ನಿರ್ಮಾಣ: ನಿಖಿಲ ಕತ್ತಿ

KannadaprabhaNewsNetwork |  
Published : Mar 07, 2024, 01:47 AM IST
ಅಅಅ | Kannada Prabha

ಸಾರಾಂಶ

ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಎದುರಿನ ಜಾಗದಲ್ಲಿ ನಿರ್ಮಿಸುತ್ತಿರುವ ₹150 ಕೋಟಿ ವೆಚ್ಚದ ಪೈಕಿ ಮೊದಲ ಹಂತದ ಸುಮಾರು ₹30 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ನಿಖಿಲ ಕತ್ತಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಸಮೀಪದ ಹಿಡಕಲ್ ಡ್ಯಾಂ ಎದುರು ನಿರ್ಮಿಸುತ್ತಿರುವ ಉದ್ಯಾನ ಕಾಶಿ ಉದ್ಯಾನದ ಮುಖ್ಯ ಉದ್ಧೇಶ ಈ ಭಾಗದಲ್ಲಿ ಪ್ರವಾಸೋದ್ಯಮ ಹೆಚ್ಚಿಸುವುದರ ಜತೆ ಸ್ಥಳೀಯರಿಗೆ ಉದ್ಯೋಗ ಕೊಡುವ ಮಹಾದಾಸೆ ದಿ.ಉಮೇಶ್ ಕತ್ತಿ ಅವರದ್ದಾಗಿತ್ತು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.

ತಾಲೂಕಿನ ಹಿಡಕಲ್ ಡ್ಯಾಂ ಎದುರಿನ ಜಾಗದಲ್ಲಿ ರ್ಮಿಸುತ್ತಿರುವ ₹150 ಕೋಟಿ ವೆಚ್ಚದ ಪೈಕಿ ಮೊದಲ ಹಂತದ ಸುಮಾರು ₹30 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ್, ಎಪಿಎಂಸಿ ನಿರ್ದೇಶಕ ಪವನ್ ಕತ್ತಿ ಮಾತನಾಡಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ನಿರ್ದೇಶಕ ಪೃಥ್ವಿ ಕತ್ತಿ, ಹಿರಿಯ ಸಹಕಾರಿ ಅಪ್ಪಾಸಾಹೇಬ ಶಿರಕೋಳಿ, ಬಸವರಾಜ ಮಟಗಾರ, ಘೋಡಗೇರಿ ಮಲ್ಲಯ್ಯ ಸ್ವಾಮೀಜಿ, ಅಭಿಯಂತರರಾದ ಪ್ರಭು ಪಾಟೀಲ, ಬಿ.ಎ.ನಾಗರಾಜ, ಕಾರ್ಯಕಾರಿ ಅಭಿಯಂತರ ರವಿ ತಾಳೂರ, ಎಸ್.ಕೆ.ಹುಕ್ಕೇರಿ, ಎಸ್.ಎಂ.ಮಾಡಿವಾಲೆ, ಎಸ್.ಆರ್.ಕಾಮತ್, ತೋಟಗಾರಿಕೆ ಅಧಿಕಾರಿ ರಾಜಶೇಖರ್ ಪಾಟೀಲ, ಅರಣ್ಯಾಧಿಕಾರಿಗಳಾದ ಪ್ರಸನ್ನ ಬೆಲ್ಲದ, ಮಹಾಂತೇಶ ಸಜ್ಜನ್, ಭೂದಾಖಲೆ ಸಹಾಯಕ ನಿರ್ದೇಶಕ ಶಶಿಕಾಂತ ಹೆಗಡೆ, ದಯಾನಂದ, ಮಹಾವೀರ ಗಣಿ, ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶ್ರೀಶೈಲಪ್ಪ ಮಗದುಮ್ಮ, ಸಂಚಾಲಕರಾದ ಬಸು ಮರಡಿ, ಪ್ರಭುದೇವ ಪಾಟೀಲ, ಅಜ್ಜಪ್ಪ ಕಲ್ಲಟ್ಟಿ, ಸುರೇಶ್ ದೊಡಲಿಂಗನವರ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಸಂಚಾಲಕರಾದ ಅಶೋಕ ಚಂದಪ್ಪಗೋಳ, ಬಸಗೌಡ ಮಗೆನ್ನವರ, ರವೀಂದ್ರ ಹಿಡಕಲ್, ಕೆಂಚಪ್ಪ ಬೆಣಚಿನಮರಡಿ, ಪಿಕಾರ್ಡ್ ಬ್ಯಾಂಕ್ ಸಂಚಾಲಕರಾದ ರಾಚಯ್ಯ ಹಿರೇಮಠ, ಶೀತಲ್ ಬ್ಯಾಳಿ, ಕಾಂಟ್ರ್ಯಾಕ್ಟರ್ ಶಿವಕುಮಾರ ಮಟಗಾರ, ಶ್ರೀಧರ ಕಬಾಡಗಿ, ಹೊಸಪೇಟಿ ಗ್ರಾ.ಪಂ.ಅಧ್ಯಕ್ಷೆ ಸುಹಾಸಿ ಮಗದುಮ್ಮ, ಉಪಾಧ್ಯಕ್ಷ ಎನ್.ಆರ್ ಖನಗಾವಿ, ಗಣ್ಯರಾದ ಆರ್ ಕರುಣಾ, ಎನ್ ಆರ್ ಅಜರೇಕರ, ಎಸ್ ಎಲ್ ತಳವಾರ ಮತ್ತಿತರರು ಇದ್ದರು.

ಬಿ.ಕೆ.ಮಟಗಾರ ಸ್ವಾಗತಿಸಿದರು. ರಾಜಶೇಖರ್ ಪಾಟೀಲ್ ಪ್ರಾಸ್ತಾವಿಸಿದರು. ಜೆ.ಎಸ್.ಕರೆನ್ನವರ ರೂಪಿಸಿದರು. ಶ್ರೀಶೈಲ್ ಹಿರೇಮಠ ವಂದಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ