ಕನ್ನಡಪ್ರಭ ವಾರ್ತೆ ಮೈಸೂರುಅರ್ಥಪೂರ್ಣ ಫಲಿತಾಂಶಗಳನ್ನು ಸಾಧಿಸಲು ವ್ಯವಸ್ಥಿತವಾಗಿ ಯೋಜನೆ ರೂಪಿಸುವುದು ಮತ್ತು ಸಮಸ್ಯೆಗಳಿಗೆ ಪೂರಕ ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯ. ಅವಶ್ಯಕತೆಯೇ ಅವಿಷ್ಕಾರಗಳಿಗೆ ತಾಯಿ. ವಿದ್ಯಾರ್ಥಿಗಳು ಸಮಸ್ಯೆ ಪರಿಹರಿಸುವ ಉತ್ತಮ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮೈಸೂರು ವಲಯದ ಅಧ್ಯಕ್ಷ ಮತ್ತು ಆಟೋಮೋಟಿವ್ ಆಕ್ಸಲ್ಸ್ ಲಿಮಿಟೆಡ್ ಅಧ್ಯಕ್ಷ ನಾಗರಾಜ ಗರ್ಗೇಶ್ವರಿ ಹೇಳಿದರು.ಮೈಸೂರು ವಿವಿ ಮತ್ತು ಮೈಸೂರು ವಲಯದ ಸಿಐಐ-ಇಂಡಸ್ಟ್ರಿ ಇನ್‌ಸ್ಟಿಟ್ಯೂಟ್ ಸಂವಹನ ಮತ್ತು ಉನ್ನತ ಶಿಕ್ಷಣ (ಸಿಐಐ-ಐಐಐ &ಎಚ್‌ಇ) ಪ್ಯಾನಲ್ ಸಹಯೋಗದೊಂದಿಗೆ ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಐಕ್ಯೂಎಸಿ ವತಿಯಿಂದ ಆಯೋಜಿಸಿದ್ದ ಭವಿಷ್ಯದ ಯಶಸ್ಸಿಗೆ ಯುಜಿ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ಇಂಟರ್ನಿಷಿಪ್ ಮತ್ತು ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸಮಸ್ಯೆ ಪರಿಹರಿಸುವ ಕೌಶಲ್ಯಗಳ ಮಹತ್ವವನ್ನು ಒತ್ತಿ ಹೇಳಿದ ಶ್ರೀ ನಾಗರಾಜ, ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯುಳ್ಳ ಅಭ್ಯರ್ಥಿಯಾಗಲು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಮತ್ತು ನಾವಿನ್ಯತೆಯಿಂದ ಸವಾಲನ್ನು ಎದುರಿಸುವ ಪ್ರತಿಭೆ ಬೆಳೆಸಿಕೊಳ್ಳಬೇಕು. ಜಾಗತಿಕ ಮಾನ್ಯತೆಯ ಮಹತ್ವದಲ್ಲಿ ಕೌಶಲ್ಯಗಳು ಅತ್ಯಂತ ಅವಶ್ಯಕ. ಆವಿಷ್ಕಾರಕ ಗುಣಗಳಿಲ್ಲದವರು ಕಳಪೆ ಮಾನ್ಯತೆ ಗಳಿಸಬೇಕಾಗುತ್ತದೆ. ಭಾರತದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗಿಗಳಾಗಬೇಕಾದರೆ ವಿದ್ಯಾರ್ಥಿಗಳು ಉತ್ತಮ ಸಂವಹನ ಗುಣ ಹೊಂದುವುದು ಅವಶ್ಯಕ ಎಂದು ಅವರು ತಿಳಿಸಿದರು.ಅಮೆರಿಕಾ, ಜಪಾನ್, ಇಂಗ್ಲೆಂಡ್ ನಂತಹ ದೇಶಗಳಲ್ಲಿ ಕಡ್ಡಾಯವಾಗಿರುವ ಇಂಟರ್ನ್ ಶಿಪ್ ಅಗತ್ಯವನ್ನು ನಾಗರಾಜ ಒತ್ತಿ ಹೇಳಿದರು.ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಕೆ. ಮಂಟೆಲಿಂಗು ಅವರು ಶೈಕ್ಷಣಿಕ ಮತ್ತು ಸಂಶೋಧನೆಯಲ್ಲಿ ಉನ್ನತ ಗುಣಮಟ್ಟವನ್ನು ತರುವಲ್ಲಿ ಜೆಎಸ್‌ಎಸ್ ಸಂಸ್ಥೆಗಳ ಮತ್ತು ಕಾಲೇಜಿನ ಪ್ರಯತ್ನಗಳನ್ನು ಶ್ಲಾಘಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ಭಾರತದಲ್ಲಿ ಕೌಶಲ್ಯ ಕಾರ್ಯಕ್ರಮಗಳ ವಿಕಸನ, 2013 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ಇವುಗಳು ತಂದಂತಹ ಉಪಕ್ರಮಗಳ ಬಗ್ಗೆ ವಿವರಿಸಿದರು.ಪ್ರೊಸೆಟ್ಟಾ ಬಯೋಕಾನ್ಫರ್ಮ್ಯಾಟಿ ಸಿಇಒ ಡಾ.ಎಂ. ಧರ್ಮಪ್ರಸಾದ್, ಉದ್ಯೋಗಕ್ಕಾಗಿ ಕಾರ್ಯಕ್ಷೇತ್ರಗಳಲ್ಲಿನ ವ್ಯಕ್ತಿಗಳ ಶಿಫಾರಸುಗಳ ಅಗತ್ಯತೆ ಎಂಬ ವಿಷಯ ಕುರಿತು ಮಾತನಾಡಿದರು.ಪ್ರಾಂಶುಪಾಲ ಡಾ.ಎಂ. ಪ್ರಭು ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕ ಡಾ.ಎನ್. ರಾಜೇಂದ್ರ ಪ್ರಸಾದ್ ನಿರೂಪಿಸಿದರು ಮತ್ತು ವಂದಿಸಿದರು.