ಕನ್ನಡಪ್ರಭ ವಾರ್ತೆ ಟೇಕಲ್ರಾಜ್ಯದ ಮೂಲೆ ಮೂಲೆಗಳಲ್ಲಿ ಜನತೆ, ರೈತರು, ಬಡವರು ಆಶೀರ್ವಾದದಿಂದ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಬಡವರ ಸೇವೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.ಮಾಲೂರು ತಾಲೂಕಿನ ಮಾಸ್ತಿಯಲ್ಲಿ ವೆಂಕಟೇಶ ಅಯ್ಯಂಗಾರ್ ಬಸ್ ನಿಲ್ದಾಣ ಉದ್ಘಾಟನೆ ಮತ್ತು ಕನ್ನಡ ಕದಂಬ ಸಂಘದಿಂದ ಕನ್ನಡ ರಾಜ್ಯೋತ್ಸವ, ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತಾಲೂಕಿಗೆ ಹೆಚ್ಚು ಅನುದಾನ
ಹಿಂದಿನ ಅವಧಿಯಲ್ಲಿ ಮಾಲೂರು ಅಭಿವೃದ್ಧಿ ನೋಡಿ ಎರಡನೇ ಬಾರಿ ಹೆಚ್ಚು ಮತಗಳು ಬರುತಿದೆ ಎಂಬ ನಿರೀಕ್ಷೆ ಇತ್ತು, ಆದರೆ ಎರಡನೇ ಬಾರಿ ಶಾಸಕರಾಗಿ ಆಯ್ಕೆಗೆ ಕಡಿಮೆ ಮಾತುಗಳು ಬಂದಿವೆ. ಶಾಸಕ ನಂಜೇಗೌಡ ಸಿಕ್ಕಿರೋದು ನಿಮ್ಮ ಅದೃಷ್ಟ. ಅವರ ಕೈ ಬಿಡಬೇಡಿ. ತಮಗಿಂತಲೂ ಅವರು ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಅನುದಾನ ತಂದಿದ್ದಾರೆ. ಈಗಾಗಲೇ ಮಾಲೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಮತ್ತು ಮಾಸ್ತಿ ಗ್ರಾಮ ಪಟ್ಟಣ ಪಂಚಾಯಿತಿ ಮಾಡುವುದಾಗಿ ಹೇಳಿದರು.ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಶಾಸಕರು ನಂಜೇಗೌಡ ಈಗಾಗಲೇ ಚಿಕ್ಕ ತಿರುಪತಿ ಅಭಿವೃದ್ಧಿಗೆ ೫ ಕೋಟಿ ಅನುದಾನದಲ್ಲಿ ಅಭಿವೃದ್ಧಿಗೆ ಸಹಕಾರ ನೀಡಿದ್ದೇನೆ, ಇನ್ನು ೨೫ ಕೋಟಿಗೆ ಅನುಮೋದನೆ ನೀಡುತ್ತೇನೆ ಇಂತಹ ಅಭಿವೃದ್ಧಿ ಶಾಸಕರಿಗೆ ಸಹಕಾರ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಪ್ರತಿ ದಿನ ೬೦ ಲಕ್ಷ ಮಹಿಳೆಯರು ಬಸ್ ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದರು.
ಸಿಎ, ಡಿಸಿಎಂ ಸಹಕಾರಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಎರಡು ಬಾರಿ ಶಾಸಕನಾಗಿದ್ದು, ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಶ್ರಮವಹಿಸುತ್ತಿರುವದಾಗಿ ರಾಜ್ಯ ಸರ್ಕಾರದಿಂದ ಮಾಲೂರು ತಾಲೂಕಿಗೆ ಹಲವಾರು ಅನುದಾನಗಳನ್ನು ಹೊಂದಿರುವುದಾಗಿ ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹಕಾರ ಹೆಚ್ಚು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಕೆ ವೈ ಎಂಎಲ್ಸಿ ಅನಿಲ್ ಕುಮಾರ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನಿಲ್ ನಂಜೇಗೌಡ, ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾಯಿಂ ಉಲ್ಲ, ಪುರಸಭಾ ಅಧ್ಯಕ್ಷೆ ಕೋಮಲ ನಾರಾಯಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಚಿನ್ನರಾಯಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸನ್, ದರಖಾಸ್ತು ಸಮಿತಿ ಅಧ್ಯಕ್ಷ ಆನೇಪುರ ಹನುಮಂತಪ್ಪ, ಸದಸ್ಯ ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯನಾರಸಿಂಹ, ಮಾಸ್ತಿ ಗ್ರಾ.ಪಂ ಅಧ್ಯಕ್ಷೆ ಮಂಜುಳ ನಾಗರಾಜ್, ತಹಸೀಲ್ದಾರ್ ರೂಪ, ರಮೇಶ್, ಗೋಪಾಲ್, ಕೃಷ್ಣ ಕುಮಾರ್, ಹೇಮಾಮಾಲಿನಿ ಮತ್ತಿತರರು ಇದ್ದರು.