ಅರ್ಬನ್‌ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟನೆ ನಾಳೆ

KannadaprabhaNewsNetwork |  
Published : Jul 26, 2025, 02:00 AM IST
ಜಮಖಂಡಿ ಅರ್ಬನ್‌ ಬ್ಯಾಂಕ್‌ನ ಅಧ್ಯಕ್ಷ ರಾಹುಲ ಕಲೂತಿ ಸುದ್ದಿಗಾರರೊಂದಿಗೆ ಮಾತನಾಡಿದರು,  | Kannada Prabha

ಸಾರಾಂಶ

ಜಮಖಂಡಿ ನಗರದ ಅರ್ಬನ್‌ ಬ್ಯಾಂಕಿನ ನೂತನ ಶಾಖೆಯನ್ನು ಜಿಲ್ಲಾ ಕೇಂದ್ರ ಸ್ಥಳ ಬಾಗಲಕೋಟೆಯಲ್ಲಿ ಜು.27ರ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಾಗುವುದು ಎಂದು ಅರ್ಬನ್‌ ಬ್ಯಾಂಕಿನ ಅಧ್ಯಕ್ಷ ರಾಹುಲ ಕಲೂತಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಜಮಖಂಡಿ ನಗರದ ಅರ್ಬನ್‌ ಬ್ಯಾಂಕಿನ ನೂತನ ಶಾಖೆಯನ್ನು ಜಿಲ್ಲಾ ಕೇಂದ್ರ ಸ್ಥಳ ಬಾಗಲಕೋಟೆಯಲ್ಲಿ ಜು.27ರ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಾಗುವುದು ಎಂದು ಅರ್ಬನ್‌ ಬ್ಯಾಂಕಿನ ಅಧ್ಯಕ್ಷ ರಾಹುಲ ಕಲೂತಿ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು 14ನೇಯ ಶಾಖೆಯಾಗಲಿದ್ದು, 5-6 ತಿಂಗಳಲ್ಲಿ 5 ಹೊಸ ಶಾಖೆ ಪ್ರಾರಂಭಿಸಲಾಗಿದೆ. ಜನರಲ್ಲಿ ಅರ್ಬನ್‌ ಬ್ಯಾಂಕಿನ ಮೇಲೆ ವಿಶ್ವಾಸವಿದ್ದು, ಪ್ರತಿ ವರ್ಷ ₹10 ರಿಂದ ₹15 ಕೋಟಿ ವರೆಗೆ ಠೇವಣಿ ಹಣ ಸಂಗ್ರಹವಾಗುತ್ತಿದೆ. ಬ್ಯಾಂಕ್‌ ಲಾಭದಲ್ಲಿದೆ. ಆದ್ದರಿಂದ ಹೊಸ ಶಾಖೆ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಅರ್ಬನ್‌ ಬ್ಯಾಂಕ್‌ನಲ್ಲಿ ಲಭ್ಯವಿದೆ. ಇನ್ನೆರಡು ತಿಂಗಳಲ್ಲಿ ರಿಜರ್ವ್‌ ಬ್ಯಾಂಕಿನ ಸದಸ್ಯತ್ವ ದೊರೆಯಲಿದೆ ಎಂದು ತಿಳಿಸಿದರು.

ಬ್ಯಾಂಕ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಗಲಕೋಟೆ ಚರಂತಿ ಮಠದ ಪ್ರಭುಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಜಯಕುಮಾರ ಸರನಾಯಕ ಉದ್ಘಾಟಿಸುವರು. ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ, ಶಾಸಕ ಎಚ್‌.ವೈ. ಮೇಟಿ, ಪಿ.ಎಚ್‌. ಪೂಜಾರ, ಮಾಜಿ ಶಾಸಕ ವೀರಣ್ಣ ಚರಂತಿ ಮಠ ಸೇರಿದಂತೆ ಜಿಲ್ಲೆಯ ಹಲವು ನಾಯಕರು ಗಣ್ಯರು, ವ್ಯಾಪಾರಸ್ಥರು ಭಾಗವಹಿಸಲಿದ್ದಾರೆ ಎಂದು ವಿವರಣೆ ನೀಡಿದರು.

ನಿರ್ದೇಶಕ ಜಿ.ಎಸ್‌. ನ್ಯಾಮಗೌಡ ಮಾತನಾಡಿ. ಜಮಖಂಡಿ ಸರ್ಕಾರ ಪಟವರ್ಧನ ಮಹರಾಜರ ಕಾಲದಿಂದ ಸಂಸ್ಥಾಪನೆ ಗೊಂಡಿರುವ ಜಮಖಂಡಿ ಅರ್ಬನ್‌ ಬ್ಯಾಂಕ್‌ ತನ್ನದೇ ಆದ ನಂಬಿಕೆ ವಿಶ್ವಾಸಕ್ಕೆ ಪಾತ್ರವಾಗಿದೆ. ಅಂದಿನಿಂದ ಇಂದಿನವರೆಗೆ ಸಾರ್ವ ಜನಿಕರಲ್ಲಿ ನಂಬಿಕೆ ಉಳಿಸಿಕೊಂಡು ಬಂದಿದೆ. ಸೌಹಾರ್ದ ಸಹಕಾರಿ ಬ್ಯಾಂಕ್‌ಗಳ ಪೈಪೋಟಿಯ ಮಧ್ಯೆಯೂ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ರಾಜ್ಯದ ಪ್ರಮುಖ 10 ಅರ್ಬನ್‌ ಬ್ಯಾಂಕ್‌ಗಳಲ್ಲಿ ಜಮಖಂಡಿಯ ಬ್ಯಾಂಕ್‌ ಕೂಡ ಒಂದಾಗಿದೆ ಎಂದು ಹೇಳಿದರು.

ನಿರ್ದೇಶಕರಾದ ಗುರುಲಿಂಗಪ್ಪ ನ್ಯಾಮಗೌಡ, ಫಕ್ಕೀರಸಾಬ ಬಾಗವಾನ, ಕಾಡಪ್ಪಮಾಳಿ, ವಿರುಪಾಕ್ಷಯ್ಯ ಕಂಬಿ, ಅಪ್ಪಾಸಾಬ ಮನಗೂಳಿ, ಅಪ್ಪಾಸಾಹೇಬ ಸಿಂಧೇ, ದರೆಪ್ಪತೇಲಿ, ಬಸವರಾಜ ಕಲೂತಿ, ಬಸವರಾಜ ಮಠಪತಿ, ಕಿರಣ ಪಿಸಾಳೆ, ಪ್ರಭುಲಿಂಗ ಜನವಾಡ, ನಂದೆಪ್ಪ ತಳವಾರ, ವೈಶಾಲಿ ಗೊಂದಿ, ಶೋಭಾ ಅರಕೇರಿ, ವೇದಿಕೆಯಲ್ಲಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ