ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪ್ಲಾಸ್ಟಿಕ್ ಬಳಕೆಯ ನಂತರ ಹೊರಸೂಸುವ ತ್ಯಾಜ್ಯ ವಾಯು ಮಂಡಲದಲ್ಲಿ ಬಿಸಿನಾಲ್ ಎ, ಥಾಲೆಗಳು, ಆಂಟಿಮಿನಿಟ್ರಾಕ್ಸೈಡ್, ಪಾಲಿ ಫ್ಲೋರಿನೇಟೆಡ್ ಮತ್ತು ಸೀಸ್ ನಂತಹ ರಾಸಾಯನಿಕಗಳಿಂದ ಜೀವರಾಶಿಗಳ ಮೇಲೆ ವಿವಿಧ ಬಗೆಯಲ್ಲಿ ಪರಿಣಾಮ ಬೀರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನಗಳಿಂದ ಧೃಡ ಪಟ್ಟಿದೆ ಎಂದು ಯು.ಎಂ.ಎ ಅಂತಾರಾಷ್ಟ್ರೀಯ ಸಂಸ್ಥೆಯ ಸದಸ್ಯ ಫ್ರಾನ್ಸ್ ದೇಶದ ಸೊರೇನ್ ಎಚ್ಚರಿಕೆ ನೀಡಿದರು.ಪಟ್ಟಣದ ಕೆಎಲ್‌ಇ ಶಿಕ್ಷಣ ಸಂಸ್ಥೆ, ಕೆಜೆ ಸೋಮಯ್ಯ ಶಿಕ್ಷಣ ಸಂಸ್ಥೆ, ಸರ್ಕಾರಿ ಪ್ರೌಢಶಾಲೆ ಮತ್ತು ಪೌರಾಡಳಿತ ಇಲಾಖೆಗಳ ಸಹಯೋಗದಲ್ಲಿ ಮತ್ತು ಜತ್ತಿ ಫೌಂಡೇಷನ್ ವಿದ್ಯಾ ದೇಗುಲ ಪ್ರೊಜೆಕ್ಟ್ ಅಡಿಯಲ್ಲಿ ಬುಧವಾರ ಪ್ಲಾಸ್ಟಿಕ್ ಚೀಲಗಳ ನಿಷೇಧ ದಿನ ಮತ್ತು ಪ್ಲಾಸ್ಟಿಕ್ ಮುಕ್ತ ವಿಶ್ವ ಅಂಗವಾಗಿ ಫ್ಲಾಗೋತ್ಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ 150ಕ್ಕಿಂತ ಹೆಚ್ಚಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮತ್ತು ಪ್ರಾನ್ಸ್ ದೇಶದ ಎಂಟು ಜನರ ನಿಯೋಗ ಹಲವು ತಂಡಗಳನ್ನು ರಚಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶೇಖರಿಸಿ ನಂತರ ಕೆ.ಎಲ್.ಇ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಹೊರಸೂಸುವ ರಾಸಾಯನಿಕಗಳಿಂದ ವಾಯುಮಂಡಲ ಕಲುಷಿತಗೊಂಡು ಎಲುಬುಗಳಿಗೆ ಹಾನಿ, ಕ್ಯಾನ್ಸರ್, ಕಣ್ಣುಗಳಿಗೆ, ಚರ್ಮದ ಮೇಲೆ, ಉಸಿರಾಟಕ್ಕೆ, ತಲೆ ನೋವಿಗೆ, ದೇಹಕ್ಕೆ ಆಯಾಸ, ಬಂಜೆತನ ಹಾಗೂ ಪುರುಷತ್ವದ ಮೇಲೆ ಗಾಢ ಪ್ರಭಾವ ಬೀರುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಪರಿಸರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಉತ್ತಮ ಆರೋಗ್ಯ ಕಾಯ್ದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಜತ್ತಿ ಫೌಂಡೇಷನ್‌ನ ಧೃವ ಜತ್ತಿ ಮಾತನಾಡಿ, ನೀರಿನ ಮೂಲಗಳು, ನದಿ, ಹಳ್ಳ-ಕೊಳ್ಳಗಳು, ಸಸ್ಯ ರಾಶಿ ಹಾಗೂ ಕೃಷಿ ಭೂಮಿಗಳು ಹದಗೆಟ್ಟು ಹೋಗುತ್ತಿವೆ. ಅಲ್ಲದೆ 2050ರ ಹೊತ್ತಿಗೆ ಸಮುದ್ರದಲ್ಲಿಯ ಒಟ್ಟಾರೆ ಮೀನುಗಳಿಗಿಂತ ಪ್ಲಾಸ್ಟಿಕ್ ತ್ಯಾಜ್ಯವೇ ತುಂಬಿ ಸಮುದ್ರ ಜೀವಿಗಳಿಗೆ ಕಂಟಕ ಪ್ರಾಯವಾಗಲಿದೆ. ನಾವು ಈಗಿನಿಂದಲೇ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಮುಕ್ತಕ್ಕಾಗಿ ಜಾಗೃತಿ ಅಭಿಯಾನ ಆರಂಭಿಸಬೇಕು. ಇದರಿಂದ ಭವಿಷ್ಯದಲ್ಲಿ ನೆಮ್ಮದಿ ಸಿಗಲಿದೆ, ಇಲ್ಲವಾದಲ್ಲಿ ಮುಂದಿನ ಪೀಳಿಗೆಯು ಘೋರ ಪರಿಣಾಮ ಎದುರಿಸಿ ನಮ್ಮನ್ನು ಶಪಿಸುವಂತಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಪ್ರಾನ್ಸ್ ದೇಶದ ಸೊರೇನ್, ಲಾರಾ, ಇನೇಜ್, ಇಜಿಯಾ, ಇಲಿಯಾನ್, ಕ್ವಿಗೋ ಲೊರೆಂಜೋ ಮತ್ತು ಪದ್ಮಶ್ರೀ ಸ್ವಪ್ನ ಅನಿಗೋಳ, ಶಿವಲಿಂಗಪ್ಪ ಜುಟ್ನಟ್ಟಿ, ಸದಾಶಿವ ಕವಟಗಿ, ಸುರೇಶ್ ಮತ್ತು ತನುಜಾ ಬಾಡಗಿ, ಜತ್ತಿ ಫೌಂಡೇಷನ್ ಗೋಪಾಲ ಕರೆಪ್ಪನ್ನವರ, ವಿಜಯ ಬಿರಾದಾರ, ಶಶಿಕಾಂತ ಖಂಡ್ರೆ, ಸುರೇಶ್ ಹಾಗೂ ಪ್ರಾಂಶುಪಾಲರಾದ ಕೆ.ಎಂ.ಅವರಾದಿ, ಉ.ಪ್ರಾಂಶುಪಾಲ ಬಸಪ್ಪ ಅರಕೇರಿ, ಪಿ.ಎಂ.ಪಡೆಸೂರ, ಪುರಸಭೆಯ ಎಸ್.ಎನ್.ಪಾಟೀಲ, ಮಹಾಲಿಂಗಪ್ಪ ಮುಗಳಖೋಡ, ರಾಜು ಹೂಗಾರ, ಸಿದ್ದು ಅಳ್ಳಿಮಟ್ಟಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.ಮಾರಕ ರಾಸಾಯನಿಕ ಪರಿಣಾಮ
-ದೀರ್ಘಕಾಲದ(20ವರ್ಷಗಳ) ವರೆಗೆ ಕಸ/ ಮಾರಕ ರಾಸಾಯನಿಕದಿಂದ ಜಾಗತಿಕ ತಾಪಮಾನ ಏರಿಕೆ.-ಮೈದಾನಗಳಲ್ಲಿನ ಹುಲ್ಲು ಮೇಯುವಾಗ ಪ್ಲಾಸ್ಟಿಕ್ ತಿಂದು ದಿನಕ್ಕೆ ವಿಶ್ವದಲ್ಲಿ 20 ಹಸುಗಳ ಸಾವು.
-ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ತಿಮಿಂಗಿಲು, ಆಮೆ, ಸೀಲ್ ಹಾಗೂ ವಿವಿಧ ಜಾತಿಯ ಪ್ರಾಣಿಗಳು ಸಾವು.-ದಿನಕ್ಕೆ ಸಾವಿರಾರು ಟನ್ ಪ್ಲಾಸ್ಟಿಕ್ ಉತ್ಪಾದನೆಯ ದುಷ್ಪರಿಣಾಮ ತಡೆಗೆ ದೇಶಗಳ ಕ್ರಮ ಅಗತ್ಯ.ಪ್ಲಾಸ್ಟಿಕ್‌ನಿಂದ ತಯಾರಾದ ವಸ್ತುಗಳಿಂದ ನೀರಿನ ಮೂಲಗಳು, ನದಿ, ಹಳ್ಳ-ಕೊಳ್ಳಗಳು, ಸಸ್ಯ ರಾಶಿ ಹಾಗೂ ಕೃಷಿ ಭೂಮಿಗಳು ಹದಗೆಟ್ಟು ಹೋಗುತ್ತಿವೆ. ಅಲ್ಲದೆ 2050ರ ಹೊತ್ತಿಗೆ ಸಮುದ್ರದಲ್ಲಿಯ ಒಟ್ಟಾರೆ ಮೀನುಗಳಿಗಿಂತ ಪ್ಲಾಸ್ಟಿಕ್ ತ್ಯಾಜ್ಯವೇ ತುಂಬಿ ಸಮುದ್ರ ಜೀವಿಗಳಿಗೆ ಕಂಟಕ ಪ್ರಾಯವಾಗಲಿದೆ. ನಾವು ಈಗಿನಿಂದಲೇ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಮುಕ್ತಕ್ಕಾಗಿ ಜಾಗೃತಿ ಅಭಿಯಾನ ಆರಂಭಿಸಬೇಕು.-ಧೃವ ಜತ್ತಿ, ಜತ್ತಿ ಫೌಂಡೇಷನ್ ಸದಸ್ಯ.