ಕನ್ನಡಪ್ರಭ ವಾರ್ತೆ ಮೇಲುಕೋಟೆಐತಿಹಾಸಿಕ ಶ್ರೀಚೆಲುವನಾರಾಯಣಸ್ವಾಮಿ ವೈರಮುಡಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.16 ರಂದು ವಿವಿಧ ಪೂಜಾ ಮಹೋತ್ಸವಗಳಿಗೆ ಚಾಲನೆ ದೊರೆಯಲಿದೆ.
ಮಾ.16 ರಂದು ಅಂಕುರಾರ್ಪಣದೊಂದಿಗೆ ಆರಂಭವಾಗಿ ಮಾರ್ಚ್ 28 ರ ಶೇರ್ತಿಸೇವೆಯವರೆಗೆ 13 ದಿನಗಳ ಕಾಲ ನಡೆಯಲಿದೆ. ಬ್ರಹ್ಮೋತ್ಸವದಲ್ಲಿ ಮಾ.17 ರಂದು ಸಂಜೆ 5 ಗಂಟೆಗೆ ಕಲ್ಯಾಣಿಯ ಧಾರಾಮಂಟಪದಲ್ಲಿ ಕಲ್ಯಾಣೋತ್ಸವ, ಮಾ.18 ರಂದು ಬೆಳಗ್ಗೆ 9 ಗಂಟೆಗೆ ದ್ವಜಾರೋಹಣ, ಮಾ.19 ರಂದು ರಾಮಾನುಜಾಚಾರ್ಯರಿಗೆ ಅಭಿಷೇಕ. ಮಾ.20 ರಂದು ಸಂಜೆ ಕಲ್ಯಾಣಿಯಲ್ಲಿ ನಾಗವಲ್ಲೀ ಮಹೋತ್ಸವ, ಮಾ.22 ರ ಪ್ರಹ್ಮಾದ ಪರಿಪಾಲನೋತ್ಸವ,, ಮಾ.23 ರಂದು ರಾತ್ರಿ ಗಜೇಂದ್ರಮೋಕ್ಷ ಉತ್ಸವ, ಮಾ.24 ರಂದು ನಡೆಯುವ ಮಹಾರಥೋತ್ಸವ, 25 ರಂದು ರಾತ್ರಿ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವ, 26 ರಂದು ಬೆಳಗ್ಗೆ 11 ಗಂಟೆಗೆ ತೀರ್ಥಸ್ನಾನ ಸಂಜೆ 5 ಗಂಟೆಗೆ ನಡೆಯುವ ಪಟ್ಟಾಭಿಷೇಕ ಮಹೋತ್ಸವಗಳು ಅತ್ಯಂತ ಪ್ರಮುಖ ಉತ್ಸವಗಳು, ಮಾ.27 ರಂದು ಮಹಾಭಿಷೇಕ ಮಹೋತ್ಸವಗಳು ಜರುಗಲಿದೆ.ವಿಶೇಷ ಉತ್ಸವಗಳ ಜೊತೆಗೆ ವಾಹನೋತ್ಸವಗಳು ಸಹ ಚೆಲುವನಾರಾಯಣನಿಗೆ ನೆರವೇಲಿವೆ. ವಾಹನೋತ್ಸವಗಳು ಪ್ರತಿದಿನ ರಾತ್ರಿ ನಡೆಯಲಿವೆ. ಮಾ.18 ರಂದು ಹಂಸವಾಹನ, ಮಾ.19 ಶೇಷವಾಹನ, ಮಾ.20 ಚಂದ್ರಮಂಡಲವಾಹನ, ಮಾ.22ರಂದು ಗರುಡವಾಹನ, ಮಾ.23ರಂದು ಗಜ ಮತ್ತು ಅಶ್ವವಾಹನ, ಮಾ.24ರಂದು ರಾತ್ರಿ ಬಂಗಾರದಪಲ್ಲಕ್ಕಿ, ಮಾ.25 ರಂದು ಅಶ್ವವಾಹನೋತ್ಸವ, ಮಾ.26 ಪುಷ್ಪಮಂಟಪವಾಹನ, ಮಾ27 ಹಮುಮಂತವಾಹನೋತ್ಸವಗಳು ನಡೆಯಲಿದೆ.
ಮಾ.21 ರಂದು ವೈರಮುಡಿ ಉತ್ಸವ:10 ದಿನಗಳ ಬ್ರಹ್ಮೋತ್ಸವದಲ್ಲಿ 4ನೇ ತಿರುನಾಳ್ ದಿನವಾದ ಮಾ.21 ರ ಗುರುವಾರ ರಾತ್ರಿ ಶ್ರೀದೇವಿ ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣನ ವೈರಮುಡಿ ಉತ್ಸವ ರಾತ್ರಿ 8 ಗಂಟೆಗೆ ಮಹಾಮಂಗಳಾರತಿಯೊಂದಿಗೆ ಆರಂಭವಾಗಲಿದೆ. ತಡರಾತ್ರಿ3 ಗಂಟೆವೇಳೆಗೆ ವೈರಮುಡಿ ಉತ್ಸವ ಮುಗಿದ ತಕ್ಷಣ ಸ್ವಾಮಿಗೆ ವಜ್ರಖಚಿತ ರಾಜಮುಡಿ ಉತ್ಸವ ನೆರವೇರಲಿದೆ. ಒಂದೇ ರಾತ್ರಿ 2 ವಜ್ರಖಚಿತ ಕಿರೀಟ ತೊಂಡಿಸುವ ಸಂಪ್ರದಾಯ ಮೇಲುಕೋಟೆಯಲ್ಲಿ ಮಾತ್ರ ಆಚರಣೆಯಲ್ಲಿದ್ದು ರಾಜ್ಯ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಮಾರ್ಚ್ 21 ಬೆಳಗ್ಗೆ 7.30 ಮಂಡ್ಯ ಲಕ್ಷ್ಮೀಜನಾರ್ಧನ ದೇವಸ್ಥಾನದಲ್ಲಿ ವೈರಮುಡಿ ರಾಜಮುಡಿ ಕಿರೀಟಗಳಿಗೆ ಪ್ರಥಮಪೂಜೆ ದಾರಿಯುದ್ದಕ್ಕೂ ವಿವಿಧ ಹಳ್ಳಿಗಳಲ್ಲಿ ಪೂಜೆ ನಡೆದ ನಂತರ 5.30ಕ್ಕೆ ಕಿರೀಟಗಳು ಮೇಲುಕೋಟೆ ತಲುಪಲಿದೆ. ಅಲ್ಲಿಂದ ಚಿನ್ನದ ಪಲ್ಲಕ್ಕಿಯಲ್ಲಿ ತಿರುವಾಭರಣಪೆಟ್ಟಿಗೆಗಳ ಮೆರವಣಿಗೆ ಆದಿಚುಂಚನಗಿರಿ ನಿರ್ಮಲಾನಂದ ಕಿರೀಟಗಳಿಗೆ ಶ್ರೀಗಳಿಂದ ಪೂಜೆ ಪೇಟೆ ಆಂಜನೇಯ ಸನ್ನಿಧಿಬಳಿ ಒಕ್ಕಲಿಗ ಜನಾಂಗದವರ ಪೂಜೆ ಮೇಲುಕೋಟೆ ಉತ್ಸವ ಬೀದಿ ಪ್ರದಕ್ಷಿಣೆಯ ನಂತರ ಯತಿರಾಜದಾಸರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಗುರುಪೀಠದ ಕೊನೆಯ ಪೀಠದ ಪೂಜೆ ನಂತರ ದೇಗುಲಪ್ರವೇಶಿಸುವ ಕಿರೀಟಗಳ ಪೈಕಿ ರಾಜಮುಡಿ ಕಿರೀಟ ಮತ್ತು ಆಭರಣಗಳ ಪರಿಶೀಲನೆ ನಂತರ ಗರುಡದೇವನ ಉತ್ಸವ ರಾತ್ರಿ 8ಕ್ಕೆ ಮಹಾ ಮಂಗಳಾರತಿ ವೈರಮುಡಿ ಉತ್ಸವಕ್ಕೆ ಚಾಲನೆ ದೊರೆಯಲಿದೆ.ವೈರಮುಡಿ ಉತ್ಸವದ ಅಂಗವಾಗಿ ಮೇಲುಕೋಟೆಗೆ ಆಕರ್ಷಕ ದೀಪಾಲಂಕಾರ, ಸ್ವಾಮಿ ಉತ್ಸವಕ್ಕೆ ವಿಶೇಷ ತೋಮಾಲೆಗಳ ಅಲಂಕಾರ, ಮೈಸೂರು, ಬೆಂಗಳೂರು, ಮಂಡ್ಯ ಹಾಸನ ಚನ್ನರಾಯಪಟ್ಟಣ ನಾಗಮಂಗಲ ಮುಂತಾದ ಸ್ಥಳಗಳಿಂದ ವಿಶೇಷಬಸ್ ಸೌಕರ್ಯ, ಸುಜ್ಜಿತ ವೈಧ್ಯಕೀಯ ಸೇವೆ, ನಿರಂತರ ಸ್ವಚ್ಚತೆ ಶುದ್ಧಕುಡಿಯುವ ನೀರಿನ ಪೂರೈಕೆ, ವೈರಮುಡಿ, ರಥೋತ್ಸವ ನಾಗವಲ್ಲೀ ಉತ್ಸವಗಳಂದು ದೇವಾಲಯದ ಆವರಣಗಳಿಗೆ ಪುಷ್ಪಾಲಂಕಾರ, ಪ್ರತಿ ಉತ್ಸವ ಹಾಗೂ ವಾಹನೋತ್ಸವಗಳಿಗೆ ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜನೆ ಹಾಗೂ ಎಸ್.ಎಸ್ ಐ.ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ "ನಾದೋಪಾಸನ ಸೇವೆ " ಮಂಗಳವಾದ್ಯ ನಿಯೋಜನೆ ಇರಲಿದೆ.