ಬಳ್ಳಾರಿ: ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಗೆ ಮುಂದಿನ ಮೂರು ವರ್ಷದ ಅವಧಿಗೆ ಜರುಗಿದ ಚುನಾವಣೆಯಲ್ಲಿ ಯುವಕ ವೃಂದದ 16 ಜನರು ಗೆಲುವು ಸಾಧಿಸುವ ಮೂಲಕ ಸಂಘದ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.
ಹಿರಿಯರ ತಂಡದ 13 ಜನರು ಗೆಲುವು ಪಡೆದಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೀರಶೈವ ಕಾಲೇಜಿನ ಮಾಜಿ ಆಡಳಿತ ಮಂಡಳಿ ಅಧ್ಯಕ್ಷ ದರೂರು ಶಾಂತನಗೌಡ ಜಯಗಳಿಸಿ ಗಮನ ಸೆಳೆದಿದ್ದಾರೆ.ಇಲ್ಲಿನ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಚುನಾವಣೆ ಪ್ರಕ್ರಿಯೆ ನಡೆದು, ಸೋಮವಾರ ಮತ ಎಣಿಕೆ ಕಾರ್ಯ ನಡೆಯಿತು. ಸಂಜೆ ಫಲಿತಾಂಶ ಬರುವವರೆಗೆ ತೀವ್ರ ಕುತೂಹಲಕ್ಕೆಡೆ ಮಾಡಿತ್ತು. ಕೊನೆಯಲ್ಲಿ ಯುವಕ ವೃಂದದ ಅಭ್ಯರ್ಥಿಗಳು ಹಿರಿಯರ ತಂಡಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದರು.ಈ ಬಾರಿ ಸಂಘದ ಅಧಿಕಾರ ಗದ್ದುಗೆ ಹಿಡಿಯಲು ಹಿರಿಯರ ತಂಡ ಹಾಗೂ ಯುವಕ ವೃಂದದ ನಡುವೆ ತೀವ್ರ ಪೈಪೋಟಿಯಿತ್ತು. ಬಿಸಿಲಿನ ತೀವ್ರ ತಾಪಮಾನದ ನಡುವೆ ಚುನಾವಣೆ ಅಖಾಡದಲ್ಲಿದ್ದವರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಕಳೆದ ಒಂದೂವರೆ ತಿಂಗಳ ಹಿಂದೆಯೇ ಚುನಾವಣೆ ಸಿದ್ಧತೆ ಮಾಡಿಕೊಂಡು ಮತದಾರರನ್ನು ಭೇಟಿ ಮಾಡುವ ಪ್ರಕ್ರಿಯೆ ಶುರುವಾಗಿತ್ತು.ಸೋಲುಂಡ ಪ್ರಮುಖರು: ಹಿರಿಯ ವಕೀಲ ಪಾಟೀಲ್ ಸಿದ್ಧಾರೆಡ್ಡಿ, ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರ, ಕೇಣಿ ಬಸಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ, ಪತ್ರಕರ್ತ ಎನ್.ವೀರಭದ್ರಗೌಡ, ಎಎಸ್‌ಎಂ ಕಾಲೇಜಿನ ಮಾಜಿ ಆಡಳಿತ ಮಂಡಳಿ ಅಧ್ಯಕ್ಷೆ ಕುಪ್ಪಗಲ್ ಗಿರಿಜಮ್ಮ, ಹೂವಿನಹಡಗಲಿ ತಾಪಂ ಮಾಜಿ ಅಧ್ಯಕ್ಷ ಐಗೋಳು ಚಿದಾನಂದಪ್ಪ.ಚುನಾವಣೆ ಗೆಲುವು ಸಾಧಿಸಿದವರು- ಪಡೆದ ಮತಗಳು: (ನಗರ ಅಭ್ಯರ್ಥಿಗಳು)1) ಡಾ.ಭಾಗ್ಯಲಕ್ಷ್ಮಿ (1223 ಮತಗಳು) 2) ಎಲ್.ಟಿ.ಶೇಖರ್ (1131)3) ಅಲ್ಲಂ ಗುರುಬಸವರಾಜ್ (1063)
4)ಎಸ್.ಮಲ್ಲನಗೌಡ (1039)5) ಡಾ.ಕಣೇಕಲ್ ಮಹಾಂತೇಶ್ (1019)
6) ಬೈಲುವದ್ದಿಗೇರಿ ಎರಿಸ್ವಾಮಿ ( 959)7) ಕೋರಿ ವಿರುಪಾಕ್ಷಪ್ಪ ( 917)
8) ಕೆರೆನಹಳ್ಳಿ ಚಂದ್ರಶೇಖರ್ (908)9) ಡಾ.ಅರವಿಂದ ಪಾಟೀಲ್ (869)
10) ಎಸ್.ಸತೀಶ್ ಬಾಬು (838)11) ಮುಂಡಾಸದ ಚನ್ನಬಸವರಾಜ್ (834)
12) ಅಲ್ಲಂ ಪ್ರಮೋದ್ (820)13) ಜಾನೆಕುಂಟೆ ಬಸವರಾಜ್ (803)
14) ಎಂ.ಕ್ಯಾತ್ಯಾಯಿನಿ ಮರಿದೇವಯ್ಯ (788)15) ಬಿ.ತಿಮ್ಮನಗೌಡ ಪಾಟೀಲ್ (781)
16) ದರೂರು ಶಾಂತನಗೌಡ (752)ನಗರೇತರ ಅಭ್ಯರ್ಥಿಗಳು1) ಪಲ್ಲೇದ ಪ್ರಭುಲಿಂಗ (1033)
2) ಟಿ.ಕೊಟ್ರಪ್ಪ (932)3) ಕಲ್ಗುಡಿ ಮಂಜುನಾಥ (927)4) ಜಾಲಿ ಪ್ರಕಾಶ್ (909)5) ಎನ್.ಮಲ್ಲಿಕಾರ್ಜುನ (859)6) ಎನ್.ರುದ್ರಗೌಡ (856)7) ಕೆ.ಕೊಟ್ರೇಶ್ವರ (825)8) ಕರಿಬಸವರಾಜ ಬಾದಾಮಿ (824)9) ಟಿ.ನರೇಂದ್ರ ಬಾಬು (802)10) ಶರಣಬಸವನಗೌಡ (787)11) ಮೇಟಿ ಪಂಪನಗೌಡ (774)12) ಏಳುಬೆಂಚೆ ರಾಜಶೇಖರ (767)13) ಗುಡೇಕೋಟೆ ನಾಗರಾಜ್ (767)14) ಸಿ.ಮೋಹನ ರೆಡ್ಡಿ (760)