ಇಂದು ಪ್ರಧಾನಿ ಭೇಟಿ: ವಾಹನ ಸಂಚಾರ ಮಾರ್ಗ ಬದಲಾವಣೆ

KannadaprabhaNewsNetwork | Published : Mar 18, 2024 1:48 AM

ಸಾರಾಂಶ

ಶಿವಮೊಗ್ಗ ನಗರಕ್ಕೆ ಸೋಮವಾರ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರಧಾನಿ ಮೋದಿ ಅವರ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆ ಇದೆ. ಟ್ರಾಫಿಕ್‌ ಜಾಮ್‌ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಮಾರ್ಗ ಬದಲಾವಣೆ ಹಾಗೂ ಶೂನ್ಯ ಸಂಚಾರ ಹಾಗೂ ವಾಹನ ನಿಲುಗಡೆ ನಿಷೇಧ ಸಂಬಂಧ ಶಿವಮೊಗ್ಗ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕನ್ನಪ್ರಭ ವಾರ್ತೆ ಶಿವಮೊಗ್ಗ

ನಗರಕ್ಕೆ ಸೋಮವಾರ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರಧಾನಿ ಮೋದಿ ಅವರ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆ ಇದೆ. ಟ್ರಾಫಿಕ್‌ ಜಾಮ್‌ ಆಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಮಾರ್ಗ ಬದಲಾವಣೆ ಹಾಗೂ ಶೂನ್ಯ ಸಂಚಾರ ಹಾಗೂ ವಾಹನ ನಿಲುಗಡೆ ನಿಷೇಧ ಸಂಬಂಧ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಶೂನ್ಯ ಸಂಚಾರ:

ಮಾ.18ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಶೂನ್ಯ ಸಂಚಾರವು ಸೋಗಾನೆ ವಿಮಾನ ನಿಲ್ದಾಣದಿಂದ ಎಂಆರ್‌ಎಸ್ ಸರ್ಕಲ್ -ಶಂಕರಮಠ ಸರ್ಕಲ್ ಕರ್ನಾಟಕ ಸಂಘ- ಶಿವಪ್ಪ ನಾಯಕ ಸರ್ಕಲ್ ಎಎ ಸರ್ಕಲ್- ಅಶೋಕ ಸರ್ಕಲ್- ಹೆಲಿಪ್ಯಾಡ್‌ ಸರ್ಕಲ್‌ವರೆಗೆ ಇರಲಿದೆ.

ಹೆಲಿಪ್ಯಾಡ್ ಸರ್ಕಲ್‌ನಿಂದ ಕುವೆಂಪು ರಸ್ತೆ ಮಾರ್ಗವಾಗಿ ನಂದಿ ಪೆಟ್ರೋಲ್ ಬಂಕ್ ಕ್ರಾಸ್, ವಿನೋಬನಗರ 60 ಅಡಿ ರಸ್ತೆ, ಸೈಕಲೋತ್ಸವ ಸರ್ಕಲ್, ರಾಜ್‌ಕುಮಾರ್ ಸರ್ಕಲ್‌ವರೆಗೆ. ಪೊಲೀಸ್ ಚೌಕಿಯಿಂದ ಉಷಾ ಸರ್ಕಲ್‌ವರೆಗೆ ಶೂನ್ಯ ಸಂಚಾರ. ಲಕ್ಷ್ಮೀ ಟಾಕೀಸ್ ಸರ್ಕಲ್‌ನಿಂದ ಜೈಲು ರಸ್ತೆ, ಕುವೆಂಪು ರಸ್ತೆ ಮಾರ್ಗವಾಗಿ ಸರ್ಕಲ್‌ವರಗೆ ಶೂನ್ಯ ಸಂಚಾರ ಇರಲಿದೆ.

ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ:

ಮಾ.18ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಎನ್‌.ಆರ್.ಪುರದಿಂದ ಭದ್ರಾವತಿ ಕಡೆಗೆ ಹೋಗುವ ವಾಹನಗಳು ಉಂಬೈಬೈಲು-ಹುಣಸೆಕಟ್ಟೆ ಜಂಕ್ಷನ್ ಮೂಲಕ ಭದ್ರಾವತಿಗೆ ಹೋಗುವುದು.

ಶಿಕಾರಿಪುರ, ಹೊನ್ನಾಳಿ ಮತ್ತು ದಾವಣಗೆರೆ ಕಡೆಗೆ ಎನ್‌.ಆರ್.ಪುರ ಕಡೆಗೆ ಹೋಗುವ ವಾಹನಗಳು ಎನ್.ಟಿ. ರಸ್ತೆ ಮೂಲಕ ಎನ್‌.ಆರ್.ಪುರಕ್ಕೆ ಹೋಗುವುದು.

ಎಂ.ಆರ್.ಎಸ್. ಸರ್ಕಲ್ ಕಡೆಯಿಂದ ಬಿ.ಎಚ್. ರಸ್ತೆಯ ಮಾರ್ಗವಾಗಿ ಬಸ್ ಸ್ಟ್ಯಾಂಡ್ ಮತ್ತು ಸಾಗರ ತೀರ್ಥಹಳ್ಳಿ, ಹೊಸನಗರ ಕಡೆಗೆ ಹೋಗುವ ದ್ವಿಚಕ್ರ, ನಾಲ್ಕು ಚಕ್ರ ಮತ್ತು ಎಲ್ಲ ರೀತಿಯ ವಾಹನಗಳು ಎಂ.ಆರ್.ಎಸ್.ನಿಂದ ಬೈಪಾಸ್ ಮಾರ್ಗವಾಗಿ ಸಂದೇಶ್ ಮೋಟಾರ್ಸ್ ಸರ್ಕಲ್- ಮಂಡ್ಲಿ ಸರ್ಕಲ್ - ಗೋಪಾಳ- ಆಲ್ಕೊಳ ಸರ್ಕಲ್ ಮಾರ್ಗವಾಗಿ ಸಂಚರಿಸಬೇಕು.

ಭದ್ರಾವತಿ, ಬೆಂಗಳೂರು ಕಡೆಗೆ ಹೋಗುವ ದ್ವಿಚಕ್ರ, ನಾಲ್ಕು ಚಕ್ರ ಮತ್ತು ಎಲ್ಲ ರೀತಿಯ ವಾಹನಗಳು ಆಲ್ಕೊಳ ಸರ್ಕಲ್- ಗೋಪಾಳ- ಮಂಡ್ಲಿ ಸರ್ಕಲ್ -ಸಂದೇಶ್ ಮೋಟಾರ್ಸ್ ಸರ್ಕಲ್- ಬೈಪಾಸ್ ಮಾರ್ಗವಾಗಿ ಸಾಗಬೇಕು.

ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ಆಲ್ಕೊಳ ಸರ್ಕಲ್- ಗೋಪಾಳ ಸರ್ಕಲ್- ನ್ಯೂ ಮಂಡ್ಲಿ- ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿಗೆ ರಸ್ತೆಗೆ ಸೇರುವುದು.

ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು: ನ್ಯೂಮಂಡ್ಲಿ ಸರ್ಕಲ್- ಗೋಪಾಳ ಸರ್ಕಲ್- ಆಲ್ಕೊಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಗೆ ಬಂದು ಸೇರುವುದು.

ಶಿವಮೊಗ್ಗ ದಿಂದ ಶಿಕಾರಿಪುರ, ನ್ಯಾಮತಿ ಸೊರಬ ಕಡೆ ಹೋಗುವ ಎಲ್ಲಾ ವಾಹನಗಳು ಆಯನೂರು- ಹಾರನಹಳ್ಳಿ-ಸವಳಂಗ ಮಾರ್ಗವಾಗಿ ಚಲಿಸುವುದು.

ಶಿಕಾರಿಪುರ ನ್ಯಾಮತಿ ಸೊರಬ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಎಲ್ಲಾ ವಾಹನಗಳು ಸವಳಂಗ- ಹಾರನಹಳ್ಳಿ- ಆಯನೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಬರುವುದು.

ಶಿವಮೊಗ್ಗ ನಗರದಿಂದ ಅಬ್ಬಲಗೆರೆ ಕೊಮ್ಮನಾಳ್ ಕುಂಚೇನಹಳ್ಳಿ ತಾಂಡಗಳಿಗೆ ಹೋಗುವ ಎಲ್ಲ ವಾಹನಗಳು ರಾಗಿಗುಡ್ಡ -ಕುವೆಂಪು ನಗರದ ಮುಖಾಂತರ ಚಲಿಸುವುದು.

ಅಬ್ಬಲಗೆರೆ ಕೊಮ್ಮನಾಳ್- ಕುಂಚೇನಹಳ್ಳಿ- ತಾಂಡಗಳಿಂದ ಶಿವಮೊಗ್ಗ ನಗರಕ್ಕೆ ಬರುವ ಎಲ್ಲ ವಾಹನಗಳು ಕುವೆಂಪು ನಗರ- ರಾಗಿಗುಡ್ಡ- ಸಂಗೊಳ್ಳಿ ರಾಯಣ್ಣ ಸರ್ಕಲ್ ಮುಖಾಂತರ ಚಲಿಸುವುದು.

ಕುವೆಂಪು ರಸ್ತೆಯ ಮಾರ್ಗವಾಗಿ ಬಸ್ ನಿಲ್ದಾಣದ ಕಡೆಗೆ ಅಥವಾ ಹೆಲಿಪ್ಯಾಡ್ ಸರ್ಕಲ್ ಕಡೆಗೆ ಸಂಚರಿಸುವ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಸವಾರರು ಜೈಲು ಸರ್ಕಲ್ ನಿಂದ ಎಡಕ್ಕೆ ತಿರುಗಿ, ಶಿವಮೊಗ್ಗ ಆಪ್ಟಿಕಲ್ಸ್ ಗೌರವ ಲಾಡ್ಜ್ ಸರ್ಕಲ್ ನಿಂದ ಬಲಕ್ಕೆ ತಿರುಗಿ ಬಸ್‌ ಸ್ಟ್ಯಾಂಡ್‌ಗೆ ಬಂದು ಸೇರಬೇಕು.

ಹೆಲಿಪ್ಯಾಡ್ ಸರ್ಕಲ್ ಕಡೆಯಿಂದ ಜೈಲು ಸರ್ಕಲ್, ಶಿವಮೂರ್ತಿ ಸರ್ಕಲ್ ಕಡೆಗೆ ಹೋಗುವ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ಸವಾರರು ಅಶೋಕ ಸರ್ಕಲ್ ಮೂಲಕ ಬಿ.ಎಚ್. ರಸ್ತೆ ಗುಜರಿ ಕ್ರಾಸ್‌ನಲ್ಲಿ (ವಿನಾಯಕ ಟಾಕೀಸ್ ಪಕ್ಕದ ರಸ್ತೆಯಲ್ಲಿ) ಎಡಕ್ಕೆ ತಿರುಗಿ ಗೌರವ ಲಾಡ್ಜ್ ಸರ್ಕಲ್ ಮಾರ್ಗವಾಗಿ ಜೈಲ್ ಸರ್ಕಲ್ ತಲುಪುವುದು.

ಪೊಲೀಸ್ ಚೌಕಿಯಿಂದ ಬಸ್ ಸ್ಟ್ಯಾಂಡ್ ಕಡೆಗೆ ಬರುವಂತಹ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಸವಾರರು ಪೊಲೀಸ್ ಚೌಕಿ - ಕರಿಯಣ್ಣ ಬಿಲ್ಡಿಂಗ್ - ಆಲ್ಕೊಳ ಸರ್ಕಲ್ -ಆಯನೂರು ಗೇಟ್ ಮಾರ್ಗವಾಗಿ ಬಸ್‌ ಸ್ಟ್ಯಾಂಡ್‌ ಬಂದು ಸೇರುವುದು.

ಲಕ್ಷ್ಮೀ ಟಾಕೀಸ್ ಸರ್ಕಲ್‌ನಿಂದ ಪೊಲೀಸ್ ಚೌಕಿ ಮಾರ್ಗವಾಗಿ ಬರುವ ದ್ವಿಚಕ್ರ ಮತ್ತು ನಾಲ್ಕ ಚಕ್ರಗಳ ವಾಹನ ಸವಾರರು ಶಿವಮೂರ್ತಿ ಸರ್ಕಲ್ ಮಾರ್ಗವಾಗಿ ಮಹಾವೀರ ಸರ್ಕಲ್ -ಗೋಪಿ ಸರ್ಕಲ್- ಎ.ಎ. ಸರ್ಕಲ್ ಮಾರ್ಗವಾಗಿ ಬಸ್‌ ಸ್ಟ್ಯಾಂಡ್‌ ಬಂದು ಸೇರುವುದು.

ವಾಹನ ನಿಲುಗಡೆ ನಿಷೇಧ:

ಹೆಲಿಪ್ಯಾಡ್ ಸರ್ಕಲ್‌ನಿಂದ ಕುವೆಂಪು ರಸ್ತೆ ಮಾರ್ಗವಾಗಿ ನಂದಿ ಪೆಟ್ರೋಲ್ ಬಂಕ್ ಕ್ರಾಸ್‌ನಿಂದ ವಿನೋಬನಗರ ಕೆಳದಿ ಚೆನ್ನಮ್ಮ ರಸ್ತೆ (60 ಅಡಿ ರಸ್ತೆ)- ಸೈಕಲೋತ್ಸವ ಸರ್ಕಲ್‌ನಿಂದ ವಿನೋಬನಗರ ಕೆಇಬಿ ಆಫೀಸ್‌ವರೆಗೆ ರಸ್ತೆಯ ಎರಡೂ ಬದಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ಹೆಲಿಪ್ಯಾಡ್ ಸರ್ಕಲ್‌ನಿಂದ ಕುವೆಂಪು ರಸ್ತೆಯ ಜೈಲ್ ಸರ್ಕಲ್‌ವರೆಗೆ ಹಾಗೂ ಜೈಲ್ ಸರ್ಕಲ್‌ನಿಂದ ಲಕ್ಷ್ಮೀ ಟಾಕೀಸ್‌ವರೆಗೆ ರಸ್ತೆಯ ಎರಡೂ ಬದಿ ವಾಹನಗಳ ನಿಲುಗಡೆ ನಿಷೇಧವಿದೆ.

ರಾಜ್‌ಕುಮಾರ್ ಸರ್ಕಲ್‌ನಿಂದ ಮೇದಾರಿ ಕೇರಿ ರಸ್ತೆ ಬೊಮ್ಮನಕಟ್ಟೆ ರೈಲ್ವೆ ಗೇಟ್‌ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧವಿದೆ.

ಪೊಲೀಸ್‌ ಚೌಕಿಯಿಂದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಶನೇಶ್ವರ ದೇವಸ್ಥಾನ ರಸ್ತೆ ಮಾರ್ಗವಾಗಿ ಬೊಮ್ಮನಕಟ್ಟೆ ರೈಲ್ವೆ ಗೇಟ್‌ಗೆ ಹೋಗುವ ರಸ್ತೆ ಎರಡೂ ಬದಿ ವಾಹನ ನಿಲುಗಡೆ ನಿಷೇಧ.

ಆಲ್ಕೊಳ ಸರ್ಕಲ್‌ನಿಂದ ಪೊಲೀಸ್ ಚೌಕಿ ಮಾರ್ಗವಾಗಿ ಉಷಾ ನರ್ಸಿಂಗ್‌ ಹೋಮ್‌ ಸರ್ಕಲ್‌ವರೆಗೆ ರಸ್ತೆಯ ಎರಡೂ ಬದಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ಸೋಗಾನೆ ವಿಮಾನ ನಿಲ್ದಾಣನಿಂದ ಎಂ.ಆರ್.ಎಸ್. ಸರ್ಕಲ್ - ವಿದ್ಯಾನಗರ- ಶಂಕರಪುರ ಸರ್ಕಲ್- ಕರ್ನಾಟಕ ಸಂಘ, ಶಿವಪ್ಪ ನಾಯಕ ಸರ್ಕಲ್- ಎ.ಎ. ಸರ್ಕಲ್- ಅಶೋಕ ಸರ್ಕಲ್‌- ಹೆಲಿಪ್ಯಾಡ್ ಸರ್ಕಲ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ನಿಷೇಧ ಇರಲಿದೆ.

Share this article