ವಿಜಯೇಂದ್ರ, ಆರ್‌.ಅಶೋಕ್‌ ನಾಳೆ ಅವಳಿ ತಾಲೂಕಿಗೆ ಭೇಟಿ

KannadaprabhaNewsNetwork |  
Published : Nov 29, 2023, 01:15 AM IST
ಹೊನ್ನಾಳಿ ಫೋಟೋ 28ಎಚ್‌.ಎಲ್.ಐ1. ಸವಳಂಗ ಗ್ರಾಮದ ಮಿಕ್ಕಿಮಾರಮ್ಮ ದೇವಸ್ಥಾನದಲ್ಲಿ ಮುಖಂಡರು,ಕಾರ್ಯಕರ್ತರ ಸಭೆ ನಡೆಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.      | Kannada Prabha

ಸಾರಾಂಶ

ಅದ್ಧೂರಿ ಸ್ವಾಗತ, 2 ಸಾವಿರ ಮಂದಿ ಭಾಗಿ ನಿರೀಕ್ಷೆ: ಮಾಜಿ ಸಚಿವ ರೇಣುಕಾಚಾರ್ಯ

ಅದ್ಧೂರಿ ಸ್ವಾಗತ, 2 ಸಾವಿರ ಮಂದಿ ಭಾಗಿ ನಿರೀಕ್ಷೆ: ಮಾಜಿ ಸಚಿವ ರೇಣುಕಾಚಾರ್ಯ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ನ.30ರಂದು ಬೆಳಗ್ಗೆ 9ಕ್ಕೆ ಸವಳಂಗ ಸರ್ಕಲ್ ಗೆ ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ಸವಳಂಗ ಗ್ರಾಮದ ಮಿಕ್ಕಿಮಾರಮ್ಮ ದೇವಸ್ಥಾನದಲ್ಲಿ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷ ಹಾಗೂ ಆರ್.ಅಶೋಕ್ ವಿಪಕ್ಷ ನಾಯಕರಾದ ಮೇಲೆ ಇದೇ ಮೊದಲ ಬಾರಿ ಹೊನ್ನಾಳಿ ನ್ಯಾಮತಿ ತಾಲೂಕಿಗೆ ಆಗಮಿಸುತ್ತಿದ್ದು ಅವರನ್ನು ಸವಳಂಗ ಸರ್ಕಲ್ ನಲ್ಲಿ ಬಿಜೆಪಿ ಹೊನ್ನಾಳಿ ಮಂಡಲ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಗುವುದು. ಅಂದು ಹೊನ್ನಾಳಿ ನ್ಯಾಮತಿ ತಾಲೂಕಿನ ಎರಡು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಅವಳಿ ತಾಲೂಕಿನಲ್ಲಿ ನೂತನ ರಾಜ್ಯಾಧ್ಯಕ್ಷರು ಹಾಗೂ ವಿಪಕ್ಷ ನಾಯಕರಿಗೆ ಬೃಹತ್ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಜಿ.ಪಂ.ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ಜಿಲ್ಲಾ ಪ್ರಧಾನಕಾರ್ಯದರ್ಶಿ ಅರಕೆರೆ ನಾಗರಾಜ್, ಮಾಜಿ ನಿರ್ದೇಶಕರಾದ ಶಿವು ಹುಡೇದ್, ಮಾರುತಿ ನಾಯ್ಕ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಗಿರೀಶ್ ಪಟೇಲ್, ಗ್ರಾ.ಪಂ.ಸದಸ್ಯರಾದ ಕೊಡತಾಳ್ ನಾಗರಾಜ್, ಗ್ರಾ.ಪಂ.ಅಧ್ಯಕ್ಷರಾದ ಗೋವಿಂದ್, ಸುರಹೊನ್ನೆ ಸದಣ್ಣ, ಮಾಜಿ ತಾ.ಪಂ.ಸದಸ್ಯ ಹನುಮಂತಪ್ಪ, ಸೋಗಿಲು ಮಂಜುನಾಥ್, ಸಂತೋಷ್, ಕಾಮೇಶ್ ನಾಯ್ಕ,ಬಿದರಹಳ್ಳಿ ಯೋಗೇಶ್, ಮಾದಾಪುರ ಮಂಜು ಪಾಟೀಲ್, ಸೇರಿ ಮತ್ತಿತತರಿದ್ದರು.

ವಿಪಕ್ಷ ನಾಯಕ ಆರ್.ಅಶೋಕ್ ಇಂದು ಬರ ಅಧ್ಯಯನ

ವಿಪಕ್ಷ ನಾಯಕ ಆರ್.ಅಶೋಕ್ 29ರಂದು (ಬುಧವಾರ) ಮಧ್ಯಾಹ್ನ 3 ಗಂಟೆಗೆ ಸವಳಂಗ ಸರ್ಕಲ್‍ನಿಂದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ