-ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
--ಕನ್ನಡಪ್ರಭ ವಾರ್ತೆ ಭದ್ರಾವತಿ
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿರುವ ಒಕ್ಕೂಟದ ಕೇಂದ್ರ ಕಾರ್ಯಾಲಯದಲ್ಲಿ ನಡೆಯಿತು.ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೆಕ್ಕಪತ್ರ, ವಾರ್ಷಿಕ ವರದಿ ಮಂಡಿಸಲಾಯಿತು. ಕಾರ್ಮಿಕರ ಕುಂದು ಕೊರತೆಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ನೂತನ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.
ರಾಜ್ಯಾಧ್ಯಕ್ಷರಾಗಿ ವಿ. ವಿನೋದ್ ಪುನರ್ ಆಯ್ಕೆಯಾಗಿದ್ದು, ರಾಜ್ಯ ಉಪಾಧ್ಯಕ್ಷರಾಗಿ ಸುರೇಶ್, ಶಿವಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ಪ, ಕಾರ್ಯದರ್ಶಿಯಾಗಿ ರಮೇಶ್, ಸಹ ಕಾರ್ಯದರ್ಶಿಯಾಗಿ ಆಶೀರ್ವಾದ, ಖಜಾಂಚಿಯಾಗಿ ಸುಶೀಲ ಮತ್ತು ನಿರ್ದೇಶಕರಾಗಿ ಶಶಿಕುಮಾರ್, ಪವಿತ್ರ, ವೆಂಕಟೇಶ್, ಮೋಹನ್, ಜಗನ್ನಾಥ್, ನೇತ್ರಾವತಿ, ಶೇಖರಪ್ಪ ಉಬ್ಳೆಬೈಲು, ಭಾಗ್ಯ, ಸಂದೇಶ ಪೈ, ಗೌರವ ಸಲಹೆಗಾರರಾಗಿ ಬಿ.ಆರ್ ಯಲ್ಲಪ್ಪ, ರಾಮಾಚಾರಿ ಹಾಗೂ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಮಂಜುನಾಥ್‌ರಾವ್, ಪ್ರ.ಕಾ ಸೆಂದಿಲ್‌ಕುಮಾರ್, ಭದ್ರಾವತಿ ತಾ.ಅಧ್ಯಕ್ಷರಾಗಿ ಅವಿನಾಶ್, ಉಪಾಧ್ಯಕ್ಷರಾಗಿ ತೇಜುನಾಯಕ್. ಭದ್ರಾವತಿ ಗ್ರಾಮಾಂತರ ಅಧ್ಯಕ್ಷರಾಗಿ ವಸಂತ್‌ರಾವ್, ಭದ್ರಾವತಿ ನಗರ ಅಧ್ಯಕ್ಷರಾಗಿ ಜಾರ್ಜ್ ಮಾರ್ಟಿನ್, ಭದ್ರಾವತಿ ತಾಲೂಕು ಮಹಿಳಾ ಅಧ್ಯಕ್ಷರಾಗಿ ಮಂಜುಳಾ ಸೇರಿದಂತೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಒಕ್ಕೂಟದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳಿಗೆ ಸಂವಿಧಾನದ ಪೀಠಿಕೆ ಬೋಧಿಸಲಾಯಿತು. ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಒಕ್ಕೂಟದ ಬೈಲಾ ನಿಯಮಗಳ ಓದಿ ತಿಳಿಸಿ ಪದಗ್ರಹಣ ಮಾಡಲಾಯಿತು. ನೇತ್ರಾವತಿ ಸ್ವಾಗತಿಸಿ, ಜಯಪ್ಪ ನಿರೂಪಿಸಿ, ಶಶಿಕುಮಾರ್ ವಂದಿಸಿದರು.
-----ಫೋಟೊ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಭದ್ರಾವತಿ ನಗರದ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿರುವ ಒಕ್ಕೂಟದ ಕೇಂದ್ರ ಕಾರ್ಯಾಲಯದಲ್ಲಿ ನಡೆಯಿತು.
ಡಿ೨೯-ಬಿಡಿವಿಟಿ೨