ವಿರಾಜಪೇಟೆ: ಎರಡು ದಿನಗಳ ಅಂತಾರಾಜ್ಯ ಚಿತ್ರಕಲಾ ಶಿಬಿರ ಸಂಪನ್ನ

KannadaprabhaNewsNetwork | Published : Dec 7, 2023 1:15 AM

ಸಾರಾಂಶ

ಸಾದೀಕ್ ಆರ್ಟ್ಸ ಲಿಂಕ್ ವಿರಾಜಪೇಟೆ ಮತ್ತು ಕೇರಳ ಚಿತ್ರಕಲಾ ಪರಿಷತ್ ಕಣ್ಣೂರು ಜಿಲ್ಲೆ ಅವುಗಳ ಸಂಯುಕ್ತಾಶ್ರಯದಲ್ಲಿ ವಿರಾಜಪೇಟೆ ತಾಲೂಕು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಎಡಮಕ್ಕಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ಕಲಾ ಉತ್ಸವ ಕೊಡಗು ಅಂಗವಾಗಿ ಆಯೋಜಿಸಲಾಗಿದ್ದ ಅಂತರ್ ರಾಜ್ಯ ಚಿತ್ರಕಲೆಗಾರರ ಚಿತ್ರಕಲಾ ಶಿಬಿರ

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕಲೆಯು ಚಿತ್ರಕಲಾವಿದನ ಸ್ಮೃತಿ ಪಟಲದಿಂದ ಐಕ್ಯವಾದ ವಸ್ತುಸ್ಥಿತಿಯನ್ನು ಚಿತ್ರಪರದೆಯ ಮೂಲಕ ಸಾಧರಪಡಿಸುವಂಥದ್ದು. ಸಮಾಜದ ಆಗುಹೋಗುಗಳನ್ನು ಚಿತ್ರಗಳ ಮೂಲಕ ಬಹಿರಂಗಪಡಿಸುವುದಾಗಿದೆ. ಕಲೆಯನ್ನು ಪ್ರೀತಿಸುವ ಆಸ್ವಾದಿಸುವ ಮನಸ್ಸುಗಳು ಜಗತ್ತಿನಲ್ಲಿ ಇಲ್ಲದಿರಲು ಅಸಾದ್ಯ ಎಂದು ವಿರಾಜಪೇಟೆ ತಾಲೂಕು ದಂಢಾಧಿಕಾರಿಗಳು ಮತ್ತು ತಹಸೀಲ್ದಾರ್ ಎಚ್.ಎನ್. ರಾಮಚಂದ್ರ ಅಭಿಪ್ರಾಯವ್ಯಕ್ತಪಡಿಸಿದರು.

ಸಾದೀಕ್ ಆರ್ಟ್ಸ ಲಿಂಕ್ ವಿರಾಜಪೇಟೆ ಮತ್ತು ಕೇರಳ ಚಿತ್ರಕಲಾ ಪರಿಷತ್ ಕಣ್ಣೂರು ಜಿಲ್ಲೆ ಅವುಗಳ ಸಂಯುಕ್ತಾಶ್ರಯದಲ್ಲಿ ವಿರಾಜಪೇಟೆ ತಾಲೂಕು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಎಡಮಕ್ಕಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ಕಲಾ ಉತ್ಸವ ಕೊಡಗು ಅಂಗವಾಗಿ ಆಯೋಜಿಸಲಾಗಿದ್ದ ಅಂತರ್ ರಾಜ್ಯ ಚಿತ್ರಕಲೆಗಾರರ ಚಿತ್ರಕಲಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲೆಯ ಮೂಲಕ ಸಂಸ್ಕೃತಿಯನ್ನು ಜೋಡಿಸುವ ಕಾರ್ಯಕ್ಕೆ ಮುಂದಾಗಿರುವ ಶಿಬಿರದ ಸಂಚಾಲಕರಾದ ಸಾದೀಕ್ ಮತ್ತು ಎಲ್ಲ ಅಂತರ್ ರಾಜ್ಯ ಚಿತ್ರಕಲಾವಿದರಿಗೆ ಜಿಲ್ಲೆ ಮತ್ತು ತಾಲೂಕು ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವಿರಾಜಪೇಟೆ ಪುರಸಭೆಯ ಸದಸ್ಯ ಮೊಹಮ್ಮದ್ ರಾಫಿ, ಸ್ಥಳೀಯ ಚಿತ್ರಕಲಾವಿದರಾದ ಸಾದೀಕ್ ಹಂಸ ಅವರು ಸತತ ಏಳು ವರ್ಷಗಳಿಂದ ಕಲಾ ಉತ್ಸವ ಕೊಡಗು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಪರಂಪರಿಕವಾಗಿ ಅರಳಿದ ನೈಜ ಕಲೆಯು ಶಾಶ್ವತವಾದುದು ಎಂದಿಗೂ ಬೆಲೆ ಕಟ್ಟಲಾಗದ ಅಮೂಲ್ಯವಾದ ವಸ್ತು. ಸರ್ಕಾರಗಳು ಮತ್ತು ಸಮಾಜಿಕ ಹಿತಚಿಂತಕರು ಚಿತ್ರಕಲೆಗಾರರನ್ನು ಪ್ರೋತ್ಸಾಹಿಸುವಂತಾಗಬೇಕು ಎಂದರು. ಕೇರಳ ಚಿತ್ರಕಲಾ ಪರಿಷತ್‌ನ ಕಣ್ಣೂರು ಜಿಲ್ಲ ಘಟಕದ ಅದ್ಯಕ್ಷ ಕರ್ನಲ್ ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇರಳ ರಾಜ್ಯ ಲಲಿತ ಕಲಾ ಆಕಾಡೆಮಿ ಸ್ಥಾಪನೆಯಾಗುವ ಮೊದಲೇ ಚಿತ್ರಕಲಾ ಪರಿಷತ್ ೧೯೫೭ ರಲ್ಲಿ ಸ್ಥಾಪನೆಯಾಗಿದೆ. ಸುಮಾರು ೪೦೦೦ ಕ್ಕಿಂತ ಅದಿಕ ಚಿತ್ರಕಲೆಗಾರರು ಸದಸ್ಯರಾಗಿರುತ್ತಾರೆ. ಕೊಡಗು ಮತ್ತು ಹತ್ತಿರದ ಕೇರಳ ರಾಜ್ಯಕ್ಕೆ ಅವಿನಭಾವ ಸಂಭಂದವಿದೆ. ಕರ್ನಾಟಕದ ರಾಜ್ಯದ ಕೊಡಗು ಜಿಲ್ಲೆಯು ಪ್ರಕೃತಿದತ್ತವಾಗಿದ್ದು. ಚಿತ್ರಕಲೆಗಾರರಿಗೆ ಇಲ್ಲಿ ಪೂರಕವಾದ ವಾತವರಣವಿದೆ. ಎರಡು ರಾಜ್ಯಗಳ ಸಂಸ್ಕೃತಿಯನ್ನು ಚಿತ್ರ ಕಲಾವಿದರ ಕುಂಚದಿಂದ ಸಮಾಜಕ್ಕೆ ತಿಳಿಯಪಡಿಸುವ ನಿಟ್ಟಿನಲ್ಲಿ ಎರಡು ರಾಜ್ಯಗಳ ಚಿತ್ರಕಲಾವಿದರ ಚಿತ್ರಕಲಾ ಶಿಬಿರವನ್ನು ಅಯೋಜಿಸಲಾಗಿದೆ. ಎಂದು ಹೇಳಿದರು. ಸಾದೀಕ್‌ ಹಂಸ ಮಾತನಾಡಿ, ಕಲಾ ಉತ್ಸವದ ಭಾಗವಾಗಿ ಪ್ರಥಮ ಬಾರಿಗೆ ಉಭಯ ರಾಜ್ಯಗಳ ಚಿತ್ರಕಲಾವಿದರಿಗೆ ಚಿತ್ರಕಲೆಯ ಮೂಲಕ ಸಂಸ್ಕೃತಿ ವಿನಿಮಯ ಶಿಬಿರವನ್ನುಆಯೋಜಿಸಲಾಗಿದೆ ಎಂದರು. ಎಲ್ಲ ಚಿತ್ರಕಲಾವಿದರಿಗೆ ಕ್ಯಾನ್ವಸ್ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಯಿತು. ಈ ಶಿಬಿರದಲ್ಲಿ ಕೇರಳ ರಾಜ್ಯದ ಹಾವ್ಯಸಿ, ರೇಖಾಚಿತ್ರ ನಿಪುಣರು, ಶಿಲ್ಪಕಲಾ ಕಲಾವಿದರು, ಪತ್ರಿಕೆ ಮತ್ತು ಕಾದಾಂಬರಿ ಪುಸ್ತಕಗಳಿಗೆ ಚಿತ್ರ ಸಂಯೋಜನೆ ಮಾಡುವ ಕಲಾವಿದರು, ದೇಶ ವಿದೇಶಗಳಲ್ಲಿ ಚಿತ್ರ ಕಲಾಶಿಬಿರದಲ್ಲಿ ಭಾಗವಹಿಸಿದವರು ಸೇರಿದಂತೆ ಒಟ್ಟು ೩೦ ಮಂದಿ ಚಿತ್ರಕಲಾವಿದರು ಭಾಗಿಗಳಾದರು. ಸಮಾರೋಪ ಸಮಾರಂಭದಲ್ಲಿ ಕಲಾವಿದರಿಂದ ಮೂಡಿಬಂದ ಚಿತ್ರಗಳು ಪ್ರದರ್ಶನಗೊಂಡವು. ಶಿಬಿರದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕೇರಳ ಚಿತ್ರಕಲಾ ಪರಿಷತ್ ನ ಕಣ್ಣೂರು ಘಟಕದ ಕಾರ್ಯದರ್ಶಿ ವಿನೋದ್ ಪಯ್ಯನೂರು ಸ್ವಾಗತಿಸಿದರು. ಪ್ರಸಾದ್ ವಂದಿಸಿದರು. ಕೇರಳ ಚಿತ್ರಕಲಾ ಪರಿಷತ್ ಕಣ್ಣೂರು ಘಟಕದ ಸದಸ್ಯರು ಮತ್ತು ಶಿಬಿರಿದ ಆಯೋಜಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ---೧೯೮೩ ರಲ್ಲಿ ವಿರಾಜಪೇಟೆ ಸರ್ವೂದಯ ಕಾಲೇಜಿನಲ್ಲಿ ಶಿಕ್ಷಕ ತರಬೇತಿ ಪಡೆಯಲು ಇಲ್ಲಿ ನೆಲೆಸಿದ್ದೆ, ಶಿಕ್ಷಕಳಾಗಿ ನಿವೃತ್ತಿಯಾದರೂ ಸಣ್ಣಪ್ರಾಯದಲ್ಲಿ ಕಲಿತ ಚಿತ್ರಕಲೆಯು ಇಂದಿನ ವರೆಗೂ ಜೀವನದ ಒಂದು ಭಾಗವಾಗಿದೆ. ಚಿತ್ರಕಲೆ ಅನೇಕ ಮನಸ್ಸುಗಳನ್ನು ಸಂಸ್ಕೃತಿಗಳನ್ನು ಒಂದೂಗೂಡಿಸುತ್ತದೆ. ಇಲ್ಲಿನ ವಾತವರಣವು ಚಿತ್ರಕಲಾವಿದರಿಗೆ ಪೂರಕವಾಗಿದೆ - ಡಾ. ಭಾಗ್ಯಲಕ್ಷ್ಮೀ, ನಿವೃತ್ತ ಪ್ರಾಂಶುಪಾಲೆ, ಕಣ್ಣೂರು--- ಚಿತ್ರಕಲೆಯು ತಂದೆಯಿಂದ ಕಲಿತ ವಿದ್ಯೆಯಾಗಿದೆ. ನಾನು ಬಿಡಿಸಿದ ಚಿತ್ರಗಳು ಶಾಲೆಯಲ್ಲಿ ಪ್ರದರ್ಶನಗೊಂಡಿದೆ. ಮಕ್ಕಳ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಗಮನ ಹರಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಚಿತ್ರಕಲೆಯಲ್ಲಿ ಅಸಕ್ತಿಹೊಂದಬೇಕು- ಬಾಲ ಮಹೇಂದ್ರ (ಕಿರಿಯ ಚಿತ್ರಕಲಾವಿದ), ಕಣ್ಣೂರು ಶಾಲೆ ವಿದ್ಯಾರ್ಥಿ

Share this article