ಮೋದಿ ಪ್ರಧಾನಿ ಮಾಡಲು ಬಿಜೆಪಿಗೆ ಮತ ಹಾಕಿ: ಜಿ.ಎಂ. ಸಿದ್ದೇಶ್ವರ

KannadaprabhaNewsNetwork |  
Published : Mar 17, 2024, 02:04 AM IST
ಹರಪನಹಳ್ಳಿಯಲ್ಲಿ ನಡೆದ ಬಿಜೆಪಿ ನೂತನ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಕೆ.ಲಕ್ಷ್ಮಣ ಅವರಿಗೆ ಜಿಲ್ಲಾದ್ಯಕ್ಷ ಚೆನ್ನಬಸವನಗೌಡ ಪಾಟೀಲ್‌ ಅವರು ಪಕ್ಷದ ಧ್ವಜ ಹಸ್ತಾಂತರಿಸಿದರು. ಜಿ.ಎಂ.ಸಿದ್ದೇಶ್ವರ ಇತರರು ಹಾಜರಿದ್ದರು.   | Kannada Prabha

ಸಾರಾಂಶ

ದಾವಣಗೆರೆ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 30 ಮೀಸಲು ನಿಗದಿ ಮಾಡಲು ಬಿಲ್‌ ಪಾಸ್‌ ಮಾಡಲಾಗಿದೆ.

ಹರಪನಹಳ್ಳಿ: ವಿಶ್ವ ನಾಯಕ ನರೇಂದ್ರ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿ ಮಾಡಲು ಬಿಜೆಜಿ ಅಭ್ಯರ್ಥಿಯಾದ ನನ್ನ ಪತ್ನಿ ಗಾಯತ್ರಿ ಅವರಿಗೆ ಮತ ಹಾಕಿ ಗೆಲ್ಲಿಸಿ ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಮನವಿ ಮಾಡಿದರು.

ಅವರು ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ನೂತನ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹರಪನಹಳ್ಳಿಯಲ್ಲಿನ ಬಿಜೆಪಿಯ ಸಮಸ್ಯೆ ನಮಗೆ ಗೊತ್ತಿಲ್ಲದ ವಿಷಯ. ಏನೇ ಸಮಸ್ಯೆಗಳಿದ್ದರೂ ಇಬ್ಬರೂ ಮೋದಿ ಪ್ರಧಾನಿ ಆಗಬೇಕು ಎನ್ನುವವರೇ, ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿದರು.

ದಾವಣಗೆರೆ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 30 ಮೀಸಲು ನಿಗದಿ ಮಾಡಲು ಬಿಲ್‌ ಪಾಸ್‌ ಮಾಡಲಾಗಿದೆ. ಅದು ಜಾರಿಗೆ ಬರುವುದಕ್ಕೂ ಪೂರ್ವದಲ್ಲಿಯೇ ನನಗೆ ಅವಕಾಶ ಸಿಕ್ಕಿದೆ. ದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ. ನನ್ನನ್ನು ಗೆಲ್ಲಿಸಿ ಕಳುಹಿಸಿದರೆ ಮೋದಿ ಅವರಿಗೆ ಬಲ ಬರುತ್ತದೆ ಎಂದು ಅವರು ತಿಳಿಸಿದರು.

ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ ಮಾತನಾಡಿ, ಬೇರೆ ಪಕ್ಷದಲ್ಲಿ ಕಾರ್ಯಕರ್ತರನ್ನು ಹುಡುಕುವ ಕೆಲಸವಾಗುತ್ತಿದೆ. ಆದರೆ ನಮ್ಮ ಪಕ್ಷದಲ್ಲಿ ಕಾರ್ಯಕರ್ತರನ್ನು ಕಂಟ್ರೊಲ್‌ ಮಾಡಲು ಆಗುತ್ತಾ ಇಲ್ಲ, ದೇಶದಲ್ಲಿಯೇ ಬಿಜೆಪಿಗೆ ಉತ್ತಮ ವಾತಾವರಣವಿದೆ ಎಂದರು.

ಹರಿಹರ ಶಾಸಕ ಬಿ.ಪಿ. ಹರೀಶ ಮಾತನಾಡಿ, ಪಕ್ಷ ಸದೃಢವಿದ್ದಾಗ ಪೈಪೋಟಿ ಇರುತ್ತದೆ. ಸ್ವಲ್ಪ ಭಿನ್ನಾಭಿಪ್ರಾಯವಿದ್ದರೂ ಮೋದಿ ಪರವಾಗಿ ಎಲ್ಲರೂ ಇದ್ದಾರೆ, ಇಲ್ಲಿರುವ ವ್ಯತ್ಯಾಸ ಸರಿಮಾಡುತ್ತಾರೆ. ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಿ ಎಂದು ಕೋರಿದರು.

ವಿಜಯನಗರ ಬಿಜೆಪಿ ಜಿಲ್ಲಾದ್ಯಕ್ಷ ಚೆನ್ನಬಸವನಗೌಡ ಪಾಟೀಲ್‌ ಇಲ್ಲಿಯ ಮಂಡಲ ಅಧ್ಯಕ್ಷ ಲಕ್ಷ್ಮಣ ಅವರಿಗೆ ಸಂಪೂರ್ಣ ಸಹಕಾರ ಕೊಟ್ಟು ಪಕ್ಷ ಗಟ್ಟಿಗೊಳಿಸಿ, ಪ್ರಪಂಚದಲ್ಲಿ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಪಕ್ಷ ಬಿಜೆಪಿ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಚೆನ್ನಬಸವನಗೌಡ ಪಾಟೀಲ್‌ ಪಕ್ಷದ ಧ್ವಜವನ್ನು ನೂತನ ಮಂಡಲ ಅಧ್ಯಕ್ಷ ಕೆ. ಲಕ್ಷ್ಮಣ ಅವರಿಗೆ ಹಸ್ತಾಂತರಿಸಿದರು.

ಮುಖಂಡ ಜಿ. ನಂಜನಗೌಡ ಮಾತನಾಡಿದರು. ಜಿಲ್ಲಾ ಮುಖಂಡರಾದ ಸಂಜೀವ ರೆಡ್ಡಿ, ಆರುಂಡಿ ನಾಗರಾಜ, ರಾಘವೇಂದ್ರ, ಬಾಗಳಿ ಕೊಟ್ರೇಶಪ್ಪ, ಎಂ.ಪಿ. ನಾಯ್ಕ, ಕಣವಿಹಳ್ಳಿ ಮಂಜುನಾಥ, ಮುತ್ತಿಗೆ ವಾಗೀಶ, ಬಲ್ಸಾಹುಣಸಿ ರಾಮಣ್ಣ, ಕಿಚಡಿ ಕೊಟ್ರೇಶ, ಉದಯಕುಮಾರ, ಎಂ. ಶಂಕರ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...