ಧೈರ್ಯದಿಂದ ಮತಚಲಾಯಿಸಿ ನಿಮ್ಮ ಜೋತೆ ನಾವಿದ್ದೇವೆ

KannadaprabhaNewsNetwork | Published : Apr 6, 2024 12:56 AM

ಸಾರಾಂಶ

ತಾಲೂಕಿನ ತೋರಣಾ ಗ್ರಾಮದ ಸಂಖ್ಯೆ 131ನೇ ಮತಗಟ್ಟೆ ಸೂಕ್ಷ್ಮಮತಗಟ್ಟೆಯಾಗಿದ್ದರಿಂದ ಮತಗಟ್ಟೆಗೆ ಮತದಾರರು ಬಂದು ಮತಚಲಾಯಿಸಲು ಭಯಭೀತರಾಗುವ ಸಂಭವ ಇರುತ್ತದೆ ಆದ್ದರಿಂದ ಅಧಿಕಾರಿಗಳು ನಿಮ್ಮ ಜೊತೆಯಲ್ಲಿ ಇರುತ್ತೇವೆ.

ಕಮಲನಗರ: ತಾಲೂಕಿನ ತೋರಣಾ ಗ್ರಾಮದ ಸಂಖ್ಯೆ 131ನೇ ಮತಗಟ್ಟೆ ಸೂಕ್ಷ್ಮಮತಗಟ್ಟೆಯಾಗಿದ್ದರಿಂದ ಮತಗಟ್ಟೆಗೆ ಮತದಾರರು ಬಂದು ಮತಚಲಾಯಿಸಲು ಭಯಭೀತರಾಗುವ ಸಂಭವ ಇರುತ್ತದೆ ಆದ್ದರಿಂದ ಅಧಿಕಾರಿಗಳು ನಿಮ್ಮ ಜೊತೆಯಲ್ಲಿ ಇರುತ್ತೇವೆ. ನೀವು ಯಾರದೇ ಆಮೀಷಕ್ಕಾಗಲಿ, ಒತ್ತಡಕ್ಕಾಗಲಿ, ಪ್ರಭಾವಿಗಳ ದಬ್ಬಾಳಿಕೆಗೆ ಹೇದರದೆ ಇಷ್ಟವಾದ ವ್ಯಕ್ತಿಗೆ ಮತಚಲಾಯಿಸಬೇಕು ಎಂದು ತಹಸೀಲ್ದಾರ್ ಅಮೀತ್ ಕುಮಾರ ಕುಲಕರ್ಣಿ ಮತದಾರರಿಗೆ ತಿಳಿಸಿದರು.

ತೋರಣಾ ಗ್ರಾಮದಲ್ಲಿನ 131ನೇ ಸಂಖ್ಯೆಯ ಮತಗಟ್ಟೆಯ ಸುತ್ತಲಿನ ಜನರಿಗೆ ಗುರುವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಹೆಚ್ಚಿನ ಮತದಾನ ಮಾಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಗ್ರಾಮದ 131 ಸಂಖ್ಯೆಯ ಮತ ಗಟ್ಟೆಯು ಗಲಭೆಗ್ರಸ್ತ ಆಗಿದ್ದರಿಂದ ಈ ಹೀಂದೆ ಚುನಾವಣೆ ಸಂದರ್ಭಗಳಲ್ಲಿ ಗಲಭೆಗೆ ಆಸ್ಪದ ನೀಡಿದ ವ್ಯಕ್ತಿಗಳನ್ನು ನಮ್ಮ ಜೀಲ್ಲೆಯಿಂದ ಗಡಿಪಾರು ಮಾಡಿ ಬೇರೆ ಜೀಲ್ಲೆಯಲ್ಲಿ ಇಡಲಾಗಿದೆ. ಆದ್ದರಿಂದ ಚುನಾವಣೆಯಲ್ಲಿ ಯಾರು ಸಹ ಯಾರಿಗೆಯಾಗಲಿ ಭಯಪಡುವ ಅವಶ್ಯಕತೆಯಿಲ್ಲ.ಎನಾದರೂ ಅಂಥ ಗಲಭೆಯಾಗುವ ಅನುಮಾನ ಬಂದರೇ ಕೂಡಲೇ ನಮ್ಮ ಗಮನಕ್ಕೆ ತನ್ನಿರಿ ಎಂದು ತಹಸೀಲ್ದಾರ್ ಅಮೀತ್ ಕುಮಾರ ಕುಲಕರ್ಣಿ ತಿಳಿಸಿದರು.

ಹಿಂದೆ ಚುನಾವಣೆ ಸಂದರ್ಭಗಳಲ್ಲಿ ಗಲಭೆಗೆ ಪ್ರಚೊದನೆ ನೀಡುವಂತ ವ್ಯಕ್ತಿಗಳು ಈಗಾಗಲೇ ಬಂಧನದಲ್ಲಿದ್ದಾರೆ. ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಯಾರು ಗಲಭೆಗೆ ಆಸ್ಪದ ನೀಡಕೂಡದು ಅಂತಹ ಎನಾದರೂ ಅನುಮಾನ ಬಂದರೇ ಕೂಡಲೇ ಅಂಥವರನ್ನು ದಸ್ತಗೀರಿ ಮಾಡಲಾಗುವುದು ಎಂದು ಕಮಲನಗರ ಪೊಲೀಸ್ ಠಾಣೆಯ ಸಿಪಿಐ ಅಮರೆಪ್ಪ ಎಚ್ಚರಿಕೆ ನೀಡಿದರು.

ಯಾರೇ ಪ್ರಭಾವಿ ರಾಜಕಾರಣಿಗಳಾಗಲಿ, ಶ್ರೀಮಂತರಾಗಲಿ ಪುಂಡ ಪೋಕರಿಗಾಗಲಿ ಭಯಪಡದೆ ನಿಮಗೆ ಇಷ್ಟವಾದ ವ್ಯಕ್ತಿಗೆ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೋಳಿಸಬೇಕು ಎಂದು ಕಮಲನಗರ ಪೊಲೀಸ್ ಠಾಣೆಯ ಪಿಎಸ್ಐ ಆಶಾ ರಾಠೋಡ್ ಮತದಾರರಿಗೆ ತಿಳಿಸಿದರು.

ತೋರಣಾ ಗ್ರಾಮ ಪಂಚಾಯತ್ ಅಧ್ಯಕ್ಷ ಸುನೀಲ ಶೀಗರೆ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಲ್ಲೇಶ, ಕಂದಾಯ ನೀರಿಕ್ಷಕರಾದ ಪ್ರವೀಣ ಬೀರಾದಾರ, ಶಂಕರರಾವ ಜಿರಗೆ ಹಾಗೂ ತೋರಣಾ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

Share this article