ಅಭಿವೃದ್ದಿ ಕಡೆಗಣಿಸಿರುವ ಕಾಂಗ್ರೆಸ್ಸಿಗೆ ಮತದಾರರು ಪಾಠ ಕಲಿಸಬೇಕು: ಬಿ ಸಿ ಪಾಟೀಲ

KannadaprabhaNewsNetwork |  
Published : Apr 11, 2024, 12:53 AM ISTUpdated : Apr 11, 2024, 01:32 PM IST
ಪೋಟೊ ಶಿರ್ಷಕೆ ೧೦ ಎಚ್ ಕೆ ಅರ್ ೦೨ಅ | Kannada Prabha

ಸಾರಾಂಶ

ಮಾಜಿ ಸಚಿವ ಬಿ.ಸಿ. ಪಾಟೀಲ

  ಹಿರೇಕೆರೂರು : ರಾಜ್ಯದಲ್ಲಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಬಿಜೆಪಿ ಕಾರ್ಯಕರ್ತರಿಗೆ ಕರೆನೀಡಿದರು.

ಹಿರೇಕೆರೂರ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರ ಪರ ಮತ ಪ್ರಚಾರ ನಡಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಜನಪರ ಆಡಳಿತದ ಕಾರ್ಯವೈಖರಿಯನ್ನು ಪ್ರತೀ ಮತದಾರನಿಗೂ ಮನವರಿಕೆ ಮಾಡುವ ಮೂಲಕ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ರಿತಿಯಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕು. ಬಿಜೆಪಿ ಪಕ್ಷಕ್ಕೆ ಬೂತ್ ಮಟ್ಟದ ಕಾರ್ಯಕರ್ತರೇ ದೂಡ್ಡ ಶಕ್ತಿ ಎಂದರು.

ಈ ವೇಳೆ ಹಿರೇಕೆರೂರ ಮಂಡಲದ ಅಧ್ಯಕ್ಷೆ ಶಿವಕುಮಾರ ತಿಪ್ಪಶಟ್ಟಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೃಷ್ಟಿ ಪಾಟೀಲ, ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ಆರ್.ಎನ್. ಗಂಗೋಳ, ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಲಿಂಗರಾಜ ಚಪ್ಪರದಳ್ಳಿ, ರವಿಶಂಕರ ಬಾಳಿಕಾಯಿ, ಎನ್.ಎಂ. ಈಟೇರ, ಗ್ರಾಮದ ಮುಖಂಡರು ಪಕ್ಷದ ಕಾರ್ಯಕರ್ತರು ಇದ್ದರು,

ಮಾಜಿ ಸಿಎಂ ಬೊಮ್ಮಾಯಿಗೆ ಧನ್ಯವಾದ ಅರ್ಪಿಸಿದ ದಂಪತಿ

 ಹಾವೇರಿ ; ಗದಗ ಜಿಲ್ಲೆಯ ರೋಣ ತಾಲೂಕಿನ ಇಟಗಿ ಗ್ರಾಮದ ಶಿವಶಂಕರಯ್ಯ ಹಿರೇಮಠ ದಂಪತಿ ಬುಧವಾರ ಸವಣೂರಿಗೆ ಆಗಮಿಸಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.

ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ದಂಪತಿ ಪುತ್ರನಿಗೆ ಸಂಪೂರ್ಣ ಶ್ರವಣ ದೋಷ ನಿವಾರಣೆ ಚಿಕಿತ್ಸೆಗೆ ಕಾಕ್ಲೀಯರ್ ಇಂಪ್ಲಾಂಟ್ ಯೋಜನೆ ಅಡಿಯಲ್ಲಿ ₹೮.೫೦ ಲಕ್ಷ ಮಂಜೂರು ಮಾಡಿದ್ದರು. ದಂಪತಿಗಳು ಬುಧವಾರ ಸವಣೂರಿಗೆ ಬಂದು ಬೊಮ್ಮಾಯಿಯವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು. ದೇವರು ನಿಮಗೆ ಒಳ್ಳೆಯದು ಮಾಡಲಿ, ನಮ್ಮ ಮಗನಿಗೆ ಭವಿಷ್ಯ ನೀಡಿದ ನೀವೂ ಜಯಶಾಲಿಯಾಗಿ ಬನ್ನಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ ಎಂದು ಹರಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ