ಉತ್ತರಕನ್ನಡದಲ್ಲಿ ಮೇ 7ರಂದು ಮತದಾನ

KannadaprabhaNewsNetwork |  
Published : Mar 17, 2024, 02:05 AM IST
೧೬ಕೆ೪ಲೋಕಸಭಾ ಚುನಾವಣೆಯ ಕುರಿತು ಡಿಸಿ ಗಂಗೂಬಾಯಿ ಮಾನಕರ ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ನೀತಿ ಸಂಹಿತೆ ಈಗಾಗಲೇ ಜಾರಿಗೆಯಲ್ಲಿದ್ದು, ಏ. ೧೨ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಏ. ೧೯ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಾರವಾರ

ಉತ್ತರ ಕನ್ನಡದಲ್ಲಿ ಲೋಕಸಭಾ ಚುನಾವಣೆಗಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಮತದಾನ ಮೇ ೭ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ನೀತಿ ಸಂಹಿತೆ ಈಗಾಗಲೇ ಜಾರಿಗೆಯಲ್ಲಿದ್ದು, ಏ. ೧೨ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಏ. ೧೯ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ೨೦ರಂದು ಪರಿಶೀಲನೆ, ೨೨ರಂದು ನಾಮಪತ್ರ ಹಿಂಪಡೆಯುವುದು, ಮೇ ೭ ಮತದಾನ, ಜೂ. ೪ ಮತ ಎಣಿಕೆ ಕಾರ್ಯ ನಡೆಯಲಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ಹಾಗೂ ಉತ್ತರ ಕನ್ನಡದ ೬ ವಿಧಾನಸಭಾ ಕ್ಷೇತ್ರ ಸೇರಿ ಒಟ್ಟು ೮ ಕ್ಷೇತ್ರಗಳಿವೆ. ತಾವು ಜಿಲ್ಲಾ ಚುನಾವಣಾಧಿಕಾರಿಯಾಗಿದ್ದು, ಅಪರ ಜಿಲ್ಲಾಧಿಕಾರಿ ಸಹಾಯಕ ಚುನಾವಣಾಧಿಕಾರಿ ಆಗಿರುತ್ತಾರೆ. ಜತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಸಹಾಯಕ ಚುನಾವಣಾಧಿಕಾರಿ ಇರುತ್ತಾರೆ. ಒಟ್ಟು ೧೯೭೭ ಮತಗಟ್ಟೆಗಳಿವೆ. ೧೬,೨೨,೮೫೭ ಮತದಾರರಿದ್ದಾರೆ. ೨೬೧೨ ಬ್ಯಾಲೆಟ್ ಯೂನಿಟ್, ೧೮೦೧ ಕಂಟ್ರೋಲ್ ಯೂನಿಟ್, ೧೮೯೧ ವಿವಿ ಪ್ಯಾಟ್ ಲಭ್ಯವಿದೆ. ೫೧ ಫ್ಲೈಯಿಂಗ್ ಸ್ಕಾಡ್, ೨೫ ವಿಡಿಯೋ ಸರ್ವೆಲೆನ್ಸ್ ಟೀಮ್, ೬ ವಿಡಿಯೋ ವೀವಿಂಗ್ ಟೀಮ್, ೧೪೬ ಸೆಕ್ಟರ್ ಆಫೀಸರ್, ತಲಾ ೬ ಅಕೌಂಟಿಂಗ್ ಟೀಮ್ ಮತ್ತು ಅಸಿಸ್ಟೆಂಟ್ ಅಕೌಂಟಿಂಗ್ ಟೀಮ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

೪೫೪ ಕ್ರಿಟಿಕಲ್, ೩೯ ವಲ್‌ನರೇಬಲ್‌ ಮತಗಟ್ಟೆ ಗುರುತಿಸಲಾಗಿದೆ. ಖಾನಾಪುರ ಮರಾಠ ಮಂಡಳ ಪಿಯು ಕಾಲೇಜ್, ಕಿತ್ತೂರಿನ ಕೆಎನ್‌ವಿವಿ ಕಾಲೇಜ್, ಹವಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಕಾರವಾರ ಸೆಂಟ್ ಮೈಕಲ್ ಶಾಲೆ, ಕುಮಟಾ ಡಾ. ಎ.ವಿ. ಬಾಳಿಗಾ ಕಾಲೇಜ್, ಭಟ್ಕಳ ಗುರುಸುಧೀಂದ್ರ ಕಾಲೇಜ್, ಶಿರಸಿ ಮಾರಿಕಾಂಬಾ ಕಾಜೇಲ್, ಯಲ್ಲಾಪುರ ವೈಟಿಎಸ್‌ಎಸ್ ಕಾಲೇಜ್‌ನಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ನಡೆಯಲಿದೆ. ಕುಮಟಾದ ಬಾಳಿಗಾ ಕಾಲೇಜಿನಲ್ಲಿ ೮ ಸ್ಟ್ರಾಂಗ್ ರೂಮ್ ತೆರೆಯಲಾಗುತ್ತದೆ. ಅಲ್ಲಿಯೇ ಮತ ಎಣಿಕೆ ಕೂಡಾ ನಡೆಯುತ್ತದೆ ಎಂದು ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠ ಎನ್. ವಿಷ್ಣುವರ್ಧನ್ ಮಾತನಾಡಿ, ಮತಗಟ್ಟೆ, ಮತ ಎಣಿಕಾ ಕೇಂದ್ರಗಳಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುತ್ತದೆ. ಭದ್ರತೆಗಾಗಿ ೮ ಡಿಎಸ್‌ಪಿ, ೨೦ ಇನ್‌ಸ್ಪೆಕ್ಟರ್, ೭೨ ಪಿಎಸ್‌ಐ, ೧೩೪ ಎಎಸ್‌ಐ, ೧೩೫೭ ಎಚ್‌ಸಿ, ಪಿಸಿ, ೮೯೮ ಹೋಮ್ ಗಾರ್ಡ್ ಒಟ್ಟೂ ೨೪೮೯ ಜನರನ್ನು ನಿಯೋಜಿಸಿಕೊಳ್ಳಲಾಗುತ್ತಿದೆ. ಎಲ್ಲ ಚೆಕ್‌ ಪೋಸ್ಟ್‌ನಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತದೆ. ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.

ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಇದ್ದರು.ಚೆಕ್‌ಪೋಸ್ಟ್

ಕಾರವಾರದ ಮಾಜಾಳಿ, ಬೋರೆ ಕ್ರಾಸ್, ಕುಮಟಾದ ಕತಗಾಲ, ಹಿರೇಗುತ್ತಿ, ಹೊನ್ನಾವರದ ಚಂದಾವರ, ಗೇರಸೊಪ್ಪ, ಭಟ್ಕಳದ ಸರ್ಪನಕಟ್ಟೆ, ಕುಂಟವಾಣಿ, ಶಿರಸಿಯ ದಾನಸಕೊಪ್ಪ, ತಿಗಣಿ, ಚಿಪಗಿ, ಸಿದ್ದಾಪುರದ ಚೂರಿಕಟ್ಟೆ, ಶಿರಳಗಿ, ಯಲ್ಲಾಪುರದ ಕಿರವತ್ತಿ, ಮುಂಡಗೋಡಿನ ಸಣವಳ್ಳಿ, ಬಾಚಣಕಿ, ಅಗಡಿ, ಜೋಯಿಡಾದ ಅನಮೋಡ, ರಾಮನಗರ, ಬಾಪೇಲಿ, ಹಳಿಯಾಳದ ಮಾವಿನಕೊಪ್ಪ, ಅರ್ಲವಾಡ, ಕವಲ್ವಾಡ, ದಾಂಡೇಲಿಯ ಬರ್ಚಿ ಒಳಗೊಂಡು ೨೫ ಚೆಕ್‌ ಪೋಸ್ಟ್ ತೆರೆಯಲಾಗಿದೆ. ದಿನದ ೨೪ ಗಂಟೆಯೂ ತಪಾಸಣೆ ನಡೆಯುತ್ತದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...