ವಕ್ಫ್ ಆಸ್ತಿ ವಿವಾದ; ಸರ್ಕಾರದ ವಿರುದ್ಧ ಪ್ರತಿಭಟನೆ

KannadaprabhaNewsNetwork | Published : Nov 11, 2024 11:48 PM

ಸಾರಾಂಶ

ರೈತರ ಜಮೀನು, ಸಾರ್ವಜನಿಕ ಆಸ್ತಿಯ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಿಸಿರುವುದನ್ನು ಖಂಡಿಸಿ ಹಾಗೂ ವಕ್ಫ್‌ ಬೋರ್ಡ್‌ ರದ್ದುಗೊಳಿಸುವಂತೆ ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿ ಎಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ರೈತರ ಜಮೀನು, ಸಾರ್ವಜನಿಕ ಆಸ್ತಿಯ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಿಸಿರುವುದನ್ನು ಖಂಡಿಸಿ ಹಾಗೂ ವಕ್ಫ್‌ ಬೋರ್ಡ್‌ ರದ್ದುಗೊಳಿಸುವಂತೆ ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿ ಎಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ನಾಗರಿಕ ಹಿತರಕ್ಷಣಾ ವೇದಿಕೆ, ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಮಾಜಿ ಸೈನಿಕರ ಸಂಘ, ರೈತಪರ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ವಿಶ್ವಕರ್ಮ ಸಮಾಜ, ರಾಜಸ್ಥಾನ ಮಾರ್ವಾಡಿಗರ ಸಂಘ, ಹಡಪದ ಸಮಾಜದ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಟ್ಟಣದ ಎಸ್.ಆರ್. ಸರ್ಕಲ್‌ದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮಾನವ ಸರಪಳಿ ನಿರ್ಮಿಸಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ರಾಜ್ಯದಲ್ಲಿ ವಕ್ಫ್‌ ಕಾನೂನು ದುರ್ಬಳಕೆ ಮಾಡಿಕೊಂಡು ರೈತರ ಜಮೀನು, ಸ್ಮಶಾನ ಭೂಮಿ, ಮಠ, ದೇವಾಲಯ ಇನ್ನಿತರ ಆಸ್ತಿಗಳ ಪಹಣಿಯಲ್ಲಿ ಏಕಾಏಕಿ ವಕ್ಫ್‌ ಆಸ್ತಿ ಎಂದು ನಮೂದಾಗುತ್ತಿದ್ದು, ಇದರಿಂದ ಜನಸಾಮಾನ್ಯರಲ್ಲಿ ಆತಂಕ ಉಂಟಾಗಿದೆ. ರಾಜ್ಯ ಸರ್ಕಾರ ಪಹಣಿ ಪತ್ರಿಕೆಯಲ್ಲಿರುವ ವಕ್ಫ್ ಆಸ್ತಿಯನ್ನು ಕೂಡಲೇ ರದ್ದು ಮಾಡಬೇಕು. ಕೂಡಲೇ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ವಕ್ಫ್ ಕಾನೂನನ್ನು ದುರ್ಬಳಕೆ ಮಾಡಿಕೊಂಡು ರೈತರ, ಸ್ಮಶಾನ ಭೂಮಿ ಸೇರಿ ಸಾರ್ವಜನಿಕ ಆಸ್ತಿಗಲ ಜಮೀನುಗಳ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದು ಜನರಿಗೆ ಘೋರ ಅನ್ಯಾಯ ಮಾಡುತ್ತಿರುವ ಸರ್ಕಾರದ ವಿರುದ್ಧ ಕಿಡಿ ಕಾರಿ, ಕೂಡಲೇ ಈ ಕಾನೂನು ರದ್ದುಪಡಿಸದಿದ್ದರೆ ಅಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚಿತ್ರ ನಟ ಶಿವರಂಜನ ಬೋಳಣ್ಣವರ, ಪ್ರಮೋದಕುಮಾರ ವಕ್ಕುಂದಮಠ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಮೆಳವಂಕಿ, ಉದ್ಯಮಿ ವಿಜಯ ಮೆಟಗುಡ್ಡ, ನಿಂಗಪ್ಪ ಚೌಡಣ್ಣವರ, ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಕಾಶಿನಾಥ ಬಿರಾದಾರ, ರೈತ ಸಂಘದ ಮುಖಂಡ ಮಹಾಂತೇಶ ಕಮತ, ಬಿ.ಎಂ. ಚಿಕ್ಕನಗೌಡರ, ಚಂದ್ರಶೇಖರ ಕೊಪ್ಪದ, ಸಂತೋಷ ಹಡಪದ, ಪುಂಡಲೀಕ ಭಜಂತ್ರಿ, ವಿಜಯ ಪತ್ತಾರ, ಸಿ.ಕೆ. ಮೆಕ್ಕೆದ, ರಾಜು ಬೊಂಗಾಳೆ, ಬೀರಪ್ಪ ದೇಶನೂರ, ಗೂಳಪ್ಪ ಇಟಗಿ, ವೀರನಗೌಡ ದೊಡ್ಡವೀರಪ್ಪನವರ, ಅಪ್ಪಣ್ಣ ಹಡಪದ, ಗಿರೀಶ ಹಲಸಗಿ, ಚಿದಂಬರ ಮೇಟಿ, ಸುರೇಶ ಸಂಪಗಾಂವಿ, ಶ್ರೀಕಾಂತ ಶಿರಹಟ್ಟಿ, ಕುಬೇರ ಪೀರಗೋಜಿ, ಬಸಯ್ಯ ಹಿರೇಮಠ, ಸಂಗಮೇಶ ಸವದತ್ತಿಮಠ, ರವಿ ಸಿದ್ದಣ್ಣವರ ಮಾತನಾಡಿ, ವಕ್ಫ್‌ ಬೋರ್ಡ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಸೋಮನಾಥ ಸೊಪ್ಪಿಮಠ, ಎಫ, ಎಸ್.ಸಿದ್ದನಗೌಡರ, ಮುರಗೆಪ್ಪ ಗೂಂಡ್ಲೂರು, ಬಸವರಾಜ ರಾಯರ, ಮಹಾಂತೇಶ ಜಿಗಜಿನ್ನಿ, ಅಶೋಕ ಜವಳಿ, ನಾರಾಯಣ ನಲವಡೆ, ನಾಗರಾಜ ಗೂಂಡ್ಲೂರ, ಮಲ್ಲಿಕಾರ್ಜುನ ಹುಂಬಿ, ಸುಭಾಶ ತುರಮರಿ ಸೇರಿದಂತೆ ನೂರಾರು ನಾಗರಿಕರು ಇದ್ದರು.

Share this article