ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ)ದ ಬಿಡದಿ ಟೌನ್ ಶಿಪ್ ಯೋಜನೆಯಡಿ ಬೈರಮಂಗಲ ಕೆರೆಗೆ ಕಾಯಕಲ್ಪ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳಯನ್ವಯ ತ್ಯಾಜ್ಯ ನೀರು ಬೈರಮಂಗಲ ಕೆರೆಗೆ ಹರಿಯದಂತೆ ತಡೆವೊಡ್ಡಬೇಕಾಗಿದೆ. ಇದಕ್ಕಾಗಿ ಬೆಂಗಳೂರು ಜಲಮಂಡಳಿ ವತಿಯಿಂದ ಬೈರಮಂಗಲ ಕೆರೆಯ ದಡದಲ್ಲಿ 100 ದಶಲಕ್ಷ ಲೀಟರ್ ಸಾಮರ್ಥ್ಯದ ದ್ವಿತೀಯ ಹಂತದ ಶುದ್ಧೀಕರಣ ಹಾಗೂ 25 ದಶಲಕ್ಷ ಲೀಟರ್ ಸಾಮರ್ಥ್ಯದ ತೃತೀಯ ಹಂತದ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.ಶುದ್ಧೀಕರಣ ಘಟಕ ನಿರ್ಮಾಣದಿಂದಾಗಿ ಜಲಮೂಲಗಳ ಮೇಲಿನ ಪ್ರತಿಕೂಲ ಪರಿಸರ ಪರಿಣಾಮ ಕಡಿಮೆಯಾಗಲಿದೆ. ಅಲ್ಲದೆ, ಸಂಸ್ಕರಿಸಿದ ನೀರನ್ನು ಸುತ್ತಮುತ್ತಲಿರುವ ಕಾರ್ಖಾನೆ, ಗೃಹ ಬಳಕೆ, ನೀರಾವರಿ ಉದ್ದೇಶ ಮತ್ತು ಭವಿಷ್ಯದಲ್ಲಿ ಬರುವ ಬಿಡದಿ ಟೌನ್ ಶಿಪ್ ಗೆ ಒದಗಿಸಲು ಅನುಕೂಲವಾಗಲಿದೆ.
520 ಕೋಟಿ ಬದಲು 391 ಕೋಟಿ ಅನುಮೋದನೆ:ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತ್ಯಾಜ್ಯ ನೀರು ಶುದ್ಧೀಕರಣ ಘಟಕದ ನಿರ್ಮಾಣ ಹಾಗೂ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಅಂದಾಜು ವೆಚ್ಚ 520 ಕೋಟಿ 70 ಲಕ್ಷ ರು.ಗಳ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿ ಆಡಳಿತಾತ್ಮಕ ಅನುಮೋದನೆಗಾಗಿ ಬೆಂಗಳೂರು ಜಲ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತ್ತು.
ಇದನ್ನು ಪರಿಶೀಲಿಸಿದ ಜಲ ಮಂಡಳಿ ಘಟಕ ಕಾರ್ಯಾಚರಣೆ ಮತ್ತು ನಿರ್ವಹಣೆಯ ಅವಧಿಯನ್ನು ಮಾತ್ರ 5 ವರ್ಷಗಳ ಬದಲಾಗಿ 7 ವರ್ಷಗಳಿಗೆ ವಿಸ್ತರಿಸಲು ಪರಿಗಣಿಸಿ, ಘಟನೋತ್ತರ ಅನುಮೋದನೆಯನ್ನು ಕಾಯ್ದಿರಿಸಿ 466.37 ಕೋಟಿ ರು.ಗಳ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಅಂತಿಮವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 391.82 ಕೋಟಿ ರು.ಗಳ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡಿದೆ.
ಬೈರಮಂಗಲ ಕೆರೆ ಒಂದು ಕಾಲದಲ್ಲಿ ಸುತ್ತಮುತ್ತಲಿನ ಪ್ರದೇಶಗಳ ಪಾಲಿಗೆ ಜಲ ಮೂಲವಾಗಿತ್ತು. ಇದೀಗ ಶಾಪವಾಗಿ ಪರಿಣಮಿಸಿದೆ. ಇಲ್ಲಿನ ನೀರು ಕೃಷಿ, ತೋಟಗಾರಿಕೆಗೆ ಬಳಸಲು ಹಾಗೂ ಜಾನುವಾರುಗಳಿಗೆ ನೀರು ಕುಡಿಸಲು ಸಹ ಯೋಗ್ಯವಿಲ್ಲದಷ್ಟು ಕಲ್ಮಶಗೊಂಡಿದೆ. ನದಿಗೆ ಬೆಂಗಳೂರು ಮತ್ತು ಬಿಡದಿ ಭಾಗದ ಕಾರ್ಖಾನೆಗಳ ರಾಸಾಯನಿಕ ಕಲ್ಮಶ ಯಥೇಚ್ಛವಾಗಿ ನದಿ ಮತ್ತು ಕೆರೆಯೊಡಲು ಸೇರುವುದರಿಂದ ನೀರು ಹರಿಯವಾಗ ನೊರೆ ಉತ್ಪತ್ತಿಯಾಗುತ್ತಿದೆ.ರಾಜಧಾನಿ ಬೆಂಗಳೂರು ಮತ್ತು ಹೊರವಲಯದಲ್ಲಿರುವ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳ ಸುಮಾರು 800-900 ಎಂಎಲ್‌ಡಿ ನೀರು ಕೆರೆ ಮೂಲಕ ಹಾದು ಹೋಗುತ್ತಿದೆ. ಈ ಪೈಕಿ ಕೇವಲ 350 ಎಂಎಲ್‌ಡಿ ಮಾತ್ರ ಸಂಸ್ಕರಣೆಯಾಗುತ್ತಿದೆ. ಹಾಗಾಗಿ, ತ್ಯಾಜ್ಯ ನೀರು ಶುದ್ಧೀಕರಣ ಘಟಕದ ಮೂಲಕ ಶುದ್ಧೀಕರಿಸಿದ ನೀರನ್ನು ಕೆರೆಗೆ ಹರಿಸುವ ಜೊತೆಗೆ ಕೆರೆಯನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿ ಪಡಿಸಲಾಗುತ್ತದೆ. ಇದರಿಂದ ಭೈರಮಂಗಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಜನರು ದಶಕಗಳಿಂದ ಅನುಭವಿಸುತ್ತಿರುವ ನರಕಕ್ಕೆ ಮುಕ್ತಿ ಸಿಗಲಿದೆ.
ಬಾಕ್ಸ್ ...............100 ದಶಲಕ್ಷ ಲೀಟರ್ ಸಾಮರ್ಥ್ಯದ ಘಟಕ100 ದಶಲಕ್ಷ ಲೀಟರ್ ಸಾಮರ್ಥ್ಯದ ದ್ವಿತೀಯ ಹಂತದ ಶುದ್ಧೀಕರಣ ಹಾಗೂ 25 ದಶಲಕ್ಷ ಲೀಟರ್ ಸಾಮರ್ಥ್ಯದ ತೃತೀಯ ಹಂತದ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕಾಗಿ ಬೈರಮಂಗಲ ಕೆರೆಯ ದಡದಲ್ಲಿರುವ ಸರ್ವೆ ನಂ. 54ರಲ್ಲಿ ಸುಮಾರು 25 ಎಕರೆ ಜಾಗವನ್ನು ಗುರುತಿಸಲಾಗಿದೆ.
ಕೋಟ್ ................ಬಿಡದಿ ಉಪನಗರ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದಾಗ ಬೈರಮಂಗಲ ಕೆರೆ ಶುದ್ದೀಕರಣ ಕಾರ್ಯವು ಯೋಜನೆಯ ಭಾಗವಾಗಿರಲಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶೇಷ ಕಾಳಜಿ ವಹಿಸಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ಕೊಡಿಸಿದ್ದಾರೆ.
- ಗಾಣಕಲ್ ನಟರಾಜು, ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ21ಕೆಆರ್ ಎಂಎನ್ 4,5.ಜೆಪಿಜಿ4.ಬೈರಮಂಗಲ ಕೆರೆ ಚಿತ್ರ
5.ಬಿಡದಿ ಟೌನ್ ಶಿಪ್ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ಬೈರಮಂಗಲ ಕೆರೆ ದೃಶ್ಯ.6.ಗಾಣಕಲ್ ನಟರಾಜು