ಕನ್ನಡಪ್ರಭ ವಾರ್ತೆ ಆಳಂದ
ಇದಕ್ಕೆ ಹೊರತಾಗಿಯೂ ಗ್ರಾಮಗಳಲ್ಲಿ ರೈತರ ಗದ್ದೆಗಳಿಂದ ಲಭ್ಯವಿರುವ ನೀರು ಖರೀದಿಸಿ ಸದ್ಯ ಏಳು ಗ್ರಾಮಗಳಲ್ಲಿ ಪೂರೈಕೆಗೆ ನಡೆದಿದೆ. ಪರಿಸ್ಥಿತಿ ಮುಂದೆ ಮತ್ತಷ್ಟು ಬಿಗಡಾಯಿಸಲಿದೆ.
೨೦೨೩-೨೪ನೇ ಸಾಲಿನ ಹಂಗಾಮಿನ ಹಸಿಬರದ ನಡುವೆಯೂ ತಾಲೂಕಿನ ಹಲವಡೆ ಬೇಸಿಗೆ ಆರಂಭವಾಗುವ ಮುನ್ನವೇ ಕುಡಿವ ನೀರಿನ ಸಮಸ್ಯೆ ಕಾಡಲಾರಂಭಿಸಿದೆ.ದಿನಕಳೆದಂತೆ ಜೋರಾಗುತ್ತಿರುವ ನೆತ್ತಿ ಸುಡುವ ಬಿಸಲಿಗೆ ಈಗಲೇ ಜನ ಬಸವಳಿಯತೊಡಗಿದ್ದು, ಮಳೆಗಾಲದ ಮಳೆ ಈ ಬಾರಿ ಕೊರತೆ ಕಂಡಿದೆ, ಹೀಗಾಗಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಹಿಂದೆಂದೂ ಕಂಡರಿಯದ ಸಮಸ್ಯೆ ತೆಲೆದೂರಿದೆ ಅಲ್ಲದೆ, ಈಗಲೇ ತಾಲೂಕಿನ ಏಳು ಗ್ರಾಮದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಖಾಸಗಿವಾಗಿ ತಿಂಗಳಿಗೆ ೨೫ ಸಾವಿರ ರೂ.ಗಳಂತೆ ನೀರು ಖರೀದಿಸಿ ಪೂರೈಕೆಗೆ ತಾಲೂಕು ಆಡಳಿತ ಕ್ರಮವಹಿಸಲಾಗಿದೆ.
ಕೆಲವಡೆ ಸದ್ಯ ನೀರಿನ ಸಣ್ಣ, ಪುಟ್ಟ ತಾಂತ್ರಿಕ ಸಮಸ್ಯೆಗಳಿಂದ ನೀರು ಪೂರೈಕೆಯಲ್ಲಿ ಎದುರಾಗುವ ಸಮಸ್ಯೆ ನಿವಾರಣೆ ಕೈಗೊಳ್ಳಲಾಗುತ್ತಿದೆ. ಹಿಂದಿನ ಬರಗಾಲದಲ್ಲಿ ೪೫ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತಾದರು. ಈ ಬಾರಿ ಇದರ ವೇಗ್ ಸದ್ಯ ಕೊಂಚ ಕಡಿಮೆ ಎನಿಸಿದ್ದರು ಸಹ ನೀರಿನ ಮೂಲಗಳ ಹೆಚ್ಚು ಬತ್ತುತ್ತಿರುವುದು ಪರಿಸ್ಥಿತಿ ಮತ್ತಷ್ಟು ವಿಕೋಪಕಕ್ಕೆ ತಳ್ಳಲಾರಂಭಿಸಿದೆ.
ಹಲವಡೆ ಕೊಳವೆ ಬಾವಿ, ತೆರೆದ ಬಾವಿ ಬತ್ತಿವೆ. ಹೀಗಾಗಿ ಇಲ್ಲಿಯ ರೈತರ ಗದ್ದೆಯಲ್ಲಿ ಕೊಳವೆ ಬಾವಿಯಿಂದ ತಿಂಗಳಿಗೆ ೨೫ ಸಾವಿರ ರುಪಾಯಿ ಕೊಟ್ಟು ನೀರು ಖರೀದಿಸಿ ಸರಸಂಬಾ, ಸಕ್ಕರಗಾ, ಝಳಕಿ ಕೆ. ಸಾವಳೇಶ್ವರ, ನಿಂಬಾಳ ಗ್ರಾಮದಲ್ಲಿ ಸಾರ್ವಜನಿಕರಿಗೆ ಪೂರೈಕೆ ಮಾಡಲಾಗುತ್ತಿದೆ.
ಮುನ್ನೆಚ್ಚರಿಕೆ ಕ್ರಮ: ಗ್ರಾಮೀಣ ಭಾಗದಲ್ಲಿ ಸಾರ್ವಜನಿಕವಾಗಿ ಇರುವ ಕೊಳವೆ ಬಾವಿಗಳ ದುರಸ್ಥಿಮಾಡಿ ಪೈಪ್‌ಲೈನ್ ಲೀಕೆಜ್ ಸರಿಪಡಿಸಿ ಟ್ಯಾಂಕ್‌ಗಳಲ್ಲಿ ನೀರು ಭರ್ತಿ ಮಾಡುವುದು ಹಾಗೂ ನೀರು ಪೋಲ್ಲಾಗದಂತೆ ಮಾಡಲು ಸಂಬಂಧಿತ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮುಂದಾಗಿದ್ದಾರೆ. ಅಲ್ಲದೆ, ಗ್ರಾಮಗಳಲ್ಲಿನ ಹಳೆಯ ಬಾವಿಗಳ ಹೂಳೆತ್ತಿ ಸ್ವಚ್ಛಗೊಳಿಸಿ ಪುನಶ್ಚೇತನಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಬೇಸಿಗೆಯಲ್ಲಿ ಒಂದೊಮ್ಮೆ ಯಾವ ಊರಲ್ಲೂ ನೀರೇ ಇಲ್ಲವಾಗಿದ್ದಲ್ಲಿ ಖಾಸಗಿ ಜಮೀನು ಮಾಲೀಕರ ಬಳಿ ನಾಲ್ಕು ತಿಂಗಳ ಅವಧಿಗಾಗಿ ತಿಂಗಳಿಗೆ ೨೫ ಸಾವಿರ ರುಪಾಯಿಯಂತೆ ನೀರು ಖರೀದಿಸಿ ಮನೆಗಳಿಗೆ ಪೂರೈಕೆಗೆ ಆಡಳಿತ ಮುಂದಾಗಿದೆ.
ನೀರಿನ ಭೀಕರ ಸಮಸ್ಯೆ ತಲೆದೂರಿದೆ: ನೀರಿನ ಸಮಸ್ಯೆ ನಿವಾರಣೆಗೆ ಅನುದಾನ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಅನುದಾನ ತರಲಾಗುವುದು. ಈ ಕುರಿತು ಅಧಿಕಾರಿಗಳ ಜೊತೆ ಮೂರು ಸಭೆ ಕೈಗೊಂಡಿದ್ದು, ಎಲ್ಲೂ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಈ ಬಾರಿ ಭೀಕರ ನೀರಿನ ಸಮಸ್ಯೆ ತಲೆದೂರಲಿದೆ ಎಂದು ಸಿಎಂ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ ಅವರು ಹೇಳಿದರು.
ಜೆಜೆ ವಿಫಲ: ಹಿಂದಿನ ನೀರಿನ ಮೂಲ ಹುಡಕಿ ಜೆಜೆಎಂ ಕೆಲಸ ಮಾಡಿಲ್ಲ. ತಾಲೂಕಿಗೆ ಜೆಜೆಂ ಅನುದಾನ ಸುಮಾರು ₹೧೬೨ ಕೋಟಿ ದುಡ್ಡು ಬಂದಿದೆ. ಇದರ ಕಾಮಗಾರಿ ಆದರೂ ನೀರಿನ ಸಮಸ್ಯೆ ನಿವಾರಣೆ ಆಗಿಲ್ಲ. ನೀರಿಲ್ಲದ ಊರಲ್ಲೂ ಪೈಪ್‌ಲೈನ್ ಮಾಡಿದ್ದಾರೆ. ನೀರಿನ ಮೂಲ ಹುಡಕಿ ಬಾವಿ ತೋಡಿ ಪೈಪ್‌ಲೈನ್ ಮಾಡುವ ಕೆಲಸವಾಗಿಲ್ಲ. ಇದರ ಅನುದಾನ ದುರಪಯೋಗ ಪಡಿಸಿ ಗುತ್ತಿಗೆದಾರರ ಜೇಬು ತುಂಬಿದೆ. ಹೊರೆತು ಸಮಸ್ಯೆ ನಿವಾರಣೆಯಾಗಿಲ್ಲ. ಅಂತರ್ಜಲ ಹೆಚ್ಚುವತನಕ ಯಾವ ಪ್ರಯೋಗವು ಯಶಸ್ವಿ ಆಗದು. ಈ ಕುರಿತು ಅಧೀವೇಶನದಲ್ಲಿ ಹಿಂದೆ ಪ್ರಸ್ತಾಪಿಸಿದ್ದೇನೆ. ಹಿಂದೆ ಮಳೆ ಹಂಗಾಮಿಗನುಸಾರ ಬಂದು ಅಂತರ್ಜಲ ಭರ್ತಿಯಾಗುತ್ತಿತ್ತು. ವರ್ಷ ಕಳೆದಂತೆ ಪರಿಸ್ಥಿತಿ ಭೀನ್ನವಾಗಿದೆ. ಕಳೆದ ವರ್ಷ ಸಕಾಲಕ್ಕೆ ಮಳೆ ಬರಲಿಲ್ಲ. ಮೇ ತಿಂಗಳಲ್ಲಿ ಬಂದಿದ್ದರಿಂದ ನೀರು ನಿಂತು ಅನುಕೂಲವಾಗಿದೆ. ಸಿರಪೂರ ಮಾದರಿ ಅಂತರ್ಜಲ ಕೆಲಸವಾದರೆ ಮಾತ್ರ ನೀರಿನ ಸಮಸ್ಯೆ ನಿವಾರಣೆಯಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು