ಚರಂಡಿ ಇಲ್ಲದೆ ರಸ್ತೆ ಹಾಗೂ ಮನೆಗಳಿಗೆ ನುಗ್ಗಿದ ನೀರು

KannadaprabhaNewsNetwork | Published : Jun 9, 2024 1:42 AM

ಸಾರಾಂಶ

ಶಿಗ್ಗಾಂವಿ ತಾಲೂಕಿನ ಕುನ್ನೂರ ಗ್ರಾಮದಲ್ಲಿ ಗುರುವಾರ ಹಾಗೂ ಶುಕ್ರವಾರ ಸುರಿದ ಮಳೆ ನೀರು ಗಟಾರ್ ಇಲ್ಲದೆ ರಸ್ತೆ ಮಧ್ಯೆಯೇ ಹರಿದು ಸುಮಾರು ೧೦ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ಇನ್ನೊಂದಡೆ ಚರಂಡಿ ಕಾಮಗಾರಿ ತೆರೆದು ಅಲ್ಲಲ್ಲಿ ಬಿಟ್ಟಿದ್ದರಿಂದ ಗ್ರಾಮಸ್ಥರು ಸಾಕಷ್ಟು ತೊಂದರೆ ಜೊತೆಗೆ ಗ್ರಾ.ಪಂ. ಹಿಡಿಶಾಪವನ್ನು ಹಾಕುವಂತಾಗಿದೆ.

ಶಿಗ್ಗಾಂವಿ: ತಾಲೂಕಿನ ಕುನ್ನೂರ ಗ್ರಾಮದಲ್ಲಿ ಗುರುವಾರ ಹಾಗೂ ಶುಕ್ರವಾರ ಸುರಿದ ಮಳೆ ನೀರು ಗಟಾರ್ ಇಲ್ಲದೆ ರಸ್ತೆ ಮಧ್ಯೆಯೇ ಹರಿದು ಸುಮಾರು ೧೦ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ಇನ್ನೊಂದಡೆ ಚರಂಡಿ ಕಾಮಗಾರಿ ತೆರೆದು ಅಲ್ಲಲ್ಲಿ ಬಿಟ್ಟಿದ್ದರಿಂದ ಗ್ರಾಮಸ್ಥರು ಸಾಕಷ್ಟು ತೊಂದರೆ ಜೊತೆಗೆ ಗ್ರಾ.ಪಂ. ಹಿಡಿಶಾಪವನ್ನು ಹಾಕುವಂತಾಗಿದೆ.ತಾಲೂಕಿನ ಕುನ್ನೂರ ಗ್ರಾಮದ ಓಣಿ-ಓಣಿಗಳಲ್ಲಿ ಕಾಂಕ್ರೀಟ್ ರಸ್ತೆ ಇದೆ. ಮುಖ್ಯರಸ್ತೆ ಆಗಿದೆ. ಆದರೆ ಪಕ್ಕದಲ್ಲೆ ಗಟಾರ್ ಇಲ್ಲದ್ದರಿಂದ ಮಳೆ ನೀರು ಮನೆಗೆ ನುಗ್ಗಿ, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಮನೆಯಲ್ಲಿನ ನೀರು ಹೊರ ಹಾಕಲು ಪರದಾಡುವಂತಾಗಿ, ಯುವಕರು ನೀರನ್ನು ಬೇರೆಡೆಗೆ ಸಾಗಿಸಲು ಯತ್ನಿಸಿದರು. ಇದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸದೆ ಕುಂಭಕರ್ಣ ನಿದ್ದೆಗೆ ಜಾರಿದೆ.ಗ್ರಾಮದ ಮನೆಗಳ ಮುಂದಿನ ಕಾಲುವೆಗಳನ್ನು ಬಂದ ಮಾಡಿ ತಮಗೆ ಬೇಕಾದ ಹಾಗೆ ಕಟ್ಟಿಕೊಂಡು ಕಾಲುವೆ ನೀರು ಹೋಗದೆ ಮನೆಗೆ ನುಗ್ಗಿದರು ಗ್ರಾ.ಪಂ. ಅಧಿಕಾರಿಗಳು ಮಾತ್ರ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದ್ದಾರೆ, ಅಲ್ಲದೆ ಗ್ರಾಮ ಪಂಚಾಯಿತಿ ಹಾಗೂ ಸ್ಥಳಿಯ ವ್ಯವಸಾಯ ಸಹಕಾರಿ ಸಂಘದ ಎದುರಿಗೆ ಸರಿ ಸುಮಾರು ೬ ತಿಂಗಳಿಗೆ ಹೆಚ್ಚು ಕಾಲ ಕಾಲುವೆ ಮಾಡಿಸಲು ರಸ್ತೆಯ ಮೇಲೆ ಕಲ್ಲು ಹಾಗೂ ಮಣ್ಣು ಹಾಕಿ ಅಲ್ಲಿಯೇ ಬಿಟ್ಟಿದ್ದಾರೆ, ಕಾಲುವೆ ನಿರ್ಮಿಸಿ ಇದ್ದ ನೀರು ಅಲ್ಲೆ ನಿಲ್ಲುವಂತೆ ಮಾಡುತ್ತಿದ್ದಾರೆ ಇದರಿಂದ ಮಕ್ಕಳು ಆಡುತ್ತಾ ಬಿದ್ದರೆ ಅವುಗಳ ಸಾವನ್ನು ಕಾಣುವಂತಾಗಿದೆ. ಆದರೆ ಇದಕ್ಕೆ ಯಾವುದೆ ಉತ್ತರ ಇಲ್ಲದಾಗಿದೆ, ಕಳೆದ ವರ್ಷದ ಬಿಲ್, ಈ ವರ್ಷದ ಕೆಲಸ: ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಕಳೆದ ವರ್ಷದ ಗಟಾರ ಸ್ವಚ್ಛ ಮಾಡುವ ಸಲುವಾಗಿ ಗ್ರಾಮ ಪಂಚಾಯತಿಯಿಂದ ಗ್ರಾಮದ ವಿವಿಧ ಚರಂಡಿ ಸ್ವಚ್ಛತೆಗಾಗಿ ಗುತ್ತಿಗೆದಾರಾರಿಗೆ ಒಂದು ಲಕ್ಷಕ್ಕೂ ಅಧಿಕ ಹಣ ಪಾವತಿಯಾಗಿದೆ. ಆದರೆ ಆ ವರ್ಷದ ಚರಂಡಿ ಸ್ವಚ್ಛಗೊಳಿಸಿಲ್ಲ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಮತ್ತೆ ಗುತ್ತಿಗೆದಾರ ತಪ್ಪಾಗಿದೆ ಎಂದು ಇತ್ತೀಚಿಗೆ ಚರಂಡಿ ಸ್ವಚ್ಛ ಮಾಡಿಸಿದ್ದಾರೆ ಆದರೆ ಅದರ ಮೇಲಿರುವ ಹಾಸುಗಲ್ಲುಗಳನ್ನು ಹೊಚ್ಚದೆ ಹಾಗೆ ಬಿಟ್ಟಿರುವುದು ಮತ್ತೆ ಕಸ ಕಡ್ಡಿ ತುಂಬಿಕೊಂಡಿದೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ದೂರಿದರು.ಗ್ರಾಮದ ತುಂಬೆಲ್ಲ ನೀರು-ನೀರು: ಗ್ರಾಮದಲ್ಲಿ ವ್ಯವಸ್ಥಿತ ಚರಂಡಿ ಇಲ್ಲದೇ ನಿತ್ಯ ಮಳೆಯಿಂದ ನೀರು, ಸರಾಗವಾಗಿ ಹರಿದು ಹೋಗಲು ಮಾರ್ಗವಿಲ್ಲದೆ ರಸ್ತೆಗೆ ನುಗ್ಗಿದ್ದು ಸಂಚಾರಕ್ಕೆ ತೊಂದರೆ ಆಗಿದೆ. ಇದು ಕೇವಲ ಈ ವರ್ಷದ ಸಮಸ್ಯೆ ಅಲ್ಲ ಪ್ರತಿ ವರ್ಷದ ಹೀಗೆ ಮುಂದುವರೆದಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ತಕ್ಷಣವಾಗಿ ಗ್ರಾಮದ ಸಮಗ್ರವಾದ ಕಾಲುವೆ ಹಾಗೂ ಅವ್ಯವಸ್ಥೆಯ ಕಾಮಗಾರಿಗಳನ್ನು ತನಿಖೆಯನ್ನು ಮಾಡಿ ಇಲ್ಲದೆ ಇದ್ದರೆ ಗ್ರಾ.ಪಂ.ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Share this article