ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಗುಂಡ್ಲುಪೇಟೆಗೆ ಸರಬರಾಜಾಗುವ ಕಬಿನಿ ಕುಡಿವ ಪೈಪ್ ನಂಜನಗೂಡು ಬಳಿಯ ದೇಬೂರು ಬಳಿ ಗುಂಡ್ಲುಪೇಟೆಗೆ ಸರಬರಾಜಾಗುವ ಕಬಿನಿ ಮುಖ್ಯ ಪೈಪ್ ಹೊಡೆದು ನೀರು ಸೋರಿಕೆ ಹಿನ್ನಲೆ ಗುಂಡ್ಲುಪೇಟೆಗೆ ಕಬಿನಿ ನೀರು ಸ್ಥಗಿತಗೊಂಡಿದೆ. ಪಟ್ಟಣ ಸೇರಿದಂತೆ ತಾಲೂಕಿನ ಮೈಸೂರು-ಊಟಿ ಹೆದ್ದಾರಿ ಬದಿಯ ತಾಲೂಕಿನ ಹಿರೀಕಾಟಿಯಿಂದ ಗುಂಡ್ಲುಪೇಟೆ ತನಕ ಸಿಗುವ ಹೆದ್ದಾರಿ ಎರಡು ಬದಿಯ ೩೦ ಕ್ಕೂ ಹೆಚ್ಚು ಹಳ್ಳಿಗಳಿಗೂ ಪೈಪ್ ದುರಸ್ಥಿಯಾಗುವ ತನಕ ಕಬಿನಿ ನೀರು ಸಿಗೋದು ಅನುಮಾನವಾಗಿದೆ. ನಂಜನಗೂಡು ಬಳಿಯ ದೇಬೂರು ಬಳಿ ಮುಖ್ಯ ಪೈಪ್ ತೂತಾಗಿ ಗುಂಡ್ಲುಪೇಟೆ ಬರುವ ಕಬಿನಿ ನೀರು ಸೋರಿಕೆಯಾಗಿ ಹರಿಯುತ್ತಿದೆ ಅಲ್ಲದೆ ನಂಜನಗೂಡು ಬಳಿ ಮಹಾಲಕ್ಷ್ಮೀ ಕ್ರಸರ್ ಮುಂದೆ ಹಾಗೂ ಗುಂಡ್ಲುಪೇಟೆ ಎಪಿಎಂಸಿ ಮುಂದೆಯೂ ನೀರು ಸೋರಿಕೆಯಾಗುತ್ತಿದ್ದ ಕಾರಣ ಪುರಸಭೆ ನೀರು ನಿಲ್ಲಿಸಲಾಗಿದೆ. ಗುಂಡ್ಲುಪೇಟೆ ಪಟ್ಟಣ ಹಾಗೂ ತಾಲೂಕಿನ ಚಿಕ್ಕಾಟಿ, ತೊಂಡವಾಡಿ,ದೊಡ್ಡ ಹುಂಡಿ, ಹಿರೀಕಾಟಿ, ಅರೇಪುರ, ರಂಗೂಪುರ, ಬೆಳಚಲವಾಡಿ, ಬೇಗೂರು, ತಗ್ಗಲೂರು, ಬೆಟ್ಟದಮಾದಹಳ್ಳಿ, ಹೆಗ್ಗಡಹಳ್ಳಿ, ಅಗತಗೌಡನಹಳ್ಳಿ, ಮಾಡ್ರಹಳ್ಳಿ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮದಲ್ಲಿ ಕಬಿನಿ ನೀರು ಸಿಗದಂತಾಗಿದೆ.ಕಬಿನಿ ನೀರು ಸ್ಥಗಿತಗೊಂಡಿದ್ದರಿಂದ ನೀರಿನ ಸಮಸ್ಯೆಗೆ ಗುಂಡ್ಲುಪೇಟೆ ಪುರಸಭೆ ಹಾಗೂ ಗ್ರಾಪಂ ಪರ್ಯಾಯ ವ್ಯವಸ್ಥೆಗೆ ಮುಂದಾದರೂ ಕಬಿನಿ ನೀರು ಸಿಗದ ಕಾರಣ ಜನರು ಪರದಾಟ ನಿಲ್ಲುತ್ತಿಲ್ಲ. ಕಬಿನಿ ನೀರಿನ ಸಂಪರ್ಕ ಇರುವ ಗ್ರಾಮದಲ್ಲಿ ಕುಡಿವ ನೀರಿಗಾಗಿ ಹೆಂಗಸರು ಬಿಂದಿಗೆ ಹಿಡಿದರೆ, ಗಂಡಸರು ಬೈಕ್ ಹಾಗೂ ಸೈಕಲ್ ಮೇಲೆ ಬಿಂದಿಗೆ ಹಾಕಿಕೊಂಡು ಕೃಷಿ ಜಮೀನಿನತ್ತ ತೆರಳಿ ಹ್ಯಾಂಡ್ ಪಂಪ್ ಗಳಲ್ಲಿ ನೀರು ತರುವಂತಾಗಿದೆ ಎಂದು ಬೇಗೂರಿನ ಮಹೇಶ್ ಹೇಳಿದ್ದಾರೆ. ಪಟ್ಟಣದಲ್ಲಿ ಅಂಚೆ ಕಚೇರಿ, ಟಿಬಿ ಬಡಾವಣೆಯ ಕೊನಿಕಾ ಸ್ಟುಡಿಯೋ, ತಾಲೂಕು ಕಚೇರಿ, ಕೋರ್ಟ್ ಸೇರಿದಂತೆ ಹಲವು ಕಡೆ ಕಬಿನಿ ನೀರೇ ಗತಿ. ಇಲ್ಲಿನ ನಾಗರೀಕರು ಕಬಿನಿ ನೀರು ಬರೋದು ಯಾವಾಗ ಕೇಳುವಂತಾಗಿದೆ.
ನಂಜನಗೂಡು ಬಳಿಯ ದೇಬೂರು ಬಳಿ ಕಬಿನಿ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಒಡೆದು ನೀರು ಸೋರಿಕೆಯಾಗುತ್ತಿದೆ ಅಲ್ಲದೆ ಗುಂಡ್ಲುಪೇಟೆ ಎಪಿಎಂಸಿ ಬಳಿಯೂ ಎಕ್ಸ್‌ಪ್ರೆಸ್ ಲೈನ್ ಕಾಮಗಾರಿ ನಡೆಯುವಾಗ ಪೈಪ್ ಒ ಡೆದಿತ್ತು. ಪೈಪ್ ದುರಸ್ಥಿ ಕೆಲಸ ಮಾಡಿಸಲು ಪುರಸಭೆ ಕ್ರಮ ತೆಗೆದುಕೊಂಡಿದೆ.-ಕೆ.ಪಿ.ವಸಂತಕುಮಾರಿ, ಮುಖ್ಯಾಧಿಕಾರಿ, ಪುರಸಭೆ