ಕನ್ನಡಪ್ರಭ ವಾರ್ತೆ ಮೈಸೂರುಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಗರದ ಜಿಪಂನ ಅಬ್ದುಲ್ನಜೀರ್ ಸಾಬ್ಸಭಾಂಗಣದಲ್ಲಿ ಫೀಲ್ಡ್ಟೆಸ್ಟ್ ಕಿಟ್ಮೂಲಕ ನೀರಿನ ಗುಣಮಟ್ಟ ಪರೀಕ್ಷಿಸುವ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.ಜಿಪಂನ ಅಬ್ದುಲ್ನಜೀರ್ಸಾಬ್ಸಭಾಂಗಣದಲ್ಲಿ ಮೈಸೂರು, ನಂಜನಗೂಡು ಹಾಗೂ ಟಿ.ನರಸೀಪುರ ತಾಪಂಗಳು, ಎಚ್.ಡಿ. ಕೋಟೆ ತಾಪಂ ಸಭಾಂಗಣದಲ್ಲಿ ಎಚ್.ಡಿ. ಕೋಟೆ, ಸರಗೂರು ಮತ್ತು ಹುಣಸೂರು ತಾಲೂಕು ಹಾಗೂ ಕೆ.ಆರ್. ನಗರ ತಾಪಂ ಸಭಾಂಗಣದಲ್ಲಿ ಕೃಷ್ಣರಾಜನಗರ, ಸಾಲಿಗ್ರಾಮ ಮತ್ತು ಪಿರಿಯಾಪಟ್ಟಣ ತಾಪಂ ಪಿಡಿಒಗಳಿಗೆ ಫೀಲ್ಡ್ ಟೆಸ್ಟ್ ಕಿಟ್ ಮೂಲಕ ನೀರಿನ ಗುಣಮಟ್ಟ ಪರೀಕ್ಷಿಸುವ ಕುರಿತು ತರಬೇತಿ ಕಾರ್ಯಾಗಾರ ನಡೆಸಲಾಯಿತು.ಕಾರ್ಯಾಗಾರಕ್ಕೆ ಜಿಪಂ ಸಿಇಒ ಕೆ.ಎಂ. ಗಾಯಿತ್ರಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಕಾಲಕಾಲಕ್ಕೆ ನೀರಿನ ಮಾದರಿಗಳನ್ನು ಪರೀಕ್ಷಿಸಿ ಸಾರ್ವಜನಿಕರಿಗೆ ಶುದ್ಧ- ಸುರಕ್ಷಿತ ನೀರನ್ನು ಪೂರೈಸುವುದು ಗ್ರಾಪಂಗಳ ಜವಾಬ್ದಾರಿ. ತಮ್ಮ ಗ್ರಾಪಂಗಳಲ್ಲಿ ಬರುವ ಎಲ್ಲಾ ನೀರಿನ ಮೂಲಗಳನ್ನು ಪರೀಕ್ಷಿಸಲು, ಒ.ಎಚ್.ಟಿ ಗಳನ್ನು ಮತ್ತು ನೀರಿನ ತೊಂಬೆಗಳನ್ನು ಕಾಲಕಾಲಕ್ಕೆ ಶುಚಿಗೊಳಿಸಿ ನೀರು ಕಲುಷಿತಗೊಳ್ಳದಂತೆ ಎಚ್ಚರ ವಹಿಸಲು ಹಾಗೂ ನೀರಿನ ಮಾದರಿ ಪರೀಕ್ಷಿಸಿದ ವರದಿಯನ್ನು ಡಬ್ಲ್ಯೂಕ್ಯೂಎಂಎೖಎಸ್ ಪೋರ್ಟಲ್ ನಲ್ಲಿ ಅಪಲೋಡ್ ಮಾಡಲು ಸೂಚಿಸಿದರು.
ಡಬ್ಲ್ಯೂಕ್ಯೂಎಂಎಸ್ ಟಾಸ್ಕ್ ಫೋರ್ಸ್ ಸಮಿತಿ ಜವಾಬ್ದಾರಿ ಮತ್ತು ಕಾರ್ಯವೈಖರಿಯ ಕುರಿತು ಸೂಚನೆ ನೀಡಿದರು.ಕಾರ್ಯಾಗಾರಕ್ಕೆ ಎಚ್.ಡಿ. ಕೋಟೆ ಮತ್ತು ಕೆ.ಆರ್. ನಗರದಲ್ಲಿ ನೆಡೆಯುತ್ತಿದ್ದ ಕಾರ್ಯಾಗಾರಕ್ಕೆ ಸಿಇಒ ವಿಡಿಯೋ ಸಂವಾದದ ಮೂಲಕ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಎ.ಎಸ್. ರಂಜಿತ್ ಕುಮಾರ್ ಮಾತನಾಡಿ, ಎಫ್ಟಿಕೆ ಕಿಟ್ ಮತ್ತು ಎಚ್ಪರೀಕ್ಷೆಗಳನ್ನು ಬಳಸಿಕೊಂಡು ಗ್ರಾಮಗಳ ಹಂತದಲ್ಲಿ ಕುಡಿಯುವ ನೀರು ಕಲುಷಿತವಾಗದಂತೆ ತಡೆಯಲು ಮುಂಜಾಗ್ರತಾ ಕ್ರಮ ಕುರಿತು ವಿವರಿಸಿದರು.ಡಬ್ಲ್ಯೂಕ್ಯೂಎಂಐಎಸ್ ಪೋರ್ಟಲ್ ನಲ್ಲಿನ ವರದಿ ಪರಿಶೀಲಿಸಿಕೊಳ್ಳುವ ಕುರಿತು ಹ್ಯಾಂಡ್ಸ್ ಆನ್ ತರಬೇತಿ ನೀಡಿದರು. ಬಳಿಕ ಎಫ್ಟಿಕೆ ಕಿಟ್ ಮೂಲಕ ಕುಡಿಯುವ ನೀರಿನ ಮಾದರಿ ಪರೀಕ್ಷೆ ಮಾಡುವ ವಿಧಾನಗಳು ಮತ್ತು ಪರೀಕ್ಷೆಯ ನಂತರ ಕೈಗೊಳ್ಳಬೇಕಾದ ಚಟುವಟಿಕೆ ಕುರಿತು ಪ್ರಾಯೋಗಿಕವಾಗಿ ಜಿಲ್ಲಾ ಪ್ರಯೋಗಾಲಯ ಸಿಬ್ಬಂದಿ ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ. ಕೃಷ್ಣರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ರಂಜಿತ್ ಕುಮಾರ್ , ಜಿಪಂ ಉಪ ಕಾರ್ಯದರ್ಶ (ಆಡಳಿತ) ಸವಿತಾ, ಮೇಘಲಾ, ಯೋಜನಾ ನಿರ್ದೇಶಕರು, ರುದ್ರೇಶ್, ಉಪ ನಿರ್ದೇಶಕರು ಹಾಗೂ ಎಲ್ಲಾ ತಾಪಂ ಇಒಗಳು, ಎಇಇ ಮತ್ತು ಪಿಡಿಒಗಳು ಇದ್ದರು.