ಕಾರವಾರ:
ಉತ್ತರ ಕನ್ನಡದಲ್ಲಿ ೨೨೯ ಗ್ರಾಮ ಪಂಚಾಯಿತಿಗಳಿದ್ದು ಮುಂಬರುವ ದಿನಗಳಲ್ಲಿ ೧೦೯ ಗ್ರಾಪಂಗಳ ೩೧೦ ಹಳ್ಳಿಗಳಲ್ಲಿ ನೀರಿನ ತುಟಾಗ್ರತೆ ಉಂಟಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಖಾಸಗಿ ಕೊಳವೆ ಬಾವಿ, ಟ್ಯಾಂಕರ್‌ಗಳನ್ನು ಈಗಾಗಲೇ ಗುರುತಿಸಿಕೊಳ್ಳಲಾಗಿದೆ.ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಉತ್ತರ ಕನ್ನಡದ ೧೧ ತಾಲೂಕುಗಳು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದ್ದು, ಮುಂದೆ ಮಳೆಯಾಗದೇ ಇದ್ದಲ್ಲಿ ನೀರಿನ ತುಟಾಗ್ರತೆ ಉಂಟಾಗುವ ಸಾಧ್ಯತೆಯಿದೆ. ಜಿಲ್ಲಾಡಳಿತ, ಜಿಪಂ ಸರ್ವೇ ಕಾರ್ಯ ಕೂಡಾ ಮಾಡಿದೆ. ಈ ಪ್ರಕಾರ ಬೇಸಿಗೆ ಅವಧಿಯಲ್ಲಿ ೧೦೯ ಗ್ರಾಪಂಗಳ ೩೧೦ ಹಳ್ಳಿಗಳಲ್ಲಿ ನೀರಿನ ಕೊರತೆಯಾಗುವ ಸಂದರ್ಭವಿದೆ.ಹಳ್ಳಿಗಳ ಸಂಖ್ಯೆ:ಅಂಕೋಲಾ ತಾಲೂಕಿನ ೧೧ ಗ್ರಾಪಂಗಳ ೨೨ ಹಳ್ಳಿ, ಭಟ್ಕಳ ತಾಲೂಕಿನ ೧೧ ಗ್ರಾಪಂಗಳ ೫೦ ಹಳ್ಳಿ, ಹೊನ್ನಾವರ ತಾಲೂಕಿನ ೪ ಗ್ರಾಪಂಗಳ ೮ ಹಳ್ಳಿ, ಹಳಿಯಾಳ ೧೭ ಗ್ರಾಪಂ ೫೧ ಹಳ್ಳಿ, ಜೋಯಿಡಾ ೪ ಗ್ರಾಪಂ ೯ ಹಳ್ಳಿ, ಕಾರವಾರ ೧೦ ಗ್ರಾಪಂ ೧೫ ಹಳ್ಳಿ, ಕುಮಟಾ ೯ ಗ್ರಾಪಂ ೨೭ ಹಳ್ಳಿ, ಮುಂಡಗೋಡ ೧೦ ಗ್ರಾಪಂ ೨೨ ಹಳ್ಳಿ, ಸಿದ್ದಾಪುರ ೧೭ ಗ್ರಾಪಂ ೭೨ ಹಳ್ಳಿ, ಶಿರಸಿ ೧೪ ಗ್ರಾಪಂ ೨೮ ಹಳ್ಳಿ, ಯಲ್ಲಾಪುರ ೨ ಗ್ರಾಪಂ ೬ ಹಳ್ಳಿ, ದಾಂಡೇಲಿ ೩ ಗ್ರಾಪಂ ೩ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಆಗಬಹುದು ಎಂದು ಅಂದಾಜಿಸಲಾಗಿದೆ.
ಅಂಕೋಲಾ ತಾಲೂಕಿನಲ್ಲಿ ಖಾಸಗಿ ಬೋರ್‌ವೆಲ್ ೩, ಟ್ಯಾಂಕರ್ ೨೨, ಭಟ್ಕಳದಲ್ಲಿ ಖಾಸಗಿ ಬೋರ್‌ವೆಲ್ ೩, ಟ್ಯಾಂಕರ್ ೪೬, ಹೊನ್ನಾವರ ಟ್ಯಾಂಕರ್ ೮, ಹಳಿಯಾಳ ಬೋರ್‌ವೆಲ್ ೫೧, ಜೋಯಿಡಾ ಟ್ಯಾಂಕರ್ ೪, ಕಾರವಾರ ಟ್ಯಾಂಕರ್ ೧೫, ಕುಮಟಾ ಟ್ಯಾಂಕರ್ ೨೭, ಮುಂಡಗೋಡ ಬೋರ್‌ವೆಲ್ ೨೫, ಟ್ಯಾಂಕರ್ ೪, ಸಿದ್ದಾಪುರ ಬೋರ್‌ವೆಲ್ ೩, ಟ್ಯಾಂಕರ್ ೧೧೬, ಶಿರಸಿ ಟ್ಯಾಂಕರ್ ೧೭, ಯಲ್ಲಾಪುರ ಬೋರ್‌ವೆಲ್ ೧, ಟ್ಯಾಂಕರ್ ೫, ದಾಂಡೇಲಿ ಬೋರ್‌ವೆಲ್ ೧, ಒಟ್ಟೂ ಬೋರ್‌ವೆಲ್ ೮೬, ಟ್ಯಾಂಕರ್ ೨೬೪ ಗುರುತಿಸಿಕೊಳ್ಳಲಾಗಿದೆ.ಮಲೆನಾಡಿನ ತಾಲೂಕಾದ ಸಿದ್ದಾಪುರದಲ್ಲಿ ಅತಿ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಲೆ ದೂರುತ್ತಿದ್ದರೆ, ಶಿರಸಿ ಭಾಗದಲ್ಲೂ ಬೇಸಿಗೆಯಲ್ಲಿ ನೀರಿನ ತುಟಾಗ್ರತೆ ಕಾಡುತ್ತಿದೆ. ಕರಾವಳಿ ಭಾಗದಲ್ಲಿ ಉಪ್ಪು ನಿರಿನ ಸಮಸ್ಯೆ ಪ್ರತಿ ವರ್ಷವೂ ಎಡಬಿಡದೇ ಕಾಡುತ್ತಿದೆ. ಪ್ರಸಕ್ತ ಬೇಸಿಗೆಯಲ್ಲಿ ೧೨ ತಾಲೂಕುಗಳಲ್ಲೂ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದ್ದು, ನೀರಿನ ಅಭಾವ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ.
ಸದ್ಯ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿಲ್ಲ. ಮಳೆಯಾಗದೇ ಇದ್ದಲ್ಲಿ ಮುಂದಿನ ಮಾರ್ಚ್ ನಂತರ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂಜಿಸಿದ್ದೇವೆ. ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಟ್ಯಾಂಕರ್, ಖಾಸಗಿ ಬೋರ್‌ವೆಲ್ ಪೂರೈಕೆಗೆ ಅಗತ್ಯವಿರುವ ಅನುದಾನಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಅಂದಾಜು ವೆಚ್ಚ ಕಳಿಸುತ್ತೇವೆ. ಜತೆಗೆ ಜಿಪಂಗೆ ೧೫ನೇ ಹಣಕಾಸು ಯೋಜನೆಯಡಿ ನೀರು ಪೂರೈಕೆಗೆ ಅವಕಾಶವಿದೆ. ಅಗತ್ಯವಿರುವಷ್ಟು ಅನುದಾನ ಸರ್ಕಾರ ಕೂಡಾ ಬಿಡುಗಡೆ ಮಾಡುತ್ತದೆ. ಜನರಿಗೆ ತೊಂದರೆ ಆಗುವುದಿಲ್ಲ ಎಂದು ಜಿಪಂ ಸಿಇಒ ಈಶ್ವರಕುಮಾರ ಕಾಂದೂ ತಿಳಿಸಿದ್ದಾರೆ.