ಕನ್ನಡಪ್ರಭ ವಾರ್ತೆ ಕಲಬುರಗಿ
ಅಫಜಲ್ಪುರ ಹಾಗೂ ಆಳಂದ ತಾಲೂಕಿನ ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿರುವ ಜಿಲ್ಲಾಡಳಿತದ ಅಧಿಕಾರಿಗಳು ಖಾಸಗಿ ಕೋಳವೆ ಬಾವಿ/ತೆರೆದ ಬಾವಿಗಳಿಂದ ಕುಡಿಯುವ ನೀರನ್ನು ಸರಬರಾಜು ಆದೇಶಿಸಿದ್ದಾರೆ.
ಅಫಜಲ್ಪುರ ತಾಲೂಕಿನಲ್ಲಿ 11 ಮತ್ತು ಆಳಂದ ತಾಲೂಕಿನಲ್ಲಿ 11 ಹಾಗೂ ಕಮಲಾಪೂರ ತಾಲೂಕಿನ 7 ಗ್ರಾಮಗಳಿಗೆ ಖಾಸಗಿ ಕೋಳವೆ/ತೆರೆದ ಬಾವಿಗಳಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸಮಾಧಾನದ ಸಂಗತಿ ಎಂದರೆ ಜಿಲ್ಲೆಯಲ್ಲಿ ಇಂದಿನವರೆಗೂ ಮೇವಿನ ಕೊರತೆ ಜಾನುವಾರುಗಳಿಗೆ ಕಾಡಿಲ್ಲ, ಆದಾಗ್ಯೂ ಮೇವಿನ ಅಂತರ್ ಜಿಲ್ಲಾ, ಅಂತರಾಜ್ಯ ಸರಬರಾಜಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿಗಳು ಆದೇ ಹೊರಡಿಸಿದ್ದಾರೆ.ಇಂದಿಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ ಸಿಇಓ ಭಂವರ್ ಸಿಂಗ್ ಮೀನಾ, ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ಹಾಗೂ ಜಿಲ್ಲೆಯ ನೀರಿನ ಅಭಾವ, ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
315 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆತಂಕ: ಜಿಪಂ ಸಿಇಓ ಭಂವರಸಿಂಗ್ ಮೀನಾ ಮಾತನಾಡಿ, ನೀರಿನ ಕೊರತೆ ಉದ್ಭವಿಸ ಬಹುದಾದ ಗ್ರಾಮಗಳ ವಿವರಗಳನ್ನು ನೂಡುತ್ತ ಜಿಲ್ಲೆಯ 854 ಗ್ರಾಮಗಳ ಪೈಕಿ 315 ಗ್ರಾಮಗಳು ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಕಲಬುರಗಿ ತಾಲೂಕಿನಲ್ಲಿ 40 ಗ್ರಾಮಗಳು ಆಳಂದ ತಾಲೂಕಿನ 80 ಗ್ರಾಮಗಳು, ಚಿಂಚೋಳಿ ತಾಲೂಕಿನ 14 ಗ್ರಾಮಗಳು, ಅಫಜಲ್ಪುರ ತಾಲೂಕಿನ 86 ಗ್ರಾಮಗ ಜೇವರ್ಗಿ ತಾಲೂಕಿನ 5 ಗ್ರಾಮಗಳು, ಚಿತ್ತಾಪುರದ 14 ಗ್ರಾಮಗಳು, ಶಹಾಬಾದ ತಾಲೂಕಿನ 5 ಗ್ರಾಮಗಳು, ಕಾಳಗಿ ತಾಲೂಕಿನ 16 ಗ್ರಾಮಗಳು, ಯಡ್ರಾಮಿ ತಾಲೂಕಿನ 4 ಗ್ರಾಮಗಳು ಮತ್ತು ಕಮಲಾಪೂರ ತಾಲೂಕಿನ 23 ಗ್ರಾಮಗಳು ಹಾಗೂ ಸೇಡಂ ತಾಲೂಕಿನ 28 ಗ್ರಾಮಗಳು ಬೇಸಿಗೆ ಕಾಲದಲ್ಲಿ ನೀರಿನ ಕೊರ ಉದ್ಭವಿಸುವ ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿನ ಬೋರ್‌ವೆಲ್‌ಗಳ ಅಂಕಿ ಸಂಖ್ಯೆ: ಜಿಲ್ಲೆಯ ಅಫಜಲಪುರದಲ್ಲಿ ಒಟ್ಟು 86 ಹಳ್ಳಿಗಳಲ್ಲಿ 314 ಬೋರ್‌ವೆಲ್‌ಗಳಿದ್ದು, ಅದರಲ್ಲಿ 224 ಬೋರ್‌ವೆಲ್‌ಗಳು ಉಪಯೋ ಗದಲ್ಲಿದ್ದು, 90 ಬೋರ್‌ವೆಲ್‌ಗಳು ಬಳಕೆಗೆ ಬಾರದೆ ಇದ್ದು, 88ಗಳನ್ನು ರಿಪೇರ್ ಮಾಡಲಾಗುತ್ತಿದೆ, ಇದರಲ್ಲಿ 42 ಖಾಸಗಿ ಬೋರ್‌ವೆಲ್‌ಗಳಿವೆ. ಆಳಂದನಲ್ಲಿ 205 ಬೋರ್‌ವೆಲ್‌ಗಳಲ್ಲಿ 121 ಉಪಯೋಗಕ್ಕೆ ಹಾಗೂ 79 ಉಪಯೋಗಕ್ಕೆ ಬಾರದೆ ಇದ್ದು, ಚಿಂಚೋಳಿಯಲ್ಲಿ 54 ಉಪಯೋಗಕ್ಕೆ ಹಾಗೂ 41 ಉಪಯೋಗಕ್ಕೆ ಬಾರದೆ ಇರುವ ಬೋರ್‌ವೆಲ್‌ಗಳಿವೆ.
ಜಿಲ್ಲಾ- ನಗರ ಸಹಾಯವಾಣಿ: ನೀರಿನ ಸಮಸ್ಯೆ ಇದ್ದಲಿ ಸಾರ್ವಜನಿಕರು ನೇರವಾಗಿ ಜಿಲ್ಲಾ ಕೇಂದ್ರದಲ್ಲಿ ಆಪ ಸಹಾಯಕ್ಕೆ 7760009789 ಸಂಖ್ಯೆಯನ್ನು ಆರಂಭಿಸಿದೆ. ಜಿಲ್ಲಾ ವಿಪತ್ತು ತುರ್ತು ನಿರ್ವಾಹಣಾ ಕೇಂದ್ರ1077ನಲ್ಲಿ ಆರಂಬಿಸಲಾಗಿದೆ.ಇನ್ನು ನಗರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಾಡಿದಲ್ಲಿ ದೂರು/ಕುಂದುಕೊರತೆಗಳಿಗಾಗಿ 08472- 237247 (ಟೋಲ್ ಪ್ರೀ ನಂ. 18004258247), ಎಲ್ ಆಂಡ್ ಟಿ ಕಂಪನಿ, ಕೆಯುಐಡಿಎಫ್‍ಸಿ, ಸಂಖ್ಯೆ 0872-241364 ಗೂ ಕರೆ ನೀಡಿ ದೂರು ದಾಖಲಿಸಬಹುದಾಗಿದೆ.
ಕೊಳವೆ ಬಾವಿಗಳಿಂದ ಹಾಗೂ ಇತರ ಮೂಲಗಳಿಂದ 8 ಎಂಎಲ್‍ಡಿ ನೀರನ್ನು ನಗರಕ್ಕೆ ಒದಗಿಸಲಾಗುತ್ತಿದೆ. ಈ ವರ್ಷ ಮಳೆಯ ಅಭಾವದಿಂದಾಗಿ, ಸರಡಗಿ ಬ್ಯಾರೇಜಿನಲ್ಲಿ ನೀರಿನ ಅಭಾವ ಉಂಟಾಗುವ ಪರಿಸ್ಥಿತಿಯು ಇದ್ದು, ಸದರಿ ಅಭಾವವನ್ನು ಸರಿಪಡಿಸಲು ಈಗಾಗಲೇ 2 ಟಿ.ಎಂ.ಸಿ ನೀರನ್ನು ಜಲಾಶಯದಲ್ಲಿ ಕಾಯ್ದಿರಿಸಲು ಸಂಬಂಧಪಟ್ಟ ಕೆಬಿಜೆಎನ್.ಎಲ್ ಅದಿಕಾರಿಗಳಿಗೆ ಜಿಲ್ಲಾಡಳಿತ ಮುಖಾಂತರ ಕೋರಲಾಗಿದೆ ಎಂದರು.
ಮುಂಜಾಗ್ರತ ಕ್ರಮಕ್ಕಾಗಿ 40 ಟ್ಯಾಂಕರ್‌ಗಳನ್ನು ಕಾಯ್ದಿರಿಸಲಾಗಿದೆ. ಸಂಖ್ಯೆಗಳನ್ನು ಹೆಚ್ಚಿಸಲಾಗುವುದು. ಪ್ರಸ್ತುತ 7 ಟ್ಯಾಂಕರ್‌ಗಳು ಲಭ್ಯವಿದ್ದು, ಅವಶ್ಯಕತೆ ಅನುಗುಣವಾಗಿ ಟ್ಯಾಂಕರ್‌ಗಳ ನಗರದ ಸಾರ್ವಜನಿಕರು ಕುಡಿಯುವ , ಇದರೊಂದಿಗೆ ಮಹಾನಗರ ಪಾಲಿಕೆಯ ಅಬಿಯಂತರರು ಹಾಗೂ ನೈರ್ಮಲ್ಯ ನೀರೀಕ್ಷಕರು ಒಳಗೊಂಡ ‘ತುರ್ತು ಪರಿಹಾರ ತಂಡ ಪ್ರತಿ ವಾರ್ಡ್‍ಗಳಲ್ಲಿ ನಿಯೋಜಿಸಿ ಕಾರ್ಯನಿರ್ವಹಿಸಲು ಆದೇಶಿಸಲಾಗಿದೆ. ವಿವಿಧ ಅನುದಾನದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ 100 ಹೊಸ ಕೊಳವೆ ಬಾವಿಗಳು ಕೊರೆಸಲು ಅನುಮೋದನೆಯನ್ನು ಪಡೆಯಲಾಗಿದೆ. ಈ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಪ್ರಕಟಣೆಯನ್ನು ಹೊರಡಿಸಲಾಗಿರುತ್ತದೆ ಎಂದು ವಿವರಿಸಿದರು.