ಮಾಗಡಿ: ಶಾಸಕ ಬಾಲಕೃಷ್ಣ ಮತದಾರರಿಗೆ ನೀಡಿರುವ ಗಿಫ್ಟ್ ಕಾರ್ಡ್‌ಗಳಿಗೆ ನಾವೀಗ ಗಿಫ್ಟ್ ನೀಡುತ್ತೇವೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.
ಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಬಾಲಕೃಷ್ಣ್ಣಮತದಾರರಿಗೆ ಗಿಫ್ಟ್ ಕಾರ್ಡ್ ಕೊಟ್ಟು ಗೆದ್ದುಕೊಂಡರು. ಆದರೆ ಇದುವರೆಗೂ ಆ ಕಾರ್ಡ್‌ಗಳಿಗೆ ಯಾವುದೇ ರೀತಿಯ ಗಿಫ್ಟ್‌ಗಳನ್ನು ಕೊಡದೆ ವಂಚಿಸಿದ್ದಾರೆ. ಈಗ ನಮ್ಮ ಕಾರ್ಯಕರ್ತರಿಗೆ ತಿಳಿಸಿ ಗಿಫ್ಟ್ ಕಾರ್ಡ್‌ಗಳನ್ನು ನಮಗೆ ನೀಡಿ, ತಮ್ಮ ಹೆಸರು ಮತ್ತು ಫೋನ್ ನಂಬರ್ ಬರೆಸಿದರೆ, ನಾವೇ ಗಿಫ್ಟ್‌ಗಳನ್ನು ಕೊಡುತ್ತೇವೆ. ನಿಮಗಾಗಿರುವ ವಂಚನೆಯನ್ನು ನಾವೇ ಸರಿಪಡಿಸುತ್ತೇವೆ. ಮಾಗಡಿ, ರಾಮನಗರ, ಕುಣಿಗಲ್ ಸೇರಿದಂತೆ ಎಲ್ಲೆಲ್ಲಿ ಗಿಫ್ಟ್ ಕಾರ್ಡ್‌ಗಳನ್ನು ಹಂಚಿದ್ದಾರೊ, ಅಲ್ಲಲ್ಲಿ ನಮ್ಮ ಕಾರ್ಯಕರ್ತರಿಗೆ ಕಾರ್ಡ್‌ಗಳನ್ನು ನೀಡಿದರೆ ಗಿಫ್ಟ್‌ಗಳನ್ನು ನೀಡಲು ಸಿದ್ದರಿದ್ದೇವೆ ಎಂದು ಮಾಜಿ ಶಾಸಕರು ಭರವಸೆ ನೀಡಿದರು.ಮತದಾನದ ವೇಳೆ 10ರಿಂದ 15 ಸಾವಿರ ಬೆಲೆ ಬಾಳುವ ಗಿಫ್ಟ್‌ಗಳನ್ನು ಕೊಡುತ್ತೇವೆ ಎಂದು ಶಾಸಕ ಬಾಲಕೃಷ್ಣ್ಣ ಮತದಾರರಿಗೆ ವಂಚಿಸಿದ್ದರು. ಈಗ ಆ ಗಿಫ್ಟ್ ಕಾರ್ಡ್‌ಗಳ ಅವಧಿ ಮುಗಿಯುತ್ತಿದ್ದು, ನಾವೇ ಗಿಫ್ಟ್ ಕೊಡಲು ಮುಂದಾಗಿದ್ದೇವೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಶಾಸಕರು ಟಾಂಗ್ ನೀಡಿದರು.
ಗಿಫ್ಟ್ ಕಾರ್ಡ್‌ಗಳ ಮೂಲಕ ಗೆದ್ದಿರುವ ಅಭ್ಯರ್ಥಿಯನ್ನು ಮತ್ತೆ ಈ ಗಿಫ್ಟ್ ಕಾರ್ಡ್ ಮೂಲಕವೇ ಸೋಲಿಸುವ ಗುರಿ ಇಟ್ಟುಕೊಂಡಿದ್ದು, ಜೆಡಿಎಸ್ ಮತ್ತು ಬಿಜೆಪಿ ಒಗ್ಗೂಡಿ ಮುಂಬರುವ ಚುನಾವಣೆಯನ್ನು ಎದುರಿಸುತ್ತೇವೆ ಎಂಬುದು ಗೊತ್ತಿದೆ. ಚುನಾವಣೆ ಬರಲಿ ನಮ್ಮ ಹತ್ತಿರ ಸಾಕಷ್ಟು ಬಾಣಗಳಿದ್ದು ಎಲ್ಲದಕ್ಕೂ ಸರಿಯಾದ ಉತ್ತರ ಕೊಡುತ್ತೇವೆ ಎಂದು ಮಂಜುನಾಥ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ, ರಾಜೇಶ್, ಬಾಲಾಜಿ, ಹನುಮಂತೇಗೌಡ, ಜೆಡಿಎಸ್ ಮುಖಂಡರಾದ ಗುಡ್ಡೆಗೌಡ, ನಯಾಜ್, ಶಿವರಾಮ, ಪುರಸಭಾ ಸದಸ್ಯ ಕೆ.ವಿ.ಬಾಲು, ಎಂ.ಎನ್. ಮಂಜು, ಕೆಂಪೇಗೌಡ, ಕೆಂಪಸಾಗರ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಪೋಟೋ 13ಮಾಗಡಿ1:ಮಾಗಡಿಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಮುಖಂಡ ಪ್ರಸಾದ್ ಗೌಡ ಮತ್ತಿತರರಿದ್ದರು.