ಬೆಳಗಲಿಯಲ್ಲಿ ಕಳೆಗಟ್ಟಿದ ಸಂಕ್ರಾಂತಿ ಸಂಭ್ರಮ

KannadaprabhaNewsNetwork | Published : Jan 16, 2024 1:45 AM

ಸಾರಾಂಶ

ಮಹಾಲಿಂಗಪುರ: ಇಂದಿನ ಅಂತರ್ಜಾಲ, ಮೊಬೈಲ್ ಯುಗದಲ್ಲಿ ಸ್ನೇಹ, ಪ್ರೀತಿಗಳು ಅಪರೂಪವಾಗಿವೆ. ಟಿವಿ ಪರದೆಯೇ ಎಲ್ಲರ ಬದುಕಿನ ಜೀವಾಳವಾಗಿದ್ದು, ನಮ್ಮ ಸಂಸ್ಕೃತಿಯ ಬಹುಮುಖ್ಯ ಭಾಗ ಅತಿಥಿಗಳ ಸತ್ಕಾರ ಕಣ್ಮರೆಯಾಗುತ್ತಿದೆ ರನ್ನ ಬೆಳಗಲಿಯ ದುಂಡಪ್ಪ ಭರ್ಮನಿ ಕಳವಳ ವ್ಯಕ್ತಪಡಿಸಿದರು. ಹಾಲಿಂಗಪುರದ ರನ್ನ ಬೆಳಗಲಿಯ ಶ್ರೀ ಮಹಾಲಿಂಗೇಶ್ವರ ಪಪೂ ಕಾಲೇಜಿನಲ್ಲಿ ನಡೆದ ನಮ್ಮ ಸಂಸ್ಕೃತಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಎಳ್ಳು ಬೆಲ್ಲ ಹಂಚುವ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದಿನ ಜನರು ಸಮಯದ ಅಭಾವದ ನೆಪ ಹುಡುಕಿಕೊಂಡಿದ್ದಾರೆ. ಇದು ನಗರದ ಎಲ್ಲಾ ಮನೆ ಮನೆ ಕತೆಯಾದರೆ, ಹಳ್ಳಿಗಳು ಸಂಸ್ಕೃತಿಯ ತವರು. ಗ್ರಾಮೀಣ ಜನತೆ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುತ್ತಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಇಂದಿನ ಅಂತರ್ಜಾಲ, ಮೊಬೈಲ್ ಯುಗದಲ್ಲಿ ಸ್ನೇಹ, ಪ್ರೀತಿಗಳು ಅಪರೂಪವಾಗಿವೆ. ಟಿವಿ ಪರದೆಯೇ ಎಲ್ಲರ ಬದುಕಿನ ಜೀವಾಳವಾಗಿದ್ದು, ನಮ್ಮ ಸಂಸ್ಕೃತಿಯ ಬಹುಮುಖ್ಯ ಭಾಗ ಅತಿಥಿಗಳ ಸತ್ಕಾರ ಕಣ್ಮರೆಯಾಗುತ್ತಿದೆ ರನ್ನ ಬೆಳಗಲಿಯ ದುಂಡಪ್ಪ ಭರ್ಮನಿ ಕಳವಳ ವ್ಯಕ್ತಪಡಿಸಿದರು.

ಹಾಲಿಂಗಪುರದ ರನ್ನ ಬೆಳಗಲಿಯ ಶ್ರೀ ಮಹಾಲಿಂಗೇಶ್ವರ ಪಪೂ ಕಾಲೇಜಿನಲ್ಲಿ ನಡೆದ ನಮ್ಮ ಸಂಸ್ಕೃತಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಎಳ್ಳು ಬೆಲ್ಲ ಹಂಚುವ ಮೂಲಕಉದ್ಘಾಟಿಸಿ ಮಾತನಾಡಿ, ಇಂದಿನ ಜನರು ಸಮಯದ ಅಭಾವದ ನೆಪ ಹುಡುಕಿಕೊಂಡಿದ್ದಾರೆ. ಇದು ನಗರದ ಎಲ್ಲಾ ಮನೆ ಮನೆ ಕತೆಯಾದರೆ, ಹಳ್ಳಿಗಳು ಸಂಸ್ಕೃತಿಯ ತವರು. ಗ್ರಾಮೀಣ ಜನತೆ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುತ್ತಿದ್ದಾರೆ ಎಂದ ಅವರು, ನಮ್ಮ ದೇಸಿ ಸಂಸ್ಕೃತಿ ಅಡಗಿರುವುದೇ ಹಳ್ಳಿಗಳಲ್ಲಿ. ಈ ಹಬ್ಬಅಪರೂಪವೆಂಬಂತೆ ಹಲವು ವರ್ಷಗಳ ನಂತರ ಜ.15ಕ್ಕೆ ಬರುತ್ತದೆ. ಈ ವರ್ಷ ಜ.15ಕ್ಕೆ ಬಂದಿರುವುದು ಈ ಘಟನೆಗೆ ನಾವೆಲ್ಲರೂ ಸಾಕ್ಷಿಯಾಗಿರುವುದು ನಮ್ಮ ಭಾಗ್ಯ. ಸೂರ್ಯನು ಧನುರಾಶಿಯ ಮನೆಯಿಂದ ಮಕರರಾಶಿಯ ಮನೆಯತ್ತ ಚಲಿಸುವ ಪರ್ವಕಾಲ ಅಥವಾ ಪರ್ವದಿನವೆಂದು ಮಕರಸಂಕ್ರಾಂತಿ ಹಬ್ಬ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಯುವ ನಾಯಕ ಪಂಡಿತ ಪೂಜಾರಿ ಮಾತನಾಡಿ, ಹಬ್ಬಗಳ ದೇಶ ಭಾರತ ಭಾರತದಲ್ಲಿ 29 ರಾಷ್ಟ್ರೀಯ ಹಬ್ಬಗಳಿವೆ. ಮಕರ ಸಂಕ್ರಾಂತಿ ಭಾರತೀಯರ ಪಾಲಿನ ಅತ್ಯಂತ ಮಂಗಳಕರ ಹಬ್ಬ. ಜನವರಿ ಮೂರನೇಯ ವಾರದಲ್ಲಿ ದೇಶದ ಎಲ್ಲಾ ಭಾಗಗಳಲ್ಲಿಯೂ ಸಂಕ್ರಾಂತಿಯ ಸುಗ್ಗಿ ಹಬ್ಬವನ್ನು ಅತ್ಯಂತ ಶ್ರದ್ಧೆ, ಭಕ್ತಿಯೊಂದಿಗೆ ಎಲ್ಲ ವರ್ಗದ ಜನರು ಆಚರಿಸುತ್ತಾರೆ. ಮಕರಸಂಕ್ರಾಂತಿಯು ಆತ್ಮಪ್ರಕಾಶ್ ಅಥವಾ ಆತ್ಮಜ್ಯೋತಿಯನ್ನು ಸಂಕೇತಿಸುತ್ತದೆ, ನಮಗೆಲ್ಲಾ ಸಮೃದ್ಧ ಫಸಲನ್ನು ನೀಡಿ ನಮ್ಮ ಹಸಿವನ್ನು ಇಂಗಿಸಲು ನೆರವಾಗುವ ದೇವತೆಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿ ಆಚರಿಸಲ್ಪಡುತ್ತದೆ ಎಂದು ಹೇಳಿದರು.

ಗ್ರಾಮದಲ್ಲಿ ಹಬ್ಬದ ಸಂಭ್ರಮ: ಎಸ್.ಜಿ.ಎಂ. ಪಿಯು ಕಾಲೇಜಿನ ವಿದ್ಯಾರ್ಥಿಗಳು ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಆಧುನಿಕಯ ಮಧ್ಯೆಯೂ ದೇಸಿ ಉಡುಗೆ ಸೀರೆ ಧರಿಸಿ ಜವಾರಿ ಅಡುಗೆ ಮಾಡಿಕೊಂಡು ಬಂದು ಪ್ರದರ್ಶನ ಮಾಡಿದರು. ಊರತುಂಬ ಎತ್ತಿನ ಬಂಡಿ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಬಗೆ ಬಗೆ ಕಲಾಮೇಳಗಳ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು. ಅಮೀನಗಡ ವಿದ್ಯಾರ್ಥಿನಿಯರ ಡೊಳ್ಳಿನ ತಂಡದ ಪ್ರದರ್ಶನ ಗಮನ ಸೆಳೆಯಿತು. ಊರ ತುಂಬೆಲ್ಲ ಹಬ್ಬದ ವಾತಾವರಣ ಕಳೆ ಕಟ್ಟಿತ್ತು. ಗ್ರಾಮದ ಜನರು ಪಾಲ್ಗೊಂಡು ಹಬ್ಬದ ಸಂಭ್ರಮಿಸಿದರು.

ಭೋರಿ ಭೋಜನ : ನೂರಕ್ಕೂ ಅಧಿಕ ವಿದ್ಯಾರ್ಥಿನಿಯರು 300ಕ್ಕೂ ಅಧಿಕ ಬಗೆ ಬಗೆಯ ಅಡುಗೆ ಸ್ವತಃ ತಯಾರಿಸಿ ಉಣ ಬಡಿಸಿದರು. ಜೋಳ, ಗೋವಿನ ಜೋಳ, ಸಜ್ಜೆ ರೊಟ್ಟಿ, ಚಪಾತಿ, ಚಟ್ನಿ, ತರ ತರಹದ ಉಪ್ಪಿನ ಕಾಯಿ, ತರಕಾರಿ ಪಲ್ಯ, ಕಾಳು ಪಲ್ಯ, ಮೊಸರನ್ನ, ನುಚ್ಚು, ದೋಸೆ, ಉಪ್ಪಿಟ್ಟು, ಅವಲಕ್ಕಿ, ಅನೇಕ ತರಹದ ಹಿಂಡಿ, ಮೊಸರು, ಕೆಂಪು ಮೆಣಸಿನಕಾಯಿ ಖಾರ, ಹಪ್ಪಳ, ಮಾದೇಲಿ, ಹಾಲು, ತುಪ್ಪ, ಹೋಳಿಗೆ, ವಿವಿಧ ಬಗೆಯ ಹಸಿ ತರಕಾರಿ, ಸಿಹಿ ತಿಂಡಿಗಳು, ಅನ್ನ, ಸಾಂಬಾರು ಹೀಗೆ ತಹರೇವಾರಿ ಭೋಜನ ಭಾಗವಹಿಸಿದವರ ಬಾಯಿಯಲ್ಲಿ ನೀರು ತರಿಸಿತು. ದೇವಿಗೆ ಪೂಜೆ ಸಲ್ಲಿಸಿದ ನಂತರ ಎಲ್ಲರೂ ಸಂಕ್ರಾಂತಿ ಭೋಜನ ಸವಿದರು.

ಸಂಕ್ರಾಂತಿ ಸಂಭ್ರಮದಲ್ಲಿ ಗಣ್ಯರಾದ ದರೇಪ್ಪಣ್ಣ ಸಾಂಗ್ಲೀಕರ, ಸಿದ್ದುಗೌಡ ಪಾಟೀಲ, ಶಿವನಗೌಡ ಪಾಟೀಲ, ಚಿಕ್ಕಪ್ಪ ನಾಯಕ್, ಸಂಗನಗೌಡ ಬಿ. ಪಾಟೀಲ, ಶ್ರೀಮಂತ ಒಂಟಗೋಡಿ, ಮಹಾಲಿಂಗಪ್ಪ ಗುಂಜಿಗಾಂವಿ, ಪುಟ್ಟು ಕುಲಕರ್ಣಿ, ಗುರುನಾಥ ಹಿಪ್ಪರಗಿ, ಮಲ್ಲು ಕ್ವಾನ್ಯಾಗೋಳ, ಮುತ್ತಪ್ಪ ಹೊಸಪೇಟಿ, ಪ್ರಾಚಾರ್ಯ ಪಿ.ಎಚ್. ನಾಯಿಕ, ಆನಂದ ಪಾಟೀಲ, ಮುತ್ತಪ್ಪ ಸಿದ್ದಾಪೂರ, ರಾಮನಗೌಡ ಪಾಟೀಲ, ಮಹಾಲಿಂಗ ಪುರಾಣಿಕ, ಶ್ರೀಮಂತ ಒಂಟಗೋಡಿ, ಪ್ರವೀಣ ಬರಮನಿ, ಲಕ್ಕಪ್ಪ ಹಾರೂಗೇರಿ, ಗಂಗಪ್ಪ ಬೀಸನಕೊಪ್ಪ, ಕೆ.ಬಿ. ಕುಂಬಾಳಿ, ಮಹದೇವ ಕುಲಗೋಡ, ಗುರುನಾಥ ಹಿಪ್ಪರಗಿ, ಸಂಗಪ್ಪ ಅಮಾತಿ, ರಾಘವೇಂದ್ರ ನೀಲನ್ನವರ, ಎ.ಜಿ. ಮೂಡಲಗಿ, ಎಂ.ಎಸ್. ಗಾಣಿಗೇರ, ಎಸ್.ಬಿ. ರಡ್ಡೇರಟ್ಟಿ, ಶ್ರೀಕಾಂತ ಕೆಂದೂಳಿ, ಪರಮಾನಂದ ಆಲಗೂರ ಸೇರಿದಂತೆ ಊರಿನ ಗಣ್ಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

Share this article