ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧನಿಗೆ ಅದ್ದೂರಿ ಸ್ವಾಗತ

KannadaprabhaNewsNetwork | Published : Aug 9, 2024 12:33 AM

ಸಾರಾಂಶ

ದೇಶ ಸೇವೆ ಮಾಡುತ್ತಿರುವ ನಮಗೆ ಇನ್ನು ಹಲವಾರು ವರ್ಷಗಳ ಕಾಲ ದೇಶ ಸೇವೆ ಮಾಡಬೇಕೆಂಬ ಬಯಕೆ ಇದೆ,

ಕನ್ನಡಪ್ರಭ ವಾರ್ತೆ ಬೆಟ್ಟದಪುರಭಾರತೀಯ ಸೇನೆಯಿಂದ 32 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿ ಗ್ರಾಮಕ್ಕೆ ಆಗಮಿಸಿದ ಪಿರಿಯಾಪಟ್ಟಣ ತಾಲೂಕಿನ ಹಸುವಿನ ಕಾವಲು ಗ್ರಾಮದ ಯೋಧ ಸುಬ್ರಹ್ಮಣ್ಯ ನಾಯಕ ಅವರನ್ನು ಬುಧವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಬೆಟ್ಟದಪುರದ ನಾಗರಿಕ ವೇದಿಕೆ, ಜಯ ಕರ್ನಾಟಕ ಸಂಘಟನೆ, ಹಸಿರು ಸೇನೆ, ರೈತ ಸಂಘ, ಮೆಕಾನಿಕ್ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ನಿವೃತ್ತ ಯೋಧ ಸುಬ್ರಮಣ್ಯ ನಾಯಕ್ ಅವರನ್ನು ಗ್ರಾಮದ ಪೊಲೀಸ್ ಠಾಣಾ ಆವರಣದಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ದಾರಿಯುದ್ದಕ್ಕೂಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.ನಿವೃತ್ತ ಯೋಧ ಸುಬ್ರಮಣ್ಯ ನಾಯಕ ಮಾತನಾಡಿ, ದೇಶ ಸೇವೆ ಮಾಡುತ್ತಿರುವ ನಮಗೆ ಇನ್ನು ಹಲವಾರು ವರ್ಷಗಳ ಕಾಲ ದೇಶ ಸೇವೆ ಮಾಡಬೇಕೆಂಬ ಬಯಕೆ ಇದೆ, ಆದರೆ ವಯಸ್ಸು ಮತ್ತು ನಮ್ಮ ಕುಟುಂಬದವರನ್ನು ಜೊತೆಯಲ್ಲಿ ಕಾಲ ಕಳೆಯಬೇಕು, ವಯಸ್ಸಾದ ನಂತರ ನಿವೃತ್ತಿ ಹೊಂದಲೇಬೇಕು. ಈ ಸಂದರ್ಭದಲ್ಲಿ ಗ್ರಾಮಸ್ಥರು ನನ್ನನ್ನು ಅದ್ದೂರಿಯಾಗಿ ಸ್ವಾಗತ ಮಾಡುತ್ತಿರುವುದು ದೇಶ ಸೇವೆಗೆ ಸೇರುವಂತ ಯುವಕರಿಗೆ ಒಂದು ಆದರ್ಶ ದಾಯಕವಾಗಲಿದೆ ಎಂದು ತಿಳಿಸಿದರು.ಜಯ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷ ಕುಮಾರ್ ಮಾತನಾಡಿ, ದೇಶ ಸೇವೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ನಮ್ಮೆಲ್ಲರ ರಕ್ಷಣೆಗೋಸ್ಕರ ಜೀವನದ ಹಂಗು ತೊರೆದು ಬೆಟ್ಟ, ಗುಡ್ಡಗಳ ಮೇಲೆ ಹಿಮಪಾತಗಳಲ್ಲಿ ಜೀವನ ಸಾಗಿಸಬೇಕು, ಅಂತಹ ಜೀವನವನ್ನು ನಡೆಸಿ 32 ವರ್ಷಗಳ ಕಾಲ ದೇಶ ಸೇವೆ ಮಾಡಿದ ಸುಬ್ರಹ್ಮಣ್ಯ ನಾಯಕ ಅವರು ನಮ್ಮ ತಾಲೂಕಿನ ಹೆಮ್ಮೆಯ ಪುತ್ರ ಎಂದರು.ರುದ್ರೇಶ್, ಗೋವಿಂದ, ಮಂಜುನಾಥ್, ಶಿವಕುಮಾರ್ ಸ್ವಾಮಿ ಬಳಗದ ಅಧ್ಯಕ್ಷ ಶಿವಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಅರುಣ್ ರಾಜ ಅರಸ್, ಎಸ್ ಮಲ್ಲೇಶ್, ಭಾರತೀಯ ಯೋಧರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.ನಿವೃತ್ತ ಶಿಕ್ಷಕರು, ವರ್ತಕರು, ರಾಜಸ್ಥಾನ ಸಮಾಜದ ಮುಖಂಡರು, ಬೆಟ್ಟದಪುರ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಉಪ್ಪಾರ ಸಮಾಜದ ಮುಖಂಡರು, ನಾಯಕ ಸಮಾಜದ ಮುಖಂಡರು, ಒಕ್ಕಲಿಗ ಸಂಘದ ಮುಖಂಡರು, ವಿಶ್ವಕರ್ಮ ಸಮಾಜದ ಮುಖಂಡರು, ಸವಿತಾ ಸಮಾಜದ ಮುಖಂಡರು ಹಾಗೂ ಎಲ್ಲ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this article