ಜನರ ಋಣ ತೀರಿಸಲಾಗದವರಿಗೆ ಅಧಿಕಾರವೇಕೆ: ಇಕ್ಬಾಲ್ ಹುಸೇನ್

KannadaprabhaNewsNetwork |  
Published : Sep 18, 2025, 01:10 AM IST
17ಕೆಆರ್ ಎಂಎನ್ 1.ಜೆಪಿಜಿರಾಮನಗರದ ಕಾಳಿಕಾಂಬ ದೇವಾಲಯದ ಎದುರಿನ ಆವರಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನಾವು ಜಿಲ್ಲೆಯ ಮಕ್ಕಳು. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇವೆ. ದುರಹಂಕಾರ ಅಥವಾ ಮೋಜಿಗಾಗಿ ಅಧಿಕಾರ ಬೇಕಾಗಿಲ್ಲ. ನೀವು ನೀಡಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿ ಕೆಲಸ ಮಾಡುತ್ತೇವೆ.

ಕನ್ನಡಪ್ರಭ ವಾರ್ತೆ ರಾಮನಗರ ರಾಮನಗರ ಕ್ಷೇತ್ರದಿಂದ 25 - 30 ವರ್ಷಗಳಿಂದ ಚುನಾಯಿತರಾಗಿ ಉನ್ನತ ಹುದ್ದೆ ಅಲಂಕರಿಸಿದವರು ವಿಶ್ವಕರ್ಮ ಸೇರಿದಂತೆ ಯಾವುದೇ ಸಮುದಾಯಗಳಿಗೆ ಗುರುತರವಾದ ಕೊಡುಗೆಗಳನ್ನು ನೀಡಲೇ ಇಲ್ಲ. ಜನರ ಋಣ ತೀರಿಸಲಾಗದವರು ಮತ ಪಡೆದು ಗೆದ್ದು ಏನು ಪ್ರಯೋಜನ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ವಾಗ್ದಾಳಿ ನಡೆಸಿದರು.ನಗರದ ಕಾಳಿಕಾಂಬ ದೇವಾಲಯದ ಎದುರಿನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರು 25 ವರ್ಷಗಳಿಂದ ಮತ ನೀಡುತ್ತಾ ಬಂದರು. ಅವರಿಗಾಗಿ ಒಂದು ನಿವೇಶನ, ಮನೆ, ಸಮುದಾಯ ಭವನ ನಿರ್ಮಿಸಿಕೊಡಲಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಲಿಲ್ಲ. ಹೀಗಾದರೆ ಅವರಿಗೆಲ್ಲ ಅಧಿಕಾರ ಏಕೆ ಬೇಕು ಎಂದು ಪ್ರಶ್ನಿಸಿದರು.ನಾವು ಜಿಲ್ಲೆಯ ಮಕ್ಕಳು. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇವೆ. ದುರಹಂಕಾರ ಅಥವಾ ಮೋಜಿಗಾಗಿ ಅಧಿಕಾರ ಬೇಕಾಗಿಲ್ಲ. ನೀವು ನೀಡಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿ ಕೆಲಸ ಮಾಡುತ್ತೇವೆ. ನಮಗೂ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಹಾಗೂ ಬಡವರ ಪರವಾಗಿ ನಿಲ್ಲುವ ಹತ್ತು ಹಲವು ಕನಸುಗಳಿವೆ. ನೀವುಗಳನ್ನು ನಮ್ಮನ್ನು ಎದೆಯಲ್ಲಿ ತುಂಬಿಕೊಳ್ಳಬೇಕು ಎಂದು ಹೇಳಿದರು.ನೀವು ಕೊಟ್ಟ ಶಕ್ತಿಯಿಂದ ಕಡು ಬಡವರಿಗೆ ನಿವೇಶನ, ಶುದ್ಧ ಕುಡಿಯುವ ನೀರು, 300 ಕೋಟಿ ವೆಚ್ಚದಲ್ಲಿ ಮೂಲಭೂತ ಸೌಕರ್ಯ,156 ಕೋಟಿ ವೆಚ್ಚದಲ್ಲಿ ಅರ್ಕಾವತಿ‌ ನದಿ ದಡದಲ್ಲಿ ವಾಕಿಂಗ್ ಪಾಥ್, ನಗರ ಸಾರಿಗೆ ವ್ಯವಸ್ಥೆ, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಹಲವು ವರ್ಷಗಳಿಂದ ವಿಶ್ವಕರ್ಮ ಭವನ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದು ಸಮುದಾಯದ ಮುಖಂಡರು ನನ್ನ ಗಮನ ಸೆಳೆದಿದ್ದಾರೆ. ಸಮುದಾಯದಲ್ಲಿ 20 ಲಕ್ಷ ರು. ಇದ್ದು, ಉಳಿದ ಹಣ ವನ್ನು ನನ್ನ ಅನುದಾನದಲ್ಲಿ ನೆರವು ನೀಡುತ್ತೇನೆ. ಇಲ್ಲಿವರೆಗೆ ಚುನಾಯಿತರಾದವರು ರಾಮನಗರದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಇಕ್ಬಾಲ್ ಹುಸೇನ್ ಕಿಡಿಕಾರಿದರು.ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಮಾತನಾಡಿ, ಹಿಂದುಳಿದ ಜಾತಿಗಳಲ್ಲಿ ಬರುವ 101 ಸಮಾಜಗಳು ತಾರತಮ್ಯ ಮಾಡಿಕೊಳ್ಳದೆ ಒಗ್ಗಟ್ಟು ಕಾಪಾಡಿಕೊಂಡು ಶ್ರಮಿಸಬೇಕು. ಆಗ ಮಾತ್ರ ಭವಿಷ್ಯದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ. ಸೆ.19ರಂದು ಜರುಗಲಿರುವ ದಿ.ದೇವರಾಜ ಅರಸು ಜಯಂತಿ ಸಮಾರಂಭದಲ್ಲಿ ಹಿಂದುಳಿದ ವರ್ಗದ ಎಲ್ಲ ಸಮಾಜವದರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ವಿಶ್ವಕರ್ಮ ಸಮುದಾಯದ ಮಾಜಿ ರಾಜ್ಯಾಧ್ಯಕ್ಷ ಬಿ.ಉಮೇಶ್ ಮಾತನಾಡಿಸ ವಿಶ್ವಕರ್ಮ ಜನಾಂಗದಲ್ಲಿ ಐದು ಉಪ ಕಸುಬುಗಳಿದ್ದು, ಎಲ್ಲರೂ ಗೌರವಯುತ ಕಾಯಕ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 30 ಲಕ್ಷ ಜನಸಂಖ್ಯೆ ಇದ್ದರು ಸಹ ಸರ್ಕಾರದ ಸವಲತ್ತುಗಳು, ರಾಜಕೀಯ ಸ್ಥಾನಮಾನಗಳು ಸಿಗುತ್ತಿಲ್ಲ. ಹಾಗಾಗಿ ಶಾಸಕರು ನಮ್ಮ ಸಮುದಾಯದ ಮುಖಂಡರಿಗೆ ನಾಮ ನಿರ್ದೇಶನ ಮಾಡುವ ಮೂಲಕ ಹೆಚ್ಚಿನ ರಾಜಕೀಯ ಸ್ಥಾನಮಾನ ಕಲ್ಪಿಸುವಂತೆ ವೇದಿಕೆಯಲ್ಲಿ ಮನವಿ ಮಾಡಿದರು.ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ರಾಜು ಮಾತನಾಡಿದರು. ಶ್ರೀಧರ್ ಅವರು ಉಪನ್ಯಾಸ ನಡೆಸಿಕೊಟ್ಟರು. ಸಮಾಜದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಶಿವಲಿಂಗಯ್ಯ, ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷೆ ಪವಿತ್ರಾ ಆರ್. ಗೌಡ, ಹಿಂದುಳಿದ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು, ತಾಲೂಕು ಅಧ್ಯಕ್ಷ ದೇವರಾಜು, ಜಿಪಂ ಮಾಜಿ ಸದಸ್ಯ ಕೃಷ್ಣಪ್ಪ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಲಿಂಗಾಚಾರ್, ಮಡಿವಾಳ‌ ಸಮುದಾಯದ ಜಿಲ್ಲಾಧ್ಯಕ್ಷ ಮಂಟೇದಯ್ಯ, ಸಮುದಾಯದ ಮುಖಂಡರಾದ ಬಸವಲಿಂಗಾಚಾರ್, ಶ್ರೀನಿವಾಸ ಮೂರ್ತಿ, ಶೈಲಜಾ ಶ್ರೀನಿವಾಸ್, ಲೋಕೇಶ್, ಇಂದುಮತಿ, ದೇವಕಿ, ಹಿಂದುಳಿದ ಸಮುದಾಯ ಪದಾಧಿಕಾರಿಗಳಾದ ನಾರಾಯಣ್, ಎಂಎನ್ ಆರ್ ರಾಜು, ಚಂದ್ರು ಮತ್ತಿತರರು ಉಪಸ್ಥಿತರಿದ್ದರು.--------17ಕೆಆರ್ ಎಂಎನ್ 1.ಜೆಪಿಜಿರಾಮನಗರದ ಕಾಳಿಕಾಂಬ ದೇವಾಲಯದ ಎದುರಿನ ಆವರಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ