ಕನ್ನಡಪ್ರಭ ವಾರ್ತೆ ಪಾವಗಡ ಈ ದೇಶದ ಜನಪರ ಆಡಳಿತ ಜಾರಿಗಾಗಿ ರಾಹುಲ್‌ಗಾಂಧಿ ಪ್ರಧಾನಿಯಾಗಬೇಕು. ಚಿತ್ರದುರ್ಗ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಹೆಚ್ಚು ಮತ ನೀಡುವ ಮೂಲಕ ತಮ್ಮ ಪುತ್ರ ಶಾಸಕ ಎಚ್.ವಿ.ವೆಂಕಟೇಶ್ ಅವರ ಗೌರವ ಕಾಪಾಡುವಂತೆ ಮಾಜಿ ಸಚಿವ ವೆಂಕಟರಮಣಪ್ಪ ಮನವಿ ಮಾಡಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಶನಿವಾರ ಪಟ್ಟಣದ ಎಸ್‌ಎಸ್‌ಕೆ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಮಾರಂಭದ ಮಾತನಾಡಿದರು.ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಹಾಗೂ ಮನೆಮನೆ ನೀರು ಸರಬರಾಜು, ತುಂಗಭದ್ರಾ ಯೋಜನೆ ಜಾರಿ ಸೇರಿದಂತೆ ರಸ್ತೆ ನಿರ್ಮಾಣ ಇತರೆ ಆನೇಕ ಪ್ರಗತಿ ಕಾರ್ಯಕ್ರಮ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಜಾರಿಯಾಗಿವೆ. ಜನಪರ ಆಡಳಿತಕ್ಕೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಶ್ರಮಿಸಿ ಎಂದರು.
ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ತಾವು ಸಚಿವರಾಗಿದ್ದ ವೇಳೆ ಭದ್ರಾಮೇಲ್ದಂಡೆ ಯೋಜನೆ ಜಾರಿಗೆ ತರಲಾಗಿತ್ತು. ಅನುದಾನ ಕಲ್ಪಿಸುವಲ್ಲಿ ಕೇಂದ್ರ ವಿಳಂಬ ಧೋರಣೆ ಅನುಸರಿಸುವ ಕಾರಣ ಯೋಜನೆಯ ಕಾಮಗಾರಿ ಪ್ರಗತಿ ಕಾಣುತ್ತಿಲ್ಲ. ಚಂದ್ರಪ್ಪರಿಗೆ ಹೆಚ್ಚು ಮತ ನೀಡುವ ರಾಹುಲ್ ಗಾಂಧಿ ಪ್ರಧಾನಿಯಾಗಲು ಶ್ರಮಿಸುವಂತೆ ಕರೆ ನೀಡಿದರು.ಮಾಜಿ ಸಚಿವ ಎಚ್.ಅಂಜನೇಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ರೈತ ಹಾಗೂ ಜನಪರ ಆಡಳಿತ ನೀಡುವಲ್ಲಿ ಜನತೆಯನ್ನು ವಂಚಿಸಿದ್ದಾರೆ. ಬರಗಾಲದಲ್ಲಿ ಗ್ಯಾರಂಟಿಯ ಯೋಜನೆ ಜನತೆಗೆ ವರದಾನವಾಗಿದೆ ಎಂದರು.
ಶಾಸಕ ಎಚ್.ವಿ.ವೆಂಕಟೇಶ್ ಮಾತನಾಡಿ, ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪರಿಗೆ ಉತ್ತಮ ಬಾಂಧವ್ಯ ಇತ್ತು. ಅದನ್ನ ಸಹಿಸದ ಕೆಲ ಸ್ಥಳೀಯ ಕುತಂತ್ರಿಗಳು ಚಂದ್ರಪ್ಪರನ್ನು ದಿಕ್ಕುತಪ್ಪಿಸಲು ಪ್ರಯತ್ನಿಸಿದ್ದು, ಎಲ್ಲರಿಗೂ ಗೊತ್ತಿದೆ. ತಾಲೂಕಿನಿಂದ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಚಂದ್ರಪ್ಪರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಇದೇ ವೇಳೆ ಮಾಜಿ ಸಚಿವ ಸಾಲಿಂಗಯ್ಯ ಹಾಗೂ ತಾ.ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ರಾಮಾಂಜಿನಪ್ಪ ಮುಖಂಡರಾದ ಎ.ಶಂಕರರೆಡ್ಡಿ, ಮಹಮ್ಮದ್ ಫಜುಲುಲ್ಲಾಸಾಬ್, ಮಾನಂ ವೆಂಕಟಸ್ವಾಮಿ ಶೇಷಗಿರಿ, ಕರೆಕ್ಯಾತನಹಳ್ಳಿ ಮಂಜುನಾಥ್, ಆರ್.ಕೆ.ನಿಸಾರ್, ಕೆ.ಎಸ್.ಪಾಪಣ್ಣ ಮೈಲಪ್ಪ, ನರಸಿಂಹರೆಡ್ಡಿ, ಪಿ.ಎಚ್.ರಾಜೇಶ್ ರವಿ, ಸುಜಿತ್, ಭೊಮ್ಮತನಹಳ್ಳಿ ತಿಪ್ಪೇಸ್ವಾಮಿ ದಾಸಭೋವಿ ಬಂಗಾರಪ್ಪ, ಕೇಶವ ಚಂದ್ರದಾಸ್, ದುಗ್ಯಪ್ಪ ಎಸ್,ಎನ್.ಹಳ್ಳಿ ಮಾರಪ್ಪ, ಬಾಲಸುಬ್ರಮಣ್ಯಂ, ಅನಿಲ್‌ಕುಮಾರ್, ಷಾಬಾಬು, ರಿಜ್ವಾನ್ ಸ್ಡುಡಿಯೋ ಅಮರ್ ಉಪಸ್ಥಿತರಿದ್ದರು.