ಮಹಿಳೆಯರು ಸಾಂಸ್ಕೃತಿಕ ರಾಯಬಾರಿಗಳು

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಮಹಿಳೆಯರು ಸಾಂಸ್ಕೃತಿಕ ರಾಯಬಾರಿಗಳು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಾಡಿನ ಸಂಸ್ಕೃತಿ ಜೀವಂತವಾಗಿ ಉಳಿಯಲು ಮಹಿಳೆಯ ಪಾತ್ರ ದೊಡ್ಡದಾಗಿದ್ದು, ಮಹಿಳೆಯರೇ ಸಾಂಸ್ಕೃತಿಕ ರಾಯಬಾರಿಗಳಾಗಿದ್ದಾರೆ ಎಂದು ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಎಸ್ ಸುಳಿಭಾವಿ ಹೇಳಿದರು.

ಅವರು ನಗರದ ಬಿ.ವ್ಹಿ.ವ್ಹಿ.ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ನಡೆದ ಹೊಸ ವರ್ಷ ಸಂಕ್ರಾಂತಿ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳು ಸಾಂಸ್ಕೃತಿಕ ನಾಡಿನ ಪ್ರತಿನಿಧಿಗಳಾಗಿ ಸಾವಿರಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ನಡೆ ನುಡಿ ಆಚಾರ ಸಂಪ್ರದಾಯ ಹಾಗೂ ಕಲೆಗಳು ಇಂದಿನವರೆಗೂ ಉಳಿದು ಬೆಳೆದು ಬರಲು ಹೆಣ್ಣು ಮಕ್ಕಳು ಪ್ರಮುಖ ಕಾರಣರಾಗಿದ್ದಾರೆ. ಆದ್ದರಿಂದ ಹೆಣ್ಣು ಮಕ್ಕಳು ಉತ್ತಮ ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದರೆ ಅವರ ಬದುಕು ಉತ್ತಮವಾಗಿರುತ್ತದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕೆಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಎಸ್.ಎಚ್.ಶೆಟ್ಟರ್ ಇವರು ಮಾತನಾಡಿ, ಹೆಣ್ಣು ಮಗಳು ಕೌಟುಂಬಿಕ ಮತ್ತು ಸಾಮಾಜಿಕ ಭದ್ರತೆ ಹೊಂದ ಬೇಕಾದರೆ ಅವಳು ಮೊದಲು ಶಿಕ್ಷಣವಂತಳಾಗಬೇಕು. ಇಂದಿನ ಆಧುನಿಕ ಸಂದರ್ಭದಲ್ಲಿ ಕೌಶಲಗೆ ಹೆಚ್ಚಿನ ಪ್ರಾಧ್ಯಾನತೆ ಇದ್ದು ನಿಮ್ಮಲ್ಲಿರುವ ಕೌಶಲ್ಯಗಳನ್ನು ತರಬೇತಿ ಗೊಳಿಸಿಕೊಂಡು ಆತ್ಮಸ್ಥೈರ್ಯದಿಂದ ಬದುಕುವುದರ ಜೊತೆಗೆ ಮಾನವೀಯ ಮೌಲ್ಯಗಳು ನಿಮ್ಮ ಬದುಕಿಗೆ ದಾರಿದೀಪವಾಗಲಿ, ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ ಶಿಕ್ಷಣದ ಜೊತೆಗೆ ಮಹಿಳೆಯರ ಭದ್ರತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜೆ. ಒಡೆಯರ್ ಅವರು ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಮ್ಕೃತಿ ತಿಳಿಯಲು, ನಮ್ಮ ಸಂಸ್ಕಾರ ನಮ್ಮ ಸಂಸ್ಕೃತಿ ಮತ್ತು ನಮ್ಮ ಪ್ರಾದೇಶಿಕ ಉಡುಗೆ ತೊಡುಗೆಗಳು, ಆಚರಣೆಗಳು, ಹಬ್ಬ ಹರಿದಿನಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಲು ಹಾಗೂ ಮುಂದಿನ ಜನಾಂಗ ಅದನ್ನು ಪಾಲಿಸಿ ಮುಂದುವರೆಸಿಕೊಂಡು ಹೋಗುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕಿ ಪಿ.ಕೆ.ಔಗಲ್, ಸಾಂಸ್ಕೃತಿಕ ವಿಭಾಗದ ಎ.ಎ.ಕುಂದರಿಮಠ ಸೇರಿದಂತೆ ಅನೇಕರು ಇದ್ದರು. ಡಾ.ಎಂ.ವಿ, ಬಾಜಪ್ಪನ್ನವರ ಪರಿಚಯಿಸಿದರು.

--

ಬಾಕ್ಸ್

ಸಂಕ್ರಾತಿ ಸುಗ್ಗಿ ಸಂಭ್ರಮ

ವಿದ್ಯಾರ್ಥಿಗಳು ಇಳಕಲ್ಲ ಸೀರೆಯಲ್ಲಿ ಮಿಂಚಿಸಿದರು. ಸಾಂಸ್ಕೃತಿಕ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರು ಕವಿಗೋಷ್ಠಿ, ಸುಗ್ಗಿ ನೃತ್ಯ ಜನಪದ ಹಾಡು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಅನೇಕ ವಿಜ್ಞಾನ, ಕೃಷಿ, ಆಧುನಿಕ ಯಂತ್ರ, ಪಾಸ್ಟ್‌ಫುಡ್‌, ಪ್ರಯೋಗಗಳನ್ನು ಹಾಗೂ ಮಾರ್ಕೇಟ್ ಫೇಸ್ಟ್ ಹಮ್ಮಿಕೊಂಡಿದ್ದರು. ಇದೇ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾಂಪ್ರದಾಯಕ ಸುಗ್ಗಿ ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು.

Share this article