ಮಹಿಳೆಯರು ಅಬಲೇಯರಲ್ಲ ಸಬಲರು: ಭಾರತಿ ವಸ್ತ್ರದ

KannadaprabhaNewsNetwork | Published : Apr 6, 2024 12:54 AM

ಸಾರಾಂಶ

ಮಹಿಳೆಯರು ಅಬಲೇಯರಲ್ಲ ಸಬಲರು ಅವರು ಕೂಡ ಪುರಷರಿಗೆ ಸರಿ ಸಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಬೀದರ್‌ ಅಧ್ಯಕ್ಷರಾದ ಭಾರತಿ ವಸ್ತ್ರದ ನುಡಿದರು.

ಬೀದರ್‌: ಮಹಿಳೆಯರು ಅಬಲೇಯರಲ್ಲ ಸಬಲರು ಅವರು ಕೂಡ ಪುರಷರಿಗೆ ಸರಿ ಸಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಬೀದರ್‌ ಅಧ್ಯಕ್ಷರಾದ ಭಾರತಿ ವಸ್ತ್ರದ ನುಡಿದರು.

ನಗರದ ನೌಬಾದನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಗೆ ಸಂವಿಧಾನಾತ್ಮಕ ಅನೇಕ ಸೌಲಭ್ಯಗಳು ಇವೆ ಅವೆಲ್ಲದರ ಸದುಪಯೋಗ ಮಾಡಿಕೊಂಡು ಮುಂದುವರೆದು ಗುರಿಯನ್ನು ತಲುಪಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಕಲಬುರಗಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಮಾತನಾಡಿ, ಇಂದಿನ ಯುವತಿಯರ ಮೇಲೆ ಗುರುತರ ಜವಾಬ್ದಾರಿ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸ್ತ್ರೀಯರಿಗೆ ಅಷ್ಟೊಂದು ಅವಕಾಶಗಳು ಇರಲಿಲ್ಲವಾದರೂ ಇಂದು ಮಹಿಳೆಯರು ಚಂದಿರನ ಅಂಗಳಕ್ಕೆ ತಲುಪಿದ್ದಾರೆ. ಆದರೆ ಎಲ್ಲಕ್ಕಿಂತ ವ್ಯಕ್ತಿತ್ವ ಮುಖ್ಯ ಜೀವನದಲ್ಲಿ ಅನೇಕ ಕಷ್ಟ ನಷ್ಟಗಳು ಎದುರಾಗುತ್ತವೆ. ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ನಿಂತು ಗುರಿ ಸಾಧನೆಯುತ್ತ ದಾಪುಗಾಲು ಹಾಕಬೇಕಾಗಿದೆ ಎಂದರು.ಸಮಾರಂಭದ ಅಧ್ಯಕ್ಷತೆವಹಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ಜಯಶ್ರೀ ಪ್ರಭಾ ಮಾತನಾಡಿ, ಮಹಿಳೆಯರು ಕೌಟಂಬಿಕ ಜವಾಬ್ದಾರಿಯೊಂದಿಗೆ. ಸಾಮಾಜಿಕ ಅನೇಕ ರಂಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹೆಣ್ಣು ಬರೀ ಅಲಂಕಾರಿಕ, ಭೋಗದ ವಸ್ತುವಲ್ಲ, ಅವಳಿಗೂ ಪುರಷರ ಸರಿಸಮ ನಿಲ್ಲುವ ಎಲ್ಲ ಶಕ್ತಿ ಸಾಮರ್ಥ್ಯಗಳಿವೆ. ಸಾಧನೆಗೆ ಕೊನೆ ಇಲ್ಲ ಆದರೆ ಈ ಶರೀರಕ್ಕೆ ಕೊನೆ ಇದೆ ಎಂದರು. ವಿದ್ಯಾರ್ಥಿನಿಯರು ತಮ್ಮಗೆ ಸಿಕ್ಕ ಅವಕಾಶಗಳು ಬಳಸಿಕೊಂಡು ಹೆತ್ತ ಮನೆಗೂ ಸಮಾಜಕ್ಕೂ ತಮ್ಮದೇ ಕಾಣಿಕೆ ನೀಡುವುದರ ಕಡೆ ಚಿಂತಿಸಿ ಮುಂದೆ ಸಾಗಬೇಕಾಗಿದೆ. ಅಲ್ಲದೆ ಯುವತಿಯರು ಸರಿಯಾದ ವಸ್ತ್ರ ಸಂಹಿತೆ ಪಾಲನೆ ಮಾಡಬೇಕು. ಯುವಕರೊಂದಿಗೆ ತಮ್ಮ ಅಂತರ ಕಾಯ್ದುಕೊಳ್ಳಬೇಕು ತಮಗೆ ಯಾವುದೇ ತೊಂದರೆಯಾದರೆ ಪಾಂಶುಪಾಲರ ಇಲ್ಲ ಪೋಲಿಸ್ ಇಲಾಖೆ ಗಮನಕ್ಕೆ ತರಬೇಕು ಎಂದರು.

ಸಮಾರಂಭದಲ್ಲಿ ಎಲ್ಲಾ ಅತಿಥಿಗಳು ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಕೋಡುಗೆಯನ್ನು ಸ್ಮರಿಸಿ ಅವರಿಗೆ ನುಡಿ ನಮಗಳನ್ನು ಸಲ್ಲಿಸಿದರು.

ಡಾ.ಶೀಲಾ.ಎನ್.ಎಸ್ ಅವರು ಮಹಿಳಾ ದಿನಾಚರಣೆ ಕಾರ್ಯಕ್ರಮದ ಕುರಿತು ಮಾತನಾಡಿದರು.

ವಿವಿಧ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅರ್ಜುಮಂದ ಅಜರ, ಡಾ.ರಾಜಕುಮಾರ ಆಲ್ಲೂರೆ, ಡಾ.ಸುಚಿತಾನಂದ ಮಲ್ಕಾಪೂರೆ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಾಗಿದ್ದರು. ಡಾ.ಮಹಾದೇವಿ ಹೆಬ್ಬಾಳೆ ನಿರೂಪಿಸಿದರು, ಪಾಳೇದ ಮಹೇಶ್ವರಿ ವಂದಿಸಿದರು.

Share this article