ಮಹಿಳೆಯರಿಗೆ ಕಾನೂನು ಜ್ಞಾನ ಅಗತ್ಯ

KannadaprabhaNewsNetwork |  
Published : Aug 04, 2025, 11:45 PM IST
೪ಕೆಎಲ್‌ಆರ್-೪ಕೋಲಾರದ ನಿಸ್ಸಾರ್ ನಗರದ ಅಂಗನವಾಡಿ ಕೇಂದ್ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಗಮನ ಮಹಿಳಾ ಸಮೂಹದಿಂದ ಕಾನೂನು ಅರಿವು ಕಾರ್ಯಕ್ರಮ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಮಗದ ಜಿಲ್ಲಾ ವ್ಯವಸ್ಥಾಪಕಿ ಶರೀನ್ ತಾಜ್ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಮಹಿಳೆಯರ ಮೇಲೆ ದೌರ್ಜನ್ಯ ಶೋಷಣೆ ವಿರುದ್ದ ಹೋರಾಡಲು ಪ್ರಮುಖವಾಗಿ ಕಾನೂನಿನ ಅರಿವು ಮುಖ್ಯವಾಗಿ ಅರಿತಿರಬೇಕು. ಅಲ್ಲದೆ. ಕೌಟುಂಬಿಕ ದೌರ್ಜನ್ಯ, ಆರೋಗ್ಯ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ ಈ ನಿಟ್ಟಿನಲ್ಲಿ ಗಮನ ಮಹಿಳಾ ಸಂಸ್ಥೆ ಮಹಿಳೆಯರಿಗೆ ಆರೋಗ್ಯ ಬಗ್ಗೆ ಅರಿವು, ಸುರಕ್ಷತೆಯ ಕುರಿತು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೋಲಾರಸಂವಿಧಾನ ಮತ್ತು ಕಾನೂನಿನ ಪ್ರಕಾರ ಹೆಣ್ಣು- ಗಂಡು ಸಮಾನರು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಹಾಗೂ ಶೋಷಣೆಯನ್ನು ತಡೆಗಟ್ಟುವ ಸಲುವಾಗಿ ಮಹಿಳೆಯರಿಗೆ ಕಾನೂನು ಅರಿವು ಪ್ರಮುಖ್ಯ ಪಾತ್ರ ವಹಿಸುತ್ತದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಮಗದ ಜಿಲ್ಲಾ ವ್ಯವಸ್ಥಾಪಕಿ ಶರೀನ್ ತಾಜ್ ಹೇಳಿದರು. ನಗರದ ನಿಸ್ಸಾರ್ ನಗರದ ಅಂಗನವಾಡಿ ಕೇಂದ್ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಗಮನ ಮಹಿಳಾ ಸಮೂಹದಿಂದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೌರ್ಜನ್ಯ ವಿರುದ್ಧ ಹೋರಾಟ

ಮಹಿಳೆಯರ ಮೇಲೆ ದೌರ್ಜನ್ಯ ಶೋಷಣೆ ವಿರುದ್ದ ಹೋರಾಡಲು ಪ್ರಮುಖವಾಗಿ ಕಾನೂನಿನ ಅರಿವು ಮುಖ್ಯವಾಗಿ ಅರಿತಿರಬೇಕು. ಅಲ್ಲದೆ. ಕೌಟುಂಬಿಕ ದೌರ್ಜನ್ಯ, ಆರೋಗ್ಯ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ ಈ ನಿಟ್ಟಿನಲ್ಲಿ ಗಮನ ಮಹಿಳಾ ಸಂಸ್ಥೆ ಮಹಿಳೆಯರಿಗೆ ಆರೋಗ್ಯ ಬಗ್ಗೆ ಅರಿವು, ಸುರಕ್ಷತೆಯ ಕುರಿತು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಹಿಳೆಯರು ಕಾನೂನಿನ ಕುರಿತು ಅರಿತುಕೊಂಡು ಸಂಘಟಿತರಾಗಬೇಕು ಎಂದು ಕಿವಿಮಾತು ಹೇಳಿದರು. ಗಮನ ಮಹಿಳಾ ಸಮೂಹದ ಸದಸ್ಯೆ ಲಕ್ಷಿ ಮಾತನಾಡಿ, ಮಹಿಳೆಯರು ಮೊದಲು ಸಂಘಟಿತರಾಗಬೇಕು, ಸರ್ಕಾರದ ವಿವಿಧ ಇಲಾಖೆಗಳಡಿ ದೊರೆಯಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗಬೇಕು. ಅಲ್ಲದೆ ತಮ್ಮ ಆರೋಗ್ಯ ಬಗ್ಗೆಯೂ ಕಾಳಜಿ ವಹಿಸಿಕೊಳ್ಳಬೇಕು ಎಂದರಲ್ಲದೆ, ವಿವಿಧ ಇಲಾಖೆಗಳಿಂದ ಮಹಿಳೆಯರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಮಾದಕವಸ್ತು ಬಳಸಬೇಡಿ

ಆರೋಗ್ಯ ಇಲಾಖೆಯ ಸಲಹಾ ಅಧಿಕಾರಿ ಮಹ್ಮದ್ ಮಾತನಾಡಿ, ಮಾದಕ ವಸ್ತುಗಳ ಬಳಕೆ ಮತ್ತು ತಂಬಾಕು ಉತ್ಪನ್ನಗಳ ಸೇವನೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರವಾಗಿ ಮಹಿಳೆಯರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಅನಿಲ್‌ಕುಮಾರ್, ಚೇತನ್, ಗಮನ ಸಂಸ್ಥೆಯ ಸದಸ್ಯೆ ಶಿಲ್ಪಾ ಸೇರಿದಂತೆ ಅಸ್ಲಾಂ, ಜೌಹಾರ್ ಭಾನು, ಸೀಮ ಅಂಜುಮ್, ಉಮ್ಮೆ ಅಲ್ಮಾಸ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ