ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ನಿವೃತ್ತ ಮುಖ್ಯಶಿಕ್ಷಕಿ ಜಾನಕಿ ಅಭಿಪ್ರಾಯಪಟ್ಟರು.ಪಟ್ಟಣದ ಸಾಗರ್ ಹೋಟೆಲ್ ಸಭಾಂಗಣದಲ್ಲಿ ಸ್ಪೂರ್ತಿ ಮಹಿಳಾ ಬಳಗದಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಹೆಣ್ಣು ಕುಟುಂಬದ ಕಣ್ಣು ಎನ್ನುವ ನಾಡ್ನುಡಿ ಅರ್ಥಪೂರ್ಣವಾದುದು. ಕೌಟುಂಬಿಕ ಆರೋಗ್ಯ ಚೆನ್ನಾಗಿದ್ದಾಗ ದೇಶದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದರು.
ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ ಹೆಣ್ಣು ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲಿಯೂ ತನ್ನ ಸಾಧನೆ ತೋರುತ್ತಿದ್ದಾಳೆ. ಇಂದಿನ ಮಹಿಳೆಯರು ಸರ್ವ ಕ್ಷೇತ್ರದ ನಿರ್ವಹಣೆಯಲ್ಲಿಯೂ ಸಶಕ್ತರಾಗಿದ್ದು, ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದನ್ನು ಎಲ್ಲರಿಗೂ ಅರಿವಾಗಿದೆ ಎಂದರು.ಮಹಿಳಾ ಸಭಲೀಕರಣಕ್ಕೆ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ರೂಪಿಸಿವೆ. ಸರ್ಕಾರದ ಸವಲತ್ತು ಮತ್ತು ಪ್ರೋತ್ಸಾಹದ ಲಾಭ ಪಡೆದು ಸಮಾಜ ಕಟ್ಟುವ ಕಾರ್ಯದಲ್ಲಿ ಮುನ್ನಡೆಯಬೇಕು. ಸಂಘ ಶಕ್ತಿಯ ಮೂಲಕ ಮಹಿಳೆಯರು ಸ್ವಯಂ ಉದ್ಯೋಗಿಗಳಾಗಿ ಆರ್ಥಿಕ ಸ್ವಾವಲಂಭನೆ ಸಾಧಿಸಬೇಕು ಎಂದರು.
ಇದೇ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಸ್ಫೂರ್ತಿ ಮಹಿಳಾ ಬಳಗದ ಪದಾಧಿಕಾರಿಗಳಾದ ಬಿ.ಸರ್ವಮಂಗಳ ಬಿ.ಎಲ್.ದೇವರಾಜು, ಉಪನ್ಯಾಸಕಿ ವೇದಾವತಿ, ಶಾರದಾ, ಸುಮಾರವಿಶಂಕರ್ ಸೇರಿದಂತೆ ಹಲವರು ಇದ್ದರು.ಕ್ಷಯಮುಕ್ತ ಗ್ರಾಪಂ ಮಾನದಂಡಗಳ ವರದಿ ಪರಿಶೀಲನೆ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಕ್ಷಯ ಮುಕ್ತ ಗ್ರಾಪಂ ಮಾನದಂಡಗಳ ಬಗ್ಗೆ ವರದಿ ಪರಿಶೀಲಿಸಿತು.ಗ್ರಾಪಂ ಅಧ್ಯಕ್ಷೆ ಉಮಾ ಅಧ್ಯಕ್ಷತೆಯಲ್ಲಿ ಡಾ.ರಂಜಿತ್ ಕುಮಾರ್ ಮತ್ತು ತಂಡ ಗ್ರಾಪಂಗೆ ಆಗಮಿಸಿ ಪರಿಶೀಲಿಸಿ ಕ್ಷಯ ಮುಕ್ತ ಗ್ರಾಪಂ ಮಾಡಲು ಬೇಕಾದ 6 ಮಾನ ದಂಡಗಳ ಬಗ್ಗೆ ಚರ್ಚಿಸಿ ವರದಿ ಸರಿಯಾಗಿರುವ ಬಗ್ಗೆ ಖಚಿತ ಪಡಿಸಿಕೊಂಡಿತು.
ಕ್ಷಯ ರೋಗ ನಿರ್ವಹಣೆ ಮತ್ತು ಕ್ಷಯ ಮುಕ್ತ ಗ್ರಾಪಂ ಮಾಡಲು ಪಂಚಾಯ್ತಿ ಪಾತ್ರಗಳ ವಿವರಿಸಿದರು. ಪ್ರತಿ ಸಭೆಗಳಲ್ಲಿ ಕ್ಷಯ ರೋಗದ ಬಗ್ಗೆ ಸದಸ್ಯರು ಚರ್ಚಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಿದರು.ಪಂಚಾಯ್ತಿ ವ್ಯಾಪ್ತಿಯ ಕ್ಷಯ ರೋಗಿಗಳಿಗೆ ಫುಡ್ ಕಿಟ್ ಕೊಡುವುದು, ಸಾರ್ವಜನಿಕರ ಸಹಕಾರದೊಂದಿಗೆ ಕ್ಷಯ ಮುಕ್ತ ಗ್ರಾಪಂ ಮಾಡಲು ತಿಳಿಸಲಾಯಿತು. ಸಭೆಯಲ್ಲಿ ಡಾ.ಸುನಿಲ್ ಕುಮಾರ್, ಎಸ್‌ಟಿಎಸ್ ಕೆಂಪೇಗೌಡ, ಗ್ರಾಪಂ ಸದಸ್ಯರು, ಪಿಡಿಒ, ಕಾರ್ಯದರ್ಶಿ, ಸಿಬ್ಬಂದಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತಮ್ಮಯ್ಯ, ಸಿಎಚ್ಒ ದಿವ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.