ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ಅಂತಿಮ ಬಿಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ''''''''''''''''ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ''''''''''''''''ದ ಅಂಗವಾಗಿ ಚಾಮರಾಜನಗರ ತಾಲೂಕಿನ ಹರವೆ ಹೋಬಳಿ ಬೆಟ್ಟದಪುರ ಗ್ರಾಮದಲ್ಲಿ ''''''''''''''''ಗ್ರಾಮೀಣ ಸಹಭಾಗಿತ್ವ ಅಧ್ಯಯನ ಮುಖೇನ ಗ್ರಾಮೀಣ ಸಮೀಕ್ಷೆ''''''''''''''''ಯನ್ನು ನಡೆಸಲಾಯಿತು.ವಿದ್ಯಾರ್ಥಿಗಳು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಗ್ರಾಮ ಮತ್ತು ಗ್ರಾಮದಲ್ಲಿ ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಸಂಬಂಧಿಸಿದಂತೆ ವಿವಿಧ ನಕ್ಷೆಗಳನ್ನು ರಚಿಸಿ, ಭಾಗವಹಿಸಿದ ರೈತರಿಂದ ತಮ್ಮ ಗ್ರಾಮದಲ್ಲಿನ ಕೃಷಿ ವಾಸ್ತವ ಸ್ಥಿತಿಯ ವಿವರ ಪಡೆದುಕೊಂಡರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೃಷಿ ಮಹಾವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಸಿ.ದೊರೆಸ್ವಾಮಿ ರೈತರ ಜೊತೆಗೂಡಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಮ್ಮ ವಿದ್ಯಾರ್ಥಿಗಳು ತಮ್ಮ ಗ್ರಾಮದ ರೈತರಿಗೆ ಮುಂದಿನ ದಿನಗಳಲ್ಲಿ ಕೃಷಿಯ ಬಗ್ಗೆ ಮಾಹಿತಿ ನೀಡುವರು. ಪ್ರಾಯೋಗಿಕವಾಗಿ ಕಲಿತುಕೊಳ್ಳುವರು ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಆರೋಗ್ಯ ತಪಾಸಣೆ ಶಿಬಿರ, ಮಣ್ಣು ಮಾದರಿ ಸಂಗ್ರಹ ಕೃಷಿ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.ಗ್ರಾಮೀಣ ಕೃಷಿ ಕಾರ್ಯಾನುಭವ ಸಂಯೋಜಕ ಡಾ.ಸಿ.ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ಮೂರು ತಿಂಗಳು ಕಾಲ ಗ್ರಾಮದಲ್ಲಿ ಇದ್ದು ರೈತರಿಗೆ ಕೃಷಿ ಬಗ್ಗೆ ಮಾಹಿತಿ ನೀಡುವರು. ಅದನ್ನು ರೈತರು ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಗ್ರಾಮೀಣ ಕೃಷಿ ಕಾರ್ಯಾನುಭವದ ಸಹ ಸಂಯೋಜಕ ಡಾ.ಎಸ್.ಕಾಂಬ್ಳೆ ಉಪಸ್ಥಿತರಿದ್ದರು. ಗ್ರಾಪಂ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಸುಭದ್ರಮ್ಮ (ಕಾಡಪ್ಪ) ಮತ್ತು ಸುಬ್ಬಮ್ಮ , ಗೌ.ಪುಟ್ಟಪ್ಪ ಮತ್ತು ಗೌ.ಮಾದೇವಪ್ಪ, ಗ್ರಾಮದ ಯಜಮಾನರು, ಗ್ರಾಮದ ರೈತರು ಮತ್ತು ಶಾಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.