ಕನ್ನಡಪ್ರಭ ವಾರ್ತೆ ಚಿಂಚೋಳಿ
ಬೀದರ್-ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ಡಾ. ಅವಿನಾಶ ಜಾಧವ್ ಹೇಳಿದರು.ಪಟ್ಟಣದ ಕೇತಕಿ ಸಂಗಮೇಶ್ವರ ಕಲ್ಯಾಣಮಂಟಪದಲ್ಲಿ ತಾಲೂಕ ಬಿಜೆಪಿ ಮಂಡಲ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಳೆದ ೧೦ ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಅಭಿವೃದ್ಧಿ ಕೆಲಸಗಳು ಮತದಾರರಿಗೆ ತೋರಿಸಿ ಮತ ಪಡೆಯಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ೪೦% ಎಂದು ಕಾಂಗ್ರೆಸ್ ವಿರೋಧಿಸುತ್ತಿತ್ತು. ಇಗ ಅದಕ್ಕಿಂತ ೫೦% ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ಚಿಂಚೋಳಿ ಮತಕ್ಷೇತ್ರವು ರಾಜಕೀಯವಾಗಿ ಇತಿಹಾಸದಲ್ಲಿ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ, ದಿ. ವೈಜನಾಥ ಪಾಟೀಲ, ಡಾ. ಉಮೇಶ ಜಾಧವ್ ತಾಲೂಕಿನ ಅಭಿವೃದ್ದಿಗೋಸ್ಕರ ಹೆಚ್ಚು ಶ್ರಮಿಸಿದ್ದಾರೆ. ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಸಹಾ ಸರಕಾರ ಗಮನಹರಿಸುತ್ತಿಲ್ಲ. ಚಿಂಚೋಳಿ-ಕಾಳಗಿ ತಾಲೂಕಿನ ೬೩ ತಾಂಡಾಗಳು, ೩೩ ಗ್ರಾಮಗಳಲ್ಲಿ ಶಾಶ್ವತ ಕುಡಿವ ನೀರಿಗಾಗಿ ೨೦೦ ಕೋಟಿ ರು. ಬಿಜೆಪಿ ಸರ್ಕಾರದಲ್ಲಿ ಮಂಜೂರಿಗೊಳಿಸಲಾಗಿದೆ. ಆದರೆ ಇಗಿನ ಸರ್ಕಾರ ಅದನ್ನು ಬಿಡುಗಡೆಗೊಳಿಸುತ್ತಿಲ್ಲವೆಂದು ಶಾಸಕ ಡಾ.ಅವಿನಾಶ ಜಾಧವ್ ಆಕ್ರೋಶ ವ್ಯಕ್ತಪಡಿಸಿದರು.ಸಮಾರಂಭದಲ್ಲಿ ಬೀದರ ಜಿಲ್ಲಾಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ, ಅವ್ವಣ್ಣ ಮ್ಯಾಕೇರಿ,ಡಿಸಿಸಿ ಬ್ಯಾಂಕ ನಿರ್ದೇಶಕ ಗೌತಮ ಪಾಟೀಲ,ನಿಕಟಪೂರ್ವ ಅಧ್ಯಕ್ಷ ಸಂತೋಷ ಗಡಂತಿ ಮಾತನಾಡಿದರು.
ನೂತನ ಅಧ್ಯಕ್ಷ ವಿಜಯಕುಮಾರ ಚೇಂಗಟಾ ಬಿಜೆಪಿ ಧ್ವಜವನ್ನು ಪಡೆದುಕೊಂಡು ಅಧಿಕಾರ ಸ್ವೀಕರಿಸಿ ಮಾತನಾಡಿದರು. ಬಿಜೆಪಿ ಮುಖಂಡರಾದ ಭೀಮಶೆಟ್ಟಿ ಮುರುಡಾ, ಕೆ.ಎಂ. ಬಾರಿ, ಉದಯಕುಮಾರ ಸಿಂಧೊಲ, ಉದಯಕುಮಾರ ಪಾಟೀಲ, ಪ್ರಧಾನಕಾ ರ್ಯದರ್ಶಿ ರಾಮರೆಡ್ಡಿಪಾಟೀಲ ಚಿಮ್ಮನಚೊಡ, ಸದ್ದಾಮ ವಜೀರಗಾಂವ, ಜಗದೀಶಸಿಂಗ ಠಾಕೂರ, ಚಂದ್ರಶೇಖರ ಗುತ್ತೆದಾರ (ಮಾನಸ) ಶರಣುಕುಂಬಾರ, ಮಲ್ಲಿನಾಥ ಪಾಟೀಲ, ಸತೀಶರೆಡ್ಡಿ ತಾಜಲಾಪೂರ, ಅಭಿಷೇಕ ಮಲಕನೂರ ಇನ್ನಿತರಿದ್ದರು.