ಮೈಸೂರು : ಸಿಗ್ಮಾ ಆಸ್ಪತ್ರೆಯಲ್ಲಿ 500ಕ್ಕೂ ಹೆಚ್ಚು ಮಂದಿಗೆ ಉಚಿತ ಕಿಡ್ನಿ ತಪಾಸಣೆ

KannadaprabhaNewsNetwork | Updated : Apr 07 2025, 12:20 PM IST

ಸಾರಾಂಶ

ಸಿಗ್ಮಾ ಆಸ್ಪತ್ರೆ ಕಿಡ್ನಿ ಸಂಬಂಧ ಚಿಕಿತ್ಸೆಗೆ ಮತ್ತು ಕಿಡ್ನಿಯಲ್ಲಿನ ಕಲ್ಲುಗಳಿಗೆ ಚಿಕಿತ್ಸೆ ನೀಡುವಲ್ಲಿ ಉನ್ನತ ಆಸ್ಪತ್ರೆ ಆಗಿದೆ. ಹಾಗಾಗಿ ನಾನು ಎಲ್ಲಿ ಹೋದರು ಕಿಡ್ನಿಯಲ್ಲಿನ ಕಲ್ಲು ಅಂದರೆ ಯಾವಾಗಲೂ ಸಿಗ್ಮಾ ಆಸ್ಪತ್ರೆಗೆ ಹೋಗಿ ಎನ್ನುತ್ತೇನೆ

  ಮೈಸೂರು : ನಗರದ ಸಿಗ್ಮಾ ಆಸ್ಪತ್ರೆಯಲ್ಲಿ ವಿಶ್ವ ಕಿಡ್ನಿ ದಿನದ ಅಂಗವಾಗಿ ಆಯೋಜಿಸಿದ್ದ ಉಚಿತ ಕಿಡ್ನಿ ತಪಾಸಣಾ ಶಿಬಿರವನ್ನು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನಮ್ಮ ರಾಜವಂಶ ಪರಂಪರೆಯವರು ಮೊದಲಿನಿಂದಲೂ ಅರೋಗ್ಯದ ದೃಷ್ಟಿಯಲ್ಲಿ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಈ ಆಸ್ಪತ್ರೆಯು ಕಿಡ್ನಿ ರೋಗ ಮುಂದಾಳತ್ವ ಇರುವುದನ್ನು ಪ್ರಸಂಶನೀಯ ಎಂದರು.

ಡಾ.ಕೆ.ಎಂ. ಮಾದಪ್ಪ ಅವರು ಆಸ್ಪತ್ರೆಯ ಕಿಡ್ನಿಯ ಸಂಬಂಧ ತಿಂಗಳಿಗೆ 500ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದು ಅದರಂತೆ ದಿನಕ್ಕೆ 15 ರಿಂದ 20 ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. 72 ಕಿಡ್ನಿ ಕಸಿ ಮಾಡಿರುವುದನ್ನು ವೈದ್ಯ ಮತ್ತು ವೈದ್ಯೇತರ ತಂಡವನ್ನು ಶ್ಲಾಘಿಸಿದರು.

ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಸಿಗ್ಮಾ ಆಸ್ಪತ್ರೆ ಕಿಡ್ನಿ ಸಂಬಂಧ ಚಿಕಿತ್ಸೆಗೆ ಮತ್ತು ಕಿಡ್ನಿಯಲ್ಲಿನ ಕಲ್ಲುಗಳಿಗೆ ಚಿಕಿತ್ಸೆ ನೀಡುವಲ್ಲಿ ಉನ್ನತ ಆಸ್ಪತ್ರೆ ಆಗಿದೆ. ಹಾಗಾಗಿ ನಾನು ಎಲ್ಲಿ ಹೋದರು ಕಿಡ್ನಿಯಲ್ಲಿನ ಕಲ್ಲು ಅಂದರೆ ಯಾವಾಗಲೂ ಸಿಗ್ಮಾ ಆಸ್ಪತ್ರೆಗೆ ಹೋಗಿ ಎನ್ನುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಗ್ಮಾ ಆಸ್ಪತ್ರೆಯ ಸೇವೆಯನ್ನು ಕೊಂಡಾಡಿ ಇದು ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಕಿಡ್ನಿ ರೋಗಗಳಿಗೆ ಉತ್ತಮ ಸೇವೆ ಮಾಡುತ್ತಾ ಬಂದಿದೆ ಎಂದು ಹೇಳಿದರು.

ಎಂಡಿ ಎಸ್. ಜ್ಞಾನಶಂಕರ್ ಸ್ವಾಗತಿಸಿ, ರಾಜಮನೆತನದಲ್ಲಿ ಡಾ. ಪ್ರಮೋದ ದೇವಿಯವರ ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯ ಕಾಳಜಿ ಶ್ಲಾಘನೀಯ. ಕೆ. ಹರೀಶ್ ಗೌಡರು ಕನ್ನೆಗೌಡರ ಕೊಪ್ಪಲಿನವರಾಗಿ ಚಾಮರಾಜ ಕ್ಷೇತ್ರದ ಶಾಸಕರಾಗಿ, ಸಮಾಜ ಸೇವೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

2024-2025ರ ಸಾಲಿನ ಕಿಡ್ನಿ ದಾನಿಗಳಿಗೆ ಮತ್ತು ಪಡೆದವರನ್ನು ಅಭಿನಂದಿಸಲಾಯಿತು.

ವಿಶ್ವಶಾಂತಿ ಅಧ್ಯಕ್ಷ ಡಾ. ಮೂರ್ತಿ, ಮೋಹನ್ ಮತ್ತು ಮಹಾಲಿಂಗಪ್ಪ ಮತ್ತು ಪದಾಧಿಕಾರಿಗಳನ್ನು ಸ್ವಾಗತಿಸಲಾಯಿತು. ನಿರ್ದೇಶಕಿ ಡಾ. ರಾಜೇಶ್ವರಿ ಮಾದಪ್ಪ ಕಾರ್ಯಕ್ರಮ ನಿರೂಪಿಸಿದರು. ಡಾ.ಡಿ.ಎನ್. ಸೋಮಣ್ಣ ವಂದಿಸಿದರು. ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಕಿಡ್ನಿ ಸಂಬಂಧ, ರಕ್ತ ಮತ್ತು ಮೂತ್ರ ಪರೀಕ್ಷೆ ಹಾಗೂ ಕಿಡ್ನಿ ಸ್ಕ್ಯಾನ್ ಪರೀಕ್ಷೆಗೆ ಒಳಗಾಗಿ ತಜ್ಞರ ಸಲಹೆ ಪಡೆದರು. ನೆಪ್ರಾಲಜಿಸಿಟ್ ಡಾ. ಅನಿಕೇತ್ ಪ್ರಭಾಕರ್ ಇದ್ದರು.

Share this article