ಯುವಜನತೆಗೆ ಉದ್ಯೋಗ-ಜೀವನೋಪಾಯ ಭದ್ರತೆ ಅಗತ್ಯ

KannadaprabhaNewsNetwork | Published : Mar 11, 2024 1:16 AM

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ನವೀನ ಉದ್ಯಮಗಳ ಮೂಲಕ ಗ್ರಾಮೀಣ ಯುವ ಜನತೆಗೆ ಉದ್ಯೋಗ ಹಾಗೂ ಜೀವನೋಪಾಯ ಭದ್ರತೆ ಯೋಜನೆಯಡಿ ತೆಂಗು ಬೆಳೆಯ ಸುಧಾರಿತ ಬೇಸಾಯ ಪದ್ಧತಿಗಳು ಮತ್ತು ಯಾಂತ್ರೀಕರಣ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ನವೀನ ಉದ್ಯಮಗಳ ಮೂಲಕ ಗ್ರಾಮೀಣ ಯುವ ಜನತೆಗೆ ಉದ್ಯೋಗ ಹಾಗೂ ಜೀವನೋಪಾಯ ಭದ್ರತೆ ಯೋಜನೆಯಡಿ ತೆಂಗು ಬೆಳೆಯ ಸುಧಾರಿತ ಬೇಸಾಯ ಪದ್ಧತಿಗಳು ಮತ್ತು ಯಾಂತ್ರೀಕರಣ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಹನುಮಂತರಾಯ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಯುವಕರು ಈ ತರಬೇತಿಯ ನಂತರ ತೆಂಗಿನ ಮರ ಹತ್ತುವುದನ್ನು ಒಂದು ಉದ್ಯೋಗವನ್ನಾಗಿ ಮಾಡಿಕೊಂಡರೆ ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯ ರೂಪಿಸಿಕೊಳ್ಳಬಹುದು ಮತ್ತು ಇದರಿಂದ ಕೆಲಸಕ್ಕಾಗಿ ನಗರ ಪ್ರದೇಶಗಳನ್ನು ಅವಲಂಬಿಸುವುದನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟರು.

ತಾಂತ್ರಿಕ ಅಧಿವೇಶನಗಳಲ್ಲಿ ಜಿಕೆವಿಕೆ ತೋಟಗಾರಿಕೆ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಎಸ್. ಶ್ರೀರಾಮ್, ತೆಂಗಿನಲ್ಲಿ ಸುಧಾರಿತ ತಳಿಗಳು, ಆಯ್ಕೆ ಮತ್ತು ತೆಂಗಿನ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.

ತರಬೇತಿ ಸಂಯೋಜಕ ಡಾ. ಹೆಚ್.ವಿ. ರಾಮೇಗೌಡ.,ತೆಂಗಿನ ಬೆಳೆಯಲ್ಲಿ ಉಪಯೋಗಿಸುವ ವಿವಿಧ ಯಂತ್ರಗಳ ಬಗ್ಗೆ ತಿಳಿಸಿದರು.

ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ವೆಂಕಟೇ ಗೌಡ, ತೆಂಗಿನ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತಿಳಿಸಿದರು.

ವಿಜ್ಞಾನಿಗಳಾದ ಡಾ. ವೀರನಾಗಪ್ಪ, ಡಾ. ದರ್ಶಿನಿ, ಡಾ. ಸಾಗರ್, ಎಸ್.ಪೂಜಾರ್, ಮೇಘನ, ಎಸ್.ವಿ ಮತ್ತಿತರರು ವಿವಿಧ ವಿಚಾರಗಳ ಕುರಿತು ವೈಜ್ಞಾನಿಕ ಮಾಹಿತಿ ನೀಡಿದರು.

ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಎಸ್‌.ಪಿ.ಭರತ್, ಶಿಬಿರಾರ್ಥಿಗಳಿಗೆ ಸಾಧನವನ್ನು ಬಳಸಿ ತೆಂಗಿನ ಮರ ಹತ್ತುವ ಕೌಶಲ್ಯವನ್ನು ಹೇಳಿಕೊಟ್ಟರು. ಇದರಿಂದ ಪ್ರತಿಯೊಬ್ಬರೂ ತೆಂಗಿನ ಮರ ಹತ್ತಿ ಮರವನ್ನು ಶುಚಿ ಗೊಳಿಸುವುದು ಹಾಗೂ ಕಾಯಿ ಕೀಳುವ ಕಲೆಯ ಬಗ್ಗೆ ಮಾರ್ಗದರ್ಶನ ಪಡೆದರು. ಇದೇ ವೇಳೆ ಶಿಬಿರಾರ್ಥಿಗಳಿಗೆ ತೆಂಗಿನ ಮರ ಹತ್ತುವ ಸಾಧನ, ಹೆಲ್ಮೆಟ್, ಕುಡುಗೋಲು ಮತ್ತು ಪ್ರಥಮ ಚಿಕಿತ್ಸೆ ಕಿಟ್‌ಗಳನ್ನು ಉಚಿತವಾಗಿ ನೀಡಲಾಯಿತು.

10ಕೆಡಿಬಿಪಿ2-

ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿ ತೆಂಗು ಬೆಳೆ ಮೌಲ್ಯವರ್ಧನೆ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.

Share this article