ಕೇಂದ್ರದಿಂದ ರಾಜ್ಯಕ್ಕೆ ₹3454 ಸಾವಿರ ಕೋಟಿ ಪರಿಹಾರ

KannadaprabhaNewsNetwork | Updated : May 01 2024, 05:50 AM IST

ಸಾರಾಂಶ

ಮಾರ್ಗಸೂಚಿ ಪ್ರಕಾರ ಕೇಂದ್ರದ ಬರ ಅಧ್ಯಯನ ತಂಡವು ವರದಿ ಪ್ರಕಾರ ೪,೮೬೦ ಕೋಟಿ ರೂ. ನಷ್ಟ ಪರಿಹಾರ ಬಿಡುಗಡೆಗೆ ಕೋರಲಾಗಿತ್ತು, ಆದರೆ ಕೇಂದ್ರ ಸರ್ಕಾರವು ೩,೪೫೪ ಕೋಟಿ ರೂ. ನೀಡಿದೆ

 ಕೋಲಾರ : ಕೇಂದ್ರದಲ್ಲಿ ಬಿಜೆಪಿ ಆಡಳಿತದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಚುನಾವಣಾ ನೀತಿ ಸಂಹಿತೆ ಅಡೆ ತಡೆಗಳ ನಡುವೆಯೂ ಆಯೋಗದ ಅನುಮತಿ ಪಡೆದುಕೊಂಡು ಕರ್ನಾಟಕಕ್ಕೆ ೩೪೫೪ ಕೋಟಿ ರೂ ಪರಿಹಾರ ನೀಡಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ತಿಳಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬರದಿಂದ ೩೦ ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದಿದೆ. ಆದರೆ ಮಾರ್ಗಸೂಚಿ ಪ್ರಕಾರ ಕೇಂದ್ರದ ಬರ ಅಧ್ಯಯನ ತಂಡವು ವರದಿ ಪ್ರಕಾರ ೪,೮೬೦ ಕೋಟಿ ರೂ. ನಷ್ಟ ಪರಿಹಾರ ಬಿಡುಗಡೆಗೆ ಕೋರಲಾಗಿತ್ತು, ಆದರೆ ಕೇಂದ್ರ ಸರ್ಕಾರವು ೩,೪೫೪ ಕೋಟಿ ರೂ. ನೀಡಿದ ನಂತರ ರಾಜ್ಯ ಸರ್ಕಾರವು ೧೮.೧೭೨ ಕೋಟಿ ರೂ ನಷ್ಟದ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಅಪಪ್ರಚಾರದ ಮಾಡುತ್ತಿದೆ ಎಂದು ಖಂಡಿಸಿದರು.ಬಿಜೆಪಿ ಸರ್ಕಾರ ದುಪ್ಪಟ್ಟು ಪರಿಹಾರ ನೀಡಿತ್ತು

ಕಳೆದ ಸಾಲಿನಲ್ಲಿ ಡಬಲ್ ಇಂಜಿನ್ ಸರ್ಕಾರದ ಬಿಜೆಪಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಆಡಳಿತದಲ್ಲಿ ಎಸ್.ಡಿ.ಆರ್.ಎಫ್ ನೀಡುವ ಬೆಳೆ ಹಾನಿ ಪರಿಹಾರ ದುಪ್ಪಟ್ಟು ಗೊಳಿಸಲಾಗಿತ್ತು, ೧೩,೦೯.೪೨೧ ಹೆಕ್ಟೇರ್ ಬೆಳೆ ಹಾನಿಯಾಗಿದ್ದು ೧೪.೬೨,೮೪೧ ರೈತರ ಖಾತೆಗೆ ೨೦೩೧.೧೫ ಕೋಟಿ ರೂ ಇನ್‌ಪುಟ್ ಸಬ್ಸಿಡಿ ನೀಡಲಾಯಿತು, ಮಳೆಯಾಶ್ರಿತ ಜಮೀನಿಗೆ ಹೆಕ್ಟೇರ್‌ಗೆ ೬.೮೦೦ ರೂ ಮಾಗಸೂಚಿ ದರದ ಜೊತೆಗೆ ರಾಜ್ಯವು ಹೆಚ್ಚುವರಿಯಾಗಿ ೬.೮೦೦ ರೂ. ಸೇರಿದಂತೆ ಒಟ್ಟು ೧೩.೬೦೦ ರೂ ನೀಡಲಾಯಿತು ಎಂದರು. ಕಾಂಗ್ರೆಸ್ ಸರ್ಕಾರ ರೈತರಿಗೆ ೨ ಸಾವಿರ ರೂ ಪರಿಹಾರ ನೀಡುತ್ತೇವೆ ಎಂದಿದ್ದೇರಿ ಆದರೆ ಬಿಜೆಪಿ ರಾಜ್ಯ ಸರ್ಕಾರ ಕೊಡುತ್ತಿದ್ದ ಕಿಸಾನ್ ಸಮ್ಮಾನ್ ಅದಕ್ಕಿಂತ ಹೆಚ್ಚು ೪ ಸಾವಿರ ರೂ ಇತ್ತು ಎಂಬುದರ ಅರಿವು ಇಲ್ಲವೆ, ಕಿಸಾನ್ ಸಮ್ಮಾನ್ ಕಿತ್ತುಕೊಳ್ಳದೆ ರೈತರಿಗೆ ನೀಡಿದ್ದರೆ ಅಲ್ಪವಾದರೂ ನೆರವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.ರಾಜ್ಯದ ಕಾಂಗ್ರೇಸ್ ಸರ್ಕಾರವು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ವಿದ್ಯುತ್ ಹಾಗೂ ಅನುದಾದ ನೀಡದೆ ಕನ್ನಡಿಗರಿಗೆ ಅನ್ಯಾಯ ಮಾಡಿದೆ. ಹಾಲು ಉತ್ಪಾದಕರಿಗೆ ೬೫೦ ಕೋಟಿ ರೂ ಬಾಕಿ ನೀಡದೆ ವಂಚಿಸಿದೆ, ಕೃಷಿ ಮತ್ತು ತೋಟಗಾರಿಕೆಗೆ ಬಜೆಟ್‌ನಲ್ಲಿ ಶೇ.೪೦ ರಷ್ಟು ಕಡಿತ ಮಾಡಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಮಾದ್ಯಮ ಪ್ರಮುಖ್ ಪ್ರವೀಣ್ ಗೌಡ, ಪ್ರಧಾನ ಕಾರ್ಯದರ್ಶಿ ಅಪ್ಪಿರಾಜು, ಸುಗುಟೂರು ಚಂದರಶೇಖರ್, ಕಾರ್ಯದರ್ಶಿ ರಾಜೇಶ್ ಸಿಂಗ್, ಕೆಂಬೋಡಿ ನಾರಾಯಣಸ್ವಾಮಿ ಇದ್ದರು.

Share this article