ಶಿಕ್ಷಕರ ಕ್ಷೇತ್ರಕ್ಕೆ ಜ್ಞಾನಿಗಳನ್ನು ಆಯ್ಕೆ ಮಾಡಿ

KannadaprabhaNewsNetwork |  
Published : May 22, 2024, 12:53 AM IST
೨೧ಕೆಎಲ್‌ಆರ್-೮ಕೋಲಾರ ತಾಲೂಕಿನ ತೊರದೇವಾಂಡಹಳ್ಳಿಯ ಸಿ.ಬಿ.ಐ.ಟಿ. ಶಿಕ್ಷಣ ಸಂಸ್ಥೆಯಲ್ಲಿ ಸುದ್ಧಿಗಾರರೊಂದಿಗೆ ಮಾಜಿ ಸಿಎಂ ಸದಾನಂದಗೌಡ ಮಾತನಾಡಿದರು. | Kannada Prabha

ಸಾರಾಂಶ

ಅಭಿವೃದ್ದಿ ಹೇಗೆ ಆಗುತ್ತಿದೆ ಎಂದರೆ ರಸ್ತೆಗಳಲ್ಲಿ ಮಳೆ ಬಿದ್ದಾಗ ಬಾಳೆ ಗಿಡ ನೆಟ್ಟಿದ್ದಾರೆ. ಆಸ್ಪತ್ರೆಗೆ ಹೋದರೆ ವೈದ್ಯರಿಲ್ಲ. ಮಾತ್ರೆಗಳಿಲ್ಲ ಹೆಸರಿಗೆ ಮಾತ್ರ ಆಸ್ಪತ್ರೆಯಾಗಿದೆ ಈ ರೀತಿ ಇದೆ ನಮ್ಮ ರಾಜ್ಯ ಸರ್ಕಾರದ ಆಡಳಿತದಲ್ಲಿ ಅಭಿವೃದ್ದಿ ಅವಸಾನಗೊಂಡಿದೆ

ಕನ್ನಡಪ್ರಭ ವಾರ್ತೆ ಕೋಲಾರಶಿಕ್ಷಕರ ಕ್ಷೇತ್ರದಲ್ಲಿ ಉತ್ತಮ ಜ್ಞಾನವಂತರನ್ನು ಆಯ್ಕೆ ಮಾಡಬೇಕು, ಸರ್ಕಾರಿ ಶಾಲೆಗಳು ಇಂದು ಮುಚ್ಚುವ ಹಂತ ತಲುಪುತ್ತಿದೆ, ಖಾಸಗಿ ಶಾಲೆಗಳಲ್ಲಿ ನೀಡುವ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಲ್ಲೂ ಸಿಗುವಂತಾಗಬೇಕಾಗಿದೆ ಎಂದು ಸಂಸದ ಡಿ.ವಿ.ಸದಾನಂದಗೌಡ ಹೇಳಿದರು.

ತಾಲೂಕಿನ ತೊರದೇವಾಂಡಹಳ್ಳಿಯ ಸಿಬಿಐಟಿ ಶಿಕ್ಷಣ ಸಂಸ್ಥೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಬದಲಾವಣೆ ಕಾಣಬೇಕಾದರೆ ಅದು ವಿದ್ಯಾ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂಬುವುದನ್ನು ಪ್ರಧಾನಿ ನರೇಂದ್ರ ಮೋದಿ ಅರಿತ್ತಿದ್ದು ಹಲವಾರು ಪ್ರಗತಿ ಪರ ಯೋಜನೆಗಳನ್ನು ಜಾರಿ ಮಾಡಿದ್ದಾರೆ, ಆದರೆ ರಾಜ್ಯ ಸರ್ಕಾರಕ್ಕೆ ಭವಿಷ್ಯತ್ ಚಿಂತನೆ ಇಲ್ಲ ಎಂದರು.

ಕಾನೂನು ವ್ಯವಸ್ಥೆ ಹದಗೆಟ್ಟಿದೆ

ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗಳು ಹದಗೆಟ್ಟಿದೆ, ಉತ್ತಮ ಆಡಳಿತಾಧಿಕಾರಿಗಳನ್ನು ಕಟ್ಟಿಹಾಕಿ ಅಧಿಕಾರವನ್ನು ಚಲಾಯಿಸಲಾಗುತ್ತಿದೆ, ಯಾವುದೇ ಪ್ರಕರಣ ದಾಖಲಾದರೆ ಅದನ್ನು ತನಿಖೆ ಮಾಡುವವರೆಗೂ ತಟಸ್ಟವಾಗಿರದೆ ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ದಾರಿ ತಪ್ಪಿಸುತ್ತಿರುವುದು ಸರಿಯಲ್ಲ. ಇದರಿಂದ ತನಿಖೆಗೆ ಆಡಚಣೆಯಾಗುತ್ತದೆ ಎಂದರು..

ತನಿಖೆ ಪೂರ್ಣಗೊಳಿಸಲು ಅವಕಾಶ ನೀಡಬೇಕು, ಇದನ್ನು ಅರ್ಥೈಯಿಸಿಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡರು ತನಿಖೆಗೆ ಯಾವುದೇ ರೀತಿ ಅಡ್ಡಿಯಾಗದಂತೆ ಹೇಳಿಕೆ ನೀಡಿದ್ದಾರೆ, ಅಧಿಕಾರದಲ್ಲಿ ಇರುವವರು ನೀಡುವಂತ ದಿಕ್ಕು ತಪ್ಪಿಸುವಂತ ಹೇಳಿಕೆಗಳಿಂದ ಸಮಸ್ಯೆಗಳು ಹೆಚ್ಚಾಗಲಿದೆ, ನಿವೃತ್ತ ನ್ಯಾಯಾಧೀಶರಿಂದ ಸಮಿತಿ ರಚಿಸಿ ತನಿಖೆ ಮಾಡಿದಲ್ಲಿ ಸತ್ಯಾಂಶಗಳು ಶೀಘ್ರವಾಗಿ ಬೆಳಕಿಗೆ ಬರಲು ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು,ರಾಜ್ಯದಲ್ಲಿ ಅಭಿವೃದ್ಧಿ ಅವಸಾನಅಭಿವೃದ್ದಿ ಹೇಗೆ ಆಗುತ್ತಿದೆ ಎಂದರೆ ರಸ್ತೆಗಳಲ್ಲಿ ಮಳೆ ಬಿದ್ದಾಗ ಬಾಳೆ ಗಿಡ ನೆಟ್ಟಿದ್ದಾರೆ. ಆಸ್ಪತ್ರೆಗೆ ಹೋದರೆ ವೈದ್ಯರಿಲ್ಲ. ಮಾತ್ರೆಗಳಿಲ್ಲ ಹೆಸರಿಗೆ ಮಾತ್ರ ಆಸ್ಪತ್ರೆಯಾಗಿದೆ ಈ ರೀತಿ ಇದೆ ನಮ್ಮ ರಾಜ್ಯ ಸರ್ಕಾರದ ಆಡಳಿತದಲ್ಲಿ ಅಭಿವೃದ್ದಿ ಅವಸಾನಗೊಂಡಿದೆ ಎಂದು ಟೀಕಿಸಿದರು.ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ೨೮ ಸ್ಥಾನಗಳ ಪೈಕಿ ೨೦ ರಿಂದ ೨೪ ಸ್ಥಾನ ಬಿಜೆಪಿ ಹಾಗೂ ಜೆ.ಡಿ.ಎಸ್. ಮೈತ್ರಿ ಪಕ್ಷವು ಪಡೆಯುವ ನಿರೀಕ್ಷೆ ಇದೆ. ಕೇರಳ ರಾಜ್ಯದಲ್ಲಿ ೩ ಸ್ಥಾನಗಳನ್ನು ಪಡೆಯಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಸಿ.ಬಿ.ಐ.ಟಿ. ಸಂಸ್ಥೆ ಕಾರ್ಯದರ್ಶಿ ಕೃಷ್ಣಾರೆಡ್ಡಿ, ವೈ.ಎ.ಎನ್ ಸಹೋದರ ವೀರಭದ್ರಪ್ಪ ಇದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಕುಟುಂಬ ರಾಜಕೀಯದಲ್ಲಿ ಕರ್ನಾಟಕ ದೇಶಕ್ಕೇ ನಂ.4!