ಸಿದ್ದರಾಮಯ್ಯ ರಾಜೀನಾಮೆ ನೀಡಲ್ಲ : ಕಾಂಗ್ರೆಸ್ ಶಾಸಕ ಪುಟ್ಟ ಸ್ವಾಮಿ ಗೌಡ ವಾಗ್ದಾಳಿ

KannadaprabhaNewsNetwork | Updated : Aug 20 2024, 04:25 AM IST

ಸಾರಾಂಶ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆಯ ಕುರಿತು ಕಾಂಗ್ರೆಸ್ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಪಾಲರ ಕ್ರಮವನ್ನು ಖಂಡಿಸಿರುವ ಅವರು, ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

 ಚಿಕ್ಕಬಳ್ಳಾಪುರ :  ಕರ್ನಾಟಕಕ್ಕೆ ರಾಜ್ಯಪಾಲರು ಬಂದಿರೋದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಹಾಳು ಮಾಡುವುದಕ್ಕೆ, ದೇಶದಲ್ಲೇ ಪ್ರಮಾಣಿಕ ಮುಖ್ಯಮಂತ್ರಿ ಅಂತಾನೇ ಹೆಸರು ಮಾಡಿದವರು ಸಿದ್ದರಾಮಯ್ಯ. ಯಾವುದೇ ಕಾರಣಕ್ಕೂ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಗೌರಿಬಿದನೂರು ಶಾಸಕ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಕೇಂದ್ರ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ವತಿಯಿಂದ ರಾಜ್ಯಪಾಲರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯದಲ್ಲಿ 136 ಸ್ಥಾನಗಳನ್ನ ಗೆಲ್ಲುವ ಮೂಲಕ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ, ಇದನ್ನ ಸಹಿಸದ ಬಿಜೆಪಿಯವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.

ಪಿಎಂ ಆಗಲು ಮೋದಿ ಯೋಗ್ಯರಲ್ಲ ರಾಜ್ಯದಲ್ಲಿ 19 ಬಿಜೆಪಿ ಸಂಸದರು ಗೆದ್ದಿದ್ದಾರೆ. 3ನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ ನಾವು ಸ್ವಾಗತಿಸುತ್ತೇವೆ, ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನ ರಾಜೀನಾಮೆ ಕೊಡಿಸುವಂತ ಷಡ್ಯಂತ್ರ ಯಾಕೇ ಮಾಡುತ್ತಿದ್ದೀರಿ, ಇದು ಪ್ರಧಾನಿಯಾಗಿದ್ದವರು ಮಾಡುವ ಕೆಲಸವಲ್ಲ, ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೆ ಯೋಗ್ಯರಲ್ಲ ಎಂದು ಕಿಡಿಕಾರಿದರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಜನರಿಗೆ ಅರ್ಥವಾಗುವಂತೆ ಬಿಡಿಸಿ ಬಿಡಿಸಿ ಹೇಳಿದ್ದಾರೆ, ತಮ್ಮ ಪತ್ನಿಯ ಜಮೀನು ಸ್ವಾಧೀನ ಮಾಡಿದಕ್ಕಾಗಿ ಮುಡಾದವರು ಪರಿಹಾರವಾಗಿ ಸೈಟ್ ಗಳನ್ನ ನೀಡಿದ್ದಾರೆ, ದ್ವೇಷ ರಾಜಕಾರಣ ಮಾಡುವ ಕಾರಣಕ್ಕೆ ಬಿಜೆಪಿಯವರು ಈ ವಿಷಯವನ್ನ ಇಟ್ಟುಕೊಂಡು ಮೈಸೂರು ಪಾದಯಾತ್ರೆ ಮಾಡಿದರು. ಇದರಿಂದ ಯಾವ ಪ್ರಯೋಜನವಾಗಿದೆ ಎಂದರು.

ಸರ್ಕಾರ ಅಸ್ಥಿರಗೊಳಿಸವ ಯತ್ನ

ರಾಜ್ಯಪಾಲರಿಗೆ ನಾವು ಮನವಿ ಮಾಡುತ್ತೇವೆ, ಸಿದ್ದರಾಮಯ್ಯ ವಿರುದ್ಧ ತನಿಖೆ ವಾಪಸ್ ತೆಗೆದುಕೊಳ್ಳಿ, ಇಲ್ಲದಿದ್ದಾರೆ ರಾಜಭವನಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮಾಡುತ್ತೇವೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ, ರಾಜಭವನದ ಮೂಲಕ ದ್ವೇಷ ಕಾರಣ ಮಾಡುವ ಮೂಲಕ ರಾಜ್ಯ ಸರ್ಕಾರವನ್ನ ಅಸ್ಥಿರಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

23ಕ್ಕೆ ಗೌರಿಬಿದನೂರಲ್ಲಿ ಪ್ರತಿಭಟನೆ

ಸಿದ್ದರಾಮಯ್ಯ ಪರ ಮತ್ತು ರಾಜ್ಯಪಾಲರ ಆದೇಶ ವಿರೋಧಿಸಿ ಶುಕ್ರವಾರ ಗೌರಿಬಿದನೂರಿನಲ್ಲಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು

Share this article