25 ಲಕ್ಷ ಉದ್ಯೋಗ, ₹5000 ನಿರುದ್ಯೋಗ ಭತ್ಯೆ: ಎಸ್‌ಪಿ

Published : Nov 27, 2026, 12:25 PM IST
samajwadi party

ಸಾರಾಂಶ

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಸಮಾಜವಾದಿ ಪಕ್ಷ ಯುವಕರು, ಜೆನ್‌ಜೀಗಳನ್ನು ಗುರಿಯಾಗಿಸಿಕೊಂಡ ತನ್ನ ಮೊದಲ ಚುನಾವಣಾ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದೆ.

ಲಖನೌ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಸಮಾಜವಾದಿ ಪಕ್ಷ ಯುವಕರು, ಜೆನ್‌ಜೀಗಳನ್ನು ಗುರಿಯಾಗಿಸಿಕೊಂಡ ತನ್ನ ಮೊದಲ ಚುನಾವಣಾ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದೆ. ಈ ವೇಳೆ ಮಾತನಾಡಿದ ಅಖಿಲೇಶ್‌, ‘ಒಳ್ಳೆ ದಿನಗಳು ಬಂದಿಲ್ಲ. ಆದರೆ ಕೆಟ್ಟ ದಿನಗಳು ತೊಲಗಲಿವೆ’ ಎಂದಿದ್ದಾರೆ.

ಸತತ 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿಗೆ ಹ್ಯಾಟ್ರಿಕ್‌ ತಪ್ಪಿಸುವ ನಿಟ್ಟಿನಲ್ಲಿ ಹಲವು ಭರ್ಜರಿ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಮುಖ್ಯವಾಗಿ. 5 ವರ್ಷಗಳಲ್ಲಿ 25 ಲಕ್ಷ ಯುವಕರಿಗೆ ಸರ್ಕಾರಿ ನೌಕರಿ, 2-3 ಕೋಟಿ ಜನರಿಗೆ ಇತರೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ, 12ನೇ ತರಗತಿಯಿಂದ ತೇರ್ಗಡೆಯಾಗುವವರಿಗೆ 20 ಲಕ್ಷ ಜನರಿಗೆ ಉಚಿತ ಲ್ಯಾಪ್‌ಟಾಪ್‌, ವೃದ್ಧೆಯರಿಗೆ ವಾರ್ಷಿಕ 40 ಸಾವಿರ ರು. ಪಿಂಚಣಿ, ಕೃಷಿ ಸಾಲ ಮನ್ನಾದ ಭರವಸೆ ನೀಡಲಾಗಿದೆ.

ಜೊತೆಗೆ ಬಡವರು ಮತ್ತು ಪಿಡಿಎ ಸಮುದಾಯದ ಮಹಿಳೆಯರಿಗಾಗಿ 5 ರು.ಗೆ ಊಟ ಒದಗಿಸುವ ಕ್ಯಾಂಟೀನ್‌ಗಳನ್ನು ಆರಂಭಿಸುವ ಘೋಷಣೆ ಮಾಡಲಾಗಿದೆ.

ಎಸ್‌ಪಿ ಭರವಸೆಗಳೇನು?:

- 25 ಲಕ್ಷ ಯುವಕರಿಗೆ ಸರ್ಕಾರಿ ಕೆಲಸ, 3 ಕೋಟಿ ಯುವಕರಿಗೆ ಇತರೆ ಕ್ಷೇತ್ರದಲ್ಲಿ ಉದ್ಯೋಗ

- ₹50 ಕೋಟಿವರೆಗಿನ ಸರ್ಕಾರಿ ಗುತ್ತಿಗೆಗಳಲ್ಲಿ ದಲಿತರು, ಪಿಡಿಎ ಸಮುದಾಯಕ್ಕೆ 50% ಮೀಸಲು

- ನಿರುದ್ಯೋಗಿಗಳಿಗೆ ಮಾಸಿಕ ₹5,000 ಸಹಾಯಧನ, ನಗರ ಉದ್ಯೋಗ ಖಾತರಿ ಕಾಯ್ದೆ ಜಾರಿ

- ರೈತರ ಕೃಷಿ ಸಾಲ ಮನ್ನಾ, ಜಾತಿ ಗಣತಿ, ಪಿಯು ಉತ್ತೀರ್ಣರಾದವರಿಗೆ ಉಚಿತ ಲ್ಯಾಪ್‌ಟಾಪ್‌

- ವೃದ್ಧ ಮಹಿಳೆಯರಿಗೆ ವಾರ್ಷಿಕ ₹40,000 ಪಿಂಚಣಿ. ಹಣ ಬ್ಯಾಂಕ್ ಖಾತೆಗೆ ನೇರ ವರ್ಗ

- ಕಾರ್ಮಿಕರು, ಮಹಿಳಾ ಕಾರ್ಮಿಕರು, ಕುಶಲಕರ್ಮಿಗಳಿಗೆ ವಾರ್ಷಿಕ ₹40,000 ಪಿಂಚಣಿ

- ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ. ಲೋಪಕ್ಕೆ ಅಧಿಕಾರಿಗಳು, ಸಚಿವರು ಹೊಣೆ

- ಹಿರಿಯ ನಾಗರಿಕರಿಗೆ ವೃದ್ಧಾಶ್ರಮ, ಕ್ಲಬ್‌ಗಳ ಸ್ಥಾಪನೆ, ವಿದ್ಯಾರ್ಥಿಗಳಿಗೆ ಉಚಿತ ಮೆಟ್ರೋ ಪ್ರಯಾಣ

- ₹15,000 ಕೋಟಿ ನಿಧಿ ಸ್ಥಾಪಿಸಿ, ಕಬ್ಬು ಬೆಳೆಗಾರರಿಗೆ 24 ಗಂಟೆಯೊಳಗೆ ಹಣ ಪಾವತಿ ವ್ಯವಸ್ಥೆ

- ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ, ರಾಜ್ಯ ಶಿಕ್ಷಣ ನೀತಿ ಜಾರಿ

- ದಲಿತ ಅಭಿವೃದ್ಧಿ ಮಂಡಳಿ ರಚನೆ। 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು

- ಬಿಜೆಪಿ ಮುಚ್ಚಿದೆ ಎನ್ನಲಾದ 26,000 ಸರ್ಕಾರಿ ಪ್ರಾಥಮಿಕ ಶಾಲೆ ಮತ್ತೆ ಓಪನ್‌

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘ಕೈ’ನಿಂದ ಅಂಬೇಡ್ಕರರಿಗೆ 2 ಬಾರಿ ಸೋಲು: ದೇಬ್
ನ.30ರಿಂದ ಸಂಸತ್‌ ವಿಶೇಷ ಅಧಿವೇಶನ