ಬಂಗಾಳದಲ್ಲಿ 92% ಮತ: ದೇಶದಲ್ಲಿ ಹೊಸ ದಾಖಲೆ

Published : Apr 30, 2026, 05:56 AM IST
West Bengal

ಸಾರಾಂಶ

ಪಶ್ಚಿಮ ಬಂಗಾಳ ವಿಧಾನಸಭೆಯ 142 ಕ್ಷೇತ್ರಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.91.66ರಷ್ಟು ಮತ ಚಲಾವಣೆಯಾಗಿದೆ. ಏ.23ರಂದು 152 ಕ್ಷೇತ್ರಗಳಿಗೆ ನಡೆದ ಮೊದಲ ಹಂತದಲ್ಲಿ ಚುನಾವಣೆಯಲ್ಲಿ ಶೇ. 93.19ರಷ್ಟು ಮತದಾನವಾಗಿದ್ದ ಕಾರಣ ಒಟ್ಟು ಮತದಾನ ಪ್ರಮಾಣ ಶೇ.92.47ಕ್ಕೆ ತಲುಪಿದೆ.

 ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭೆಯ 142 ಕ್ಷೇತ್ರಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.91.66ರಷ್ಟು ಮತ ಚಲಾವಣೆಯಾಗಿದೆ. ಏ.23ರಂದು 152 ಕ್ಷೇತ್ರಗಳಿಗೆ ನಡೆದ ಮೊದಲ ಹಂತದಲ್ಲಿ ಚುನಾವಣೆಯಲ್ಲಿ ಶೇ. 93.19ರಷ್ಟು ಮತದಾನವಾಗಿದ್ದ ಕಾರಣ ಒಟ್ಟು ಮತದಾನ ಪ್ರಮಾಣ ಶೇ.92.47ಕ್ಕೆ ತಲುಪಿದೆ. ಈ ಮೂಲಕ ಸ್ವತಂತ್ರ ಭಾರತದ ಇತಿಹಾಸದಲ್ಲೇ ವಿಧಾನಸಭಾ ಚುನಾವಣೆಯೊಂದಲ್ಲಿ ಅತಿ ಹೆಚ್ಚು ಮತದಾನ ಕಂಡ ದಾಖಲೆಯನ್ನು ಪಶ್ಚಿಮ ಬಂಗಾಳ ದಾಖಲಿಸಿದೆ. 2011ರಲ್ಲಿ ಬಂಗಾಳದಲ್ಲಿ ಶೇ.84.72ರಷ್ಟು ಮತ ಚಲಾವಣೆಯಾಗಿದ್ದು, ಇದುವರೆಗೂ ದಾಖಲೆಯಾಗಿತ್ತು. ಆ ದಾಖಲೆ ಇದೀಗ ಮುರಿದುಬಿದ್ದಿದೆ.

ರಾಜ್ಯದಲ್ಲಿ ಚುನಾವಣೆಗೂ ಮುನ್ನ ನಡೆದ ವಿಶೇಷ ಮತಪಟ್ಟಿ ಪರಿಷ್ಕರಣೆ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಕಾರಣ- ಪರಿಷ್ಕರಣೆ ಬಳಿಕ ಲಕ್ಷಾಂತರ ಮತದಾರರ ಹೆಸರು ಕೈಬಿಡಲಾಗಿತ್ತು. ದಾಖಲೆ ಸಲ್ಲಿಸಿದ ಹಲವರ ಹೆಸರು ಮರುಸೇರ್ಪಡೆ ಮಾಡಲಾಗಿತ್ತು. ಅದರೆ ಇನ್ನೂ 60 ಲಕ್ಷಕ್ಕೂ ಹೆಚ್ಚು ಜನರ ಮತದ ಹಕ್ಕಿನ ಸಿಂಧುತ್ವದ ಕುರಿತು ನಿರ್ಧಾರ ಹೊರಬೀಳಬೇಕಿದೆ. ಇದರ ನಡುವೆಯೇ ನಡೆದ ಚುನಾವಣೆಯಲ್ಲಿ ದಾಖಲೆ ಪ್ರಮಾಣ ಮತ ಚಲಾವಣೆಯಾಗಿದೆ.

ದಾಖಲೆ ಮತ:

ರಾಜ್ಯದಲ್ಲಿ ಈ ಬಾರಿ 6.81 ಕೋಟಿ ಮತದಾರರಿದ್ದು, ಈ ಪೈಕಿ ಶೆ.92.47ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಎರಡನೇ ಹಂತದಲ್ಲಿ ಪುರುಷರ ಮತದಾನ ಪ್ರಮಾಣ ಶೇ.91.07ರಷ್ಟಿದ್ದರೆ, ಮಹಿಳೆಯರ ಮತದಾನ ಪ್ರಮಾಣ ಶೇ.92.98ರಷ್ಟಿತ್ತು.

ಎಲ್ಲೆಡೆ ದಾಖಲೆ ಮತ

ಬಂಗಾಳ ಶೇ.84.72 ಶೇ.92.47

ತಮಿಳ್ನಾಡು ಶೇ.78.29 ಶೇ.84.72

ಅಸ್ಸಾಂ ಶೇ. 84.67 ಶೇ.85.38

ಪುದುಚೇರಿ ಶೇ.86.19 ಶೇ.89.13

ಕೇರಳ ಶೇ.77.35 ಶೇ.78.03

- ಎಸ್‌ಐಆರ್‌ ಗದ್ದಲದ ನಡುವೆಯೇ ಇತಿಹಾಸ ಸೃಷ್ಟಿ

- ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದಲ್ಲಿ ವಿಶೇಷ ಮತಪಟ್ಟಿ ಪರಿಷ್ಕರಣೆ. ವಿವಾದ

- ಮತಪಟ್ಟಿ ಶುದ್ಧೀಕರಿಸಿ ಡ್ಯುಪ್ಲಿಕೇಟ್‌, ಮೃತರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿತ್ತು

- 60 ಲಕ್ಷ ಮಂದಿ ಮತದಾನದ ಅರ್ಹತೆ ಕಳೆದುಕೊಂಡಿದ್ದರು. ಇದರ ನಡುವೆ ದಾಖಲೆ ಮತ

- 2 ಹಂತದಲ್ಲಿ ನಡೆದ ಚುನಾವಣೆಯಲ್ಲಿ ಶೇ.92.47ರಷ್ಟು ಮತದಾನ. ದೇಶದಲ್ಲೇ ದಾಖಲೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ತ.ನಾಡಲ್ಲಿ ಡಿಎಂಕೆ, ಕೇರಳದಲ್ಲಿ ಕಾಂಗ್ರೆಸ್‌, ಅಸ್ಸಾಂನಲ್ಲಿ ಬಿಜೆಪಿ, ಬಂಗಾಳದಲ್ಲಿ ರೋಚಕ ಹಣಾಹಣಿ: ಎಕ್ಸಿಟ್‌ ಪೋಲ್‌
ನೈಸರ್ಗಿಕ ಸಂಪನ್ಮೂಲ ಸಮರ್ಪಕ ನಿರ್ವಹಣೆ ಅಗತ್ಯ: ಶಾಲಿನಿ ರಜನೀಶ್‌