ವಕ್ಫ್‌ಗೆ ಭೂಮಿ ನೀಡಲು ಅಧಿಕಾರಿಗಳ ಅಧಿಕಾರ ದುರ್ಬಳಕೆ : ಮಾಜಿ ಸಂಸದ ಎಸ್.ಮುನಿಸ್ವಾಮಿ

KannadaprabhaNewsNetwork | Updated : Nov 04 2024, 04:41 AM IST

ಸಾರಾಂಶ

 ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಕಂದಾಯ ಅಧಿಕಾರಿಗಳ ಸಭೆ ನಡೆಸಿ  ಒತ್ತಡಗಳನ್ನು ತಂದು ರೈತರ ಜಮೀನುಗಳನ್ನು ಕಬಳಿಸುವ ಷಡ್ಯಂತ್ರ ಮಾಡುತ್ತಿದ್ದು, ಇದಕ್ಕೆ ಸಿಎಂ, ಡಿಸಿಎಂ ಹಾಗೂ ಕಂದಾಯ ಸಚಿವರು ಸೇರಿದಂತೆ ಕ್ಯಾಬಿನೆಟ್‌ನ ಹಲವು ಸಚಿವರ ಬೆಂಬಲಿಸಿದ್ದಾರೆ ಎನ್ನಲಾಗಿದೆ.

  ಚಿಂತಾಮಣಿ : ಅನಾದಿ ಕಾಲದಿಂದಲೂ ಉಳಿಮೆ ಮಾಡಿಕೊಂಡು ಬರುತ್ತಿರುವ ರೈತರ ಜಮೀನು ಕಬಳಿಕೆ ಮಾಡುವಲ್ಲಿ ಹಾಗೂ ಪಹಣಿಗಳಲ್ಲಿ ವಕ್ಫ್ ಬೋರ್ಡ್‌ಗೆ ಸೇರಿದೆಂದು ನಮೂದಿಸುವಲ್ಲಿ ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಕಂದಾಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್‌ ಸರ್ಕಾರದ ಕ್ರಮವನ್ನು ಮಾಜಿ ಸಂಸದ ಎಸ್.ಮುನಿಸ್ವಾಮಿ ಲೇವಡಿ ಮಾಡಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಕಾಂಗ್ರೇಸ್ ಸರ್ಕಾರದ ವಕ್ಫ್ ಸಚಿವ ಜಮೀರ್‌ಅಹಮದ್ ಪಾಕಿಸ್ಥಾನದ ಏಜೆಂಟರಂತೆ ವರ್ತನೆ ಮಾಡುತ್ತಿದ್ದು, ಇವರು ಭಾರತದಲ್ಲಿ ಇರಲು ನಾಲಾಯಕ್ ನಾಯಕರಾಗಿದ್ದಾರೆ ಎಂದು ಟೀಕಿಸಿದರು.

ಜಮೀನು ಕಬಳಿಸಲು ಷಡ್ಯಂತ್ರ

ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಕಂದಾಯ ಅಧಿಕಾರಿಗಳ ಸಭೆ ನಡೆಸಿ ಅವರ ಮೇಲೆ ಒತ್ತಡಗಳನ್ನು ತಂದು ರೈತರ ಜಮೀನುಗಳನ್ನು ಕಬಳಿಸುವ ಷಡ್ಯಂತ್ರ ಮಾಡುತ್ತಿದ್ದು, ಇದಕ್ಕೆ ಸಿಎಂ, ಡಿಸಿಎಂ ಹಾಗೂ ಕಂದಾಯ ಸಚಿವರು ಸೇರಿದಂತೆ ಕ್ಯಾಬಿನೆಟ್‌ನ ಹಲವು ಸಚಿವರ ಬೆಂಬಲದೊಂದಿಗೆ ರಾಜ್ಯದ ಉದ್ದಗಲಕ್ಕೂ ಒಂದು ಸಮುದಾಯವನ್ನು ಓಲೈಕೆ ಮಾಡುವ ತಂತ್ರಕ್ಕೆ ಮುಂದಾಗಿದ್ದು ಕಾಂಗ್ರೇಸ್‌ನ ಕೋಮುವಾದಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆಯೆಂದರು.

ಆಸ್ತಿ ರಕ್ಷಣೆಗೆ ಎಚ್ಚೆತ್ತುಕೊಳ್ಳಿ

ತಿಮ್ಮರಾಯಸ್ವಾಮಿ ದೇವಾಸ್ಥಾನವನ್ನು ಪರಿವರ್ತಿಸಿಕೊಂಡಿದ್ದು ಅಲ್ಲಿನ ವಿಗ್ರಹವನ್ನು ತೆಗೆದು ಹಾಕಿದ್ದು ತರಕಾರಿ ಅಂಗಡಿಯನ್ನಾಗಿ ಮಾಡಲಾಗುತ್ತಿದೆ. ರೈತರು ಹಾಗೂ ಹಿಂದೂಗಳು ಕೂಡಲೇ ಎಚ್ಚೆತ್ತುಕೊಂಡು ಸ್ವಂತ ಆಸ್ತಿ, ದೇವಾಲಯಗಳ ಆಸ್ತಿಗಳನ್ನು ರಕ್ಷಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ದೇವನಹಳ್ಳಿ ವೇಣುಗೋಪಾಲ್‌, ಗ್ರಾಮಾಂತರ ಮಂಡಲ ಅಧ್ಯಕ್ಷ ಗುಡರ‍್ಲಹಳ್ಳಿ ರಾಜಣ್ಣ, ನಗರ ಘಟಕ ಮಾಜಿ ಅಧ್ಯಕ್ಷ ಮಹೇಶ್ ಬೈ, ಮುಖಂಡರಾದ ಸಿ.ಆರ್.ವೆಂಕಟೇಶ್, ಕೆ.ಎಂ.ರಾಜಶೇಖರರೆಡ್ಡಿ, ಬಟ್ಲಹಳ್ಳಿ ಶಿವಾರೆಡ್ಡಿ, ಪಾಲೇಪಲ್ಲಿ ಶಿವಾರೆಡ್ಡಿ, ಕೋನಪಲ್ಲಿ ವೆಂಕಟಶಿವಪ್ಪ, ದೇವರಾಜ್, ಗೋಕುಲ್, ಶ್ರೀನಿವಾಸ್, ಸುರೇಶ್, ಕಾಳಿ, ಕೆ.ಆರ್. ಮಹೇಶ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Share this article