- ಸಮಾವೇಶದ ಪೆಂಡಾಲ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಮಾಜಿ ಸಚಿವ ಕನ್ನಡಪ್ರಭವಾರ್ತೆ ಚಿತ್ರದುರ್ಗ
ಜನವರಿ 28ರಂದು ಚಿತ್ರದುರ್ಗದಲ್ಲಿ ನಡೆಯಲಿರು ಶೋಷಿತರ ಸಮಾವೇಶದಲ್ಲಿ ಶೋಷಿತರ ಪರವಾದ ವಿವಿಧ ರೀತಿಯ ಹಕ್ಕುಗಳನ್ನು ಮಂಡಿಸಲಾಗುವುದು ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.ಚಿತ್ರದುರ್ಗ ಹೊರ ವಲಯ ಮಾದಾರ ಚೆನ್ನಯ್ಯ ಗುರುಪೀಠದ ಪಕ್ಕದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಯೋಜಿಸಿರುವ ಬೃಹತ್ ಜಾಗೃತಿ ಸಮಾವೇಶದ ವೇದಿಕೆ ಮತ್ತು ಪೆಂಡಾಲ್ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಎಲ್ಲಾ ಜಾತಿಗಳಲ್ಲಿಯೂ ಶೋಷಿತರಿದ್ದಾರೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಎಲ್ಲರೂ ಶೋಷತರೇ ಆಗಿದ್ದಾರೆ. ಅವರ ಅಭಿವೃದ್ಧಿಗಾಗಿ ಈ ರೀತಿಯ ಸಮಾ ವೇಶಗಳ ಆಗತ್ಯ ಇದೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಶೋಷಿತರು ಧಮನಿತರು, ಅವಕಾಶ ವಂಚಿತ ಸಮುದಾಯ ಹೆಚ್ಚಾಗಿದೆ. ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಡಿಎಸ್ಎಸ್‌ನ ಮಾವಳ್ಳಿ ಶಂಕರ್ ಸೇರಿದಂತೆ ಹಲವಾರು ನಾಯಕರು ಸಮಾವೇಶಕ್ಕೆ ಜನ ಸಂಘಟನೆ ಮಾಡುತ್ತಿದ್ದಾರೆ. ಶೋಷಿತ ವರ್ಗಗಳನ್ನು ಒಂದು ಕಡೆಗೆ ಸೇರಿಸುವ ಕಾರ್ಯ ಸಮಾವೇಶ ಮಾಡುತ್ತದೆ. ಅವರ ಹಕ್ಕುಗಳನ್ನು ಕಾಪಾಡಿ ಸಿಗಬೇಕಾದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶವನ್ನು ಸಮಾವೇಶ ಹೊಂದಿದೆ ಎಂದರು.ಸಮಾವೇಶದ ಸಂಚಾಲಕ ಬಿ.ಟಿ.ಜಗದೀಶ್ ಮಾತನಾಡಿ, ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಇವರ ಜೊತೆಯಲ್ಲಿ ಸರ್ಕಾರದ ಹಲವಾರು ಸಚಿವರು ಶೋಷಿತ ಸಮುದಾಯದ ನಾಯಕರು ಭಾಗವಹಿಸಲಿದ್ದಾರೆ ಎಂದರು. ಕಾಂಗ್ರೆಸ್ ಮುಖಂಡರಾದ ಹನುಮಲಿ ಷಣ್ಮುಖಪ್ಪ, ಮಾಜಿ ಶಾಸಕ ಡಿ.ಉಮಾಪತಿ. ಜಿಪಂಮಾಜಿ ಅಧ್ಯಕ್ಷ ಮಹಾಲಿಂಗಪ್ಪ, ಮಾಜಿ ಸದಸ್ಯರಾದ ನರಸಿಂಹಮೂರ್ತಿ, ರಾಜಾನಾಯ್ಕ, ಪ್ರಕಾಶಮೂರ್ತಿ, ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ ಕೃಷ್ಣಮೂರ್ತಿ, ಹೆಚ್.ಮಂಜಪ್ಪ, ಟಿಪ್ಪು ವೇದಿಕೆಯ ಅಧ್ಯಕ್ಷ ಖಾಸಿಂಆಲಿ, ಬಡಗಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಜಾಕಿರ್ ಹುಸೇನ್, ಅಲೆಮಾರಿ ಜನಾಂಗದ ಅಧ್ಯಕ್ಷ ಲಕ್ಷ್ಮೀಕಾಂತ, ಮುಖಂಡರಾದ ರಾಮ ಪ್ರಕಾಶ್ ನಾಯ್ಕ, ಮುದಸಿರ್, ಷಫಿವುಲ್ಲಾ, ರೆಹಮಾನ್ ಖಾನ್, ಉಪ್ಪಾರ ಸಮಾಜದ ಮಾಜಿ ಅಧ್ಯಕ್ಷ ಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಕಾಂತರಾಜ್ ಉತ್ತಮವಾದ ವರದಿ ಕೊಟ್ಟಿದ್ದಾರೆ: ಶ್ಲಾಘನೆನಾನು ಹಿಂದೆ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ವೇಳೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಲಾಯಿತು. ಕಾಂತರಾಜ್ ಉತ್ತಮ ವರದಿ ಕೊಟ್ಟಿದ್ದಾರೆ. ಇದಕ್ಕಾಗಿ ಹಲವಾರು ಜನತೆ ಕೆಲಸ ಮಾಡಿದ್ದಾರೆ. ವರದಿಯ ಸ್ವೀಕಾರ ಮಾಡಿ ಅದರಲ್ಲಿ ನೀಡಿರುವ ಅಂಶಗಳನ್ನು ಮನಗಂಡು ಅವರಿಗೆ ತಲುಪಿಸುವ ಕಾರ್ಯ ವನ್ನು ಸರ್ಕಾರ ಮಾಡಬೇಕಿದೆ. ವರದಿ ಸ್ವೀಕಾರ ಮಾಡಿ ಅದರ ಬಗ್ಗೆ ಚರ್ಚೆ ನಡೆದು ತಪ್ಪುಗಳಿದ್ದರೆ ಸರಿಪಡಿಸಬೇಕೆಂದು ಆಂಜನೇಯ ಹೇಳಿದರು