ಜಿಬಿಎ ಜೆಡಿಎಸ್‌ ಘಟಕದ ವಿವಿಧ ವಿಭಾಗಕ್ಕೆ ಪದಾಧಿಕಾರಿಗಳ ನೇಮಕ

KannadaprabhaNewsNetwork |  
Published : May 26, 2026, 03:45 AM ISTUpdated : May 26, 2026, 04:20 AM IST
HD Kumaraswamy Speech at JDS Rajata Mahotsava in Bengaluru

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ತಯಾರಿ ಆರಂಭಿಸಿರುವ ಬೆನ್ನಲ್ಲೇ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದ ಮೇರೆಗೆ ಗ್ರೇಟರ್‌ ಬೆಂಗಳೂರು ಜೆಡಿಎಸ್‌ ಘಟಕದ ವಿವಿಧ ವಿಭಾಗಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ.

 ಬೆಂಗಳೂರು :  ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ತಯಾರಿ ಆರಂಭಿಸಿರುವ ಬೆನ್ನಲ್ಲೇ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದ ಮೇರೆಗೆ ಗ್ರೇಟರ್‌ ಬೆಂಗಳೂರು ಜೆಡಿಎಸ್‌ ಘಟಕದ ವಿವಿಧ ವಿಭಾಗಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ.

ಮಹಿಳಾ ವಿಭಾಗದ ಅಧ್ಯಕ್ಷರಾಗಿ ಶೈಲಾ ಸಂತೋಜಿರಾವ್‌

ಮಹಿಳಾ ವಿಭಾಗದ ಅಧ್ಯಕ್ಷರಾಗಿ ಶೈಲಾ ಸಂತೋಜಿರಾವ್‌, ಯುವ ಜನತಾ ದಳ ವಿಭಾಗದ ಅಧ್ಯಕ್ಷರಾಗಿ ಆರ್‌.ಸ್ಯಾಮುವೆಲ್‌, ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಎಂ.ಗೋಪಾಲ್, ಸೇವಾದಳ ವಿಭಾಗದ ಅಧ್ಯಕ್ಷರಾಗಿ ಪಿ.ಮಹೇಶ್, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷರಾಗಿ ವಿ.ಜನಾರ್ದನ್, ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷರಾಗಿ ಫಣಿರಾಜ್ ಹಿರಿಯಣ್ಣ ಗೌಡ, ಮುಸ್ಲಿಂ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಅಫ್ರೋಜ್ ಬೇಗ್, ಕ್ರೈಸ್ತ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಚಂದ್ರನ್ ಚಾರ್ಲ್ಸ್, ಕಾನೂನು ವಿಭಾಗದ ಅಧ್ಯಕ್ಷರಾಗಿ ಎಸ್‌.ಪಿ.ಪ್ರದೀಪ್‌ ಕುಮಾರ್‌, ವಿದ್ಯಾರ್ಥಿ ವಿಭಾಗದ ಅಧ್ಯಕ್ಷರಾಗಿ ಆದಿತ್ಯ ಎನ್.ರಾಜ್, ಕಾರ್ಯಧ್ಯಕ್ಷರಾಗಿ ವಿನಯ್ ಕುಮಾರ್, ಮಹಾಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಸೂರ್ಯ ಮತ್ತು ವೈದ್ಯಕೀಯ ವಿಭಾಗದ ಅಧ್ಯಕ್ಷರಾಗಿ ಡಾ.ಎಂ.ಭರದ್ವಾಜ್ ಅವರನ್ನು ನೇಮಕ ಮಾಡಲಾಗಿದೆ.

ನೂತನ ಪದಾಧಿಕಾರಿಗಳು:

ಕಾರ್ಯಧ್ಯಕ್ಷರಾಗಿ ಟಿ.ಆರ್.ತುಳಸಿ ರಾಮ್, ಮಹಾಪ್ರಧಾನ ಕಾರ್ಯದರ್ಶಿಯಾಗಿ ಎಸ್‌.ರಮೇಶ್, ಹಿರಿಯ ಉಪಾಧ್ಯಕ್ಷರಾಗಿ ಬಿ.ಅಂದಾನಪ್ಪ, ಕೆ.ಬಾಗೇಗೌಡ, ಹೆಚ್.ಎಂ. ರಾಮಯ್ಯ ಮತ್ತು ಶ್ರೀರಾಮೇಗೌಡ ಎನ್ ಕೃಷ್ಣಪ್ಪ, ಉಪಾಧ್ಯಕ್ಷರಾಗಿ ಬಿ. ಭದ್ರೆಗೌಡ, ಹೆಚ್.ಜಿ. ಉಮೇಶ್, ಲಕ್ಷ್ಮೀನಾರಾಯಣ್, ಸುರೇಶ್ ನಾಗವಾರ, ಎ.ರುದ್ರಪ್ಪ, ತಾರಾ ಲೋಕೇಶ್, ಎಂ. ಚಂದ್ರೇಗೌಡ, ಪ್ರಧಾನ ಕಾರ್ಯದರ್ಶಿಗಳಾಗಿ ಆರ್. ಅಭಿಷೇಕ್, ಶ್ವೇತಾ ಯಾದವ್, ಕೆ.ಬಿ. ಶ್ರೀನಿವಾಸ್, ಹೆಚ್.ಪಿ.ರತ್ನ ರಾಜೇಗೌಡ ಅವರನ್ನು ನೇಮಿಸಲಾಗಿದೆ. ಸೋಮವಾರ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಕೋರ್‌ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿ ಮತ್ತು ಗ್ರೇಟರ್‌ ಬೆಂಗಳೂರು ಜೆಡಿಎಸ್‌ ಘಟಕದ ಅಧ್ಯಕ್ಷ ಎಚ್‌.ಎಂ.ರಮೇಶ್ ಗೌಡ ಅವರು ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜೀವ್ ಗಾಂಧಿ ವಸತಿ ನಿಗಮದಿಂದ 140 ಮನೆಗಳು ಹಸ್ತಾಂತರ
ಹುಟ್ಟಿದ್ದಷ್ಟೇ ಗೊತ್ತು, ದಿನ ನಿಗದಿ ಮಾಡಿದ್ದು ಮಾಸ್ತರ್‌!