ಪಾಕ್‌ನ ಬಗ್ಗುಬಡಿದು ಭಾರತ ಚಾಂಪಿಯನ್‌

Published : Sep 29, 2025, 04:51 AM IST
India vs Pakistan Asia Cup 2025 Final

ಸಾರಾಂಶ

ಪಾಕಿಸ್ತಾನ ಬಗ್ಗುಬಡಿದು ಏಷ್ಯಾಕಪ್ ಟ್ರೋಫಿ ಗೆದ್ದ ಭಾರತ, ವಿಕೆಟ್ ಪತನ, ಅಂತಿಮ ಹಂತದಲ್ಲಿ ಎದುರಾದ ಸವಾಲು , ಪಾಕ್ ವಿರುದ್ದದ ಪಂದ್ಯದ ಒತ್ತಡಗಳಿಂದ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿತ್ತು. ಯಾರಿಗೆ ಗೆಲುವು ಅನ್ನೋದು ನಿಗೂಢವಾಗಿತ್ತು. ಆದರೆ ತಿಲಕ್ ವರ್ಮಾ ಹೋರಾಟ ಗೆಲುವು ತಂದುಕೊಟ್ಟಿದೆ.

ದುಬೈ :  ಟಾರ್ಗೆಟ್ ಅಲ್ಪವಾಗಿದ್ದರೂ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಒಂದು ಹಂತದಲ್ಲಿ ಭಾರತ ಗೆಲ್ಲೋದೆ ಕಷ್ಟ ಅನ್ನೋ ವಾತಾವರಣ ನಿರ್ಮಾಣವಾಗಿತ್ತು. ಪ್ರತಿ ಎಸೆತದ ಬಳಿಕ ಭಾರತ ಮೇಲೆ ಒತ್ತಡ ತೀವ್ರಗೊಳ್ಳುತ್ತಿತ್ತು. ತಿಲಕ್ ವರ್ಮಾ ನೀಡಿದ ಹೋರಾಟದಿಂದ ಭಾರತ ಏಷ್ಯಾಕಪ್ ಟ್ರೋಫಿ ಗೆದ್ದುಕೊಂಡಿದೆ. ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಬಗ್ಗು ಬಡಿದ ಭಾರತ ಏಷ್ಯಾಕಪ್ ಟ್ರೋಫಿ ಗೆದ್ದುಕೊಂಡಿತು.

ವಿವಾದಗಳಲ್ಲೇ ಅಂತ್ಯಗೊಂಡ ಏಷ್ಯಾಕಪ್

ಪಾಕಿಸ್ತಾನ ವಿರುದ್ದ ಪಂದ್ಯ ಆಡಂತೆ ಒತ್ತಡ, ಕೊನೆಯ ಕ್ಷಣದಲ್ಲಿ ಕೇಂದ್ರ ಸರ್ಕಾರದಿಂದ ಪಂದ್ಯಕ್ಕೆ ಗ್ರೀನ್ ಸಿಗ್ನಲ್, ಭಾರತ ನೋ ಹ್ಯಾಂಡ್ ಶೇಕ್ ಹೇಳಿದರೆ, ಅತ್ತ ಪಾಕಿಸ್ತಾನ, ಭಾರತದ ಪ್ರಸೆಂಟರ್ ರವಿ ಶಾಸ್ತ್ರಿ ಜೊತೆ ಮಾತನಾಡಲು ನಿರಾಕರಣೆ, ಹ್ಯಾರಿಸ್ ರೌಫ್ ಜೆಟ್ ವಿಮಾನ ಪತನದ ಸಿಗ್ನಲ್‌ಗೆ ಇತ್ತ ಅರ್ಶದೀಪ್ ಸಿಂಗ್ ತಿರುಗೇಟು ಹೀಗೆ ಇಡೀ ಟೂರ್ನಿಯದ್ದುಕ್ಕೂ ಭಾರತ ಹಾಗೂ ಪಾಕಿಸ್ತಾನದ ವಿವಾದ ಏಷ್ಯಾಕಪ್ ಟೂರ್ನಿಗೆ ಆತಂಕ ಸೃಷ್ಟಿಸಿತ್ತು. ವಿವಾದಗಳಿಂದ ಆರಂಭಗೊಂಡ ಏಷ್ಯಾಕಪ್ ಟೂರ್ನಿ, ದುಪ್ಪಟ್ಟು ವಿವಾದದಿಂದ ಅಂತ್ಯಗೊಂಡಿದೆ.

ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಸವಾಲು

ಲೀಗ್ ಹಂತ, ಸೂಪರ್ ಫೋರ್ ಸೇರಿದಂತೆ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಅತ್ಯಂತ ಕಠಿಣ ಸವಾಲು ಎದುರಿಸಿರಲಿಲ್ಲ. ಇದೇ ಪಾಕಿಸ್ತಾನ ಲೀಗ್ ಹಾಗೂ ಸೂಪರ್ ಫೋರ್ ಹಂತದಲ್ಲಿ ಎದುರಾಗಿತ್ತು. ಆಗಲೂ ನಿರಾಯಸ ಗೆಲುವು ದಾಖಲಿಸಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿನ ಬದಲಾವಣೆ, ಮತ್ತೊಂದೆಡೆ ಲೆಕ್ಕಾಚಾರ ಉಲ್ಟಾ ಆಗಿತ್ತು. ಸುಲಭ ಟಾರ್ಗೆಟ್ ಕೂಡ ಕಠಿಣವಾಗಿತ್ತು. ಭಾರತ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲಿಕಿತ್ತು. ಅಭಿಶೇಕ್ ಶರ್ಮಾ ಕೇವಲ 5 ರನ್, ನಾಯಕ ಸೂರ್ಯಕುಮಾರ್ ಯಾದವ್ 1, ಶುಬಮನ್ ಗಿಲ್ 12 ರನ್ ಸಿಡಿಸಿ ಔಟಾಗಿದ್ದರು.

 ತಿಲಕ್ ವರ್ಮಾ ಸಂಜು ಸ್ಯಾಮ್ಸನ್ ಜೊತೆಯಾಟ

ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್ ಜೊತೆಯಾಟ ಭಾರತ ತಂಡಕ್ಕೆ ಉಸಿರಾಟ ನೀಡಿತ್ತು. ಆದರೆ ಸಂಜು ಆಟ 24 ರನ್‌ಗೆ ಅಂತ್ಯವಾಗುವ ಮೂಲಕ ಆತಂಕ ಹೆಚ್ಚಾಗಿತ್ತು., ಭಾರತ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಒಂದೆಡೆ ರನ್ ರೇಟ್ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಒತ್ತಡವೂ ಅಧಿಕವಾಗುತ್ತಿತ್ತು.

ತಿಲಕ್ ವರ್ಮಾ ಹಾಫ್ ಸೆಂಚುರಿ

ತಿಲಕ್ ವರ್ಮಾ ಹೋರಾಟ ನೀಡಿದರು. ಭಾರತಕ್ಕೆ ದಿಟ್ಟ ಜೊತೆಯಾಟದ ಅವಶ್ಯಕತೆ ಇತ್ತು. ತಿಲಕ್ ವರ್ಮಾ ಹೋರಾಟ ಟೀಂ ಇಂಡಿಯಾಗೆ ನೆರವಾಗಿತ್ತು. ಎಚ್ಚರಿಕೆ ಆಟವಾಡಿದ ತಿಲಕ್ ವರ್ಮಾ ಹಾಫ್ ಸೆಂಚುರಿ ಸಿಡಿಸಿದರು. ಆದರೆ ಭಾರತದ ಟಾರ್ಗೆಟ್ ಅಲ್ಪವಾಗಿದ್ದರೂ ರನ್ ಗಳಿಕೆ ವೇಗ ಕಡಿಮೆಯಾಗಿತ್ತು. ಹೀಗಾಗಿ ಅಂತಿಮ ಹಂತ ತಲುಪುತ್ತಿದ್ದಂತೆ ಒತ್ತಡ ತೀವ್ರಗೊಂಡಿತ್ತು.

18ನೇ ಓವರ್‌ನ ಅಂತಿಮ ಎಸೆತದಲ್ಲಿ ಶಿವಂ ದುಬೆ ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ತಿರುವು ನೀಡಿದರು. ಈ ಸಿಕ್ಸರ್ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಿಸುವಂತೆ ಮಾಡಿತ್ತು. ಇದರಿಂದ ಅಂತಿಮ 12 ಎಸೆತದಲ್ಲಿ ಭಾರತದ ಗೆಲುವಿಗೆ 17 ರನ್ ಅವಶ್ಯಕತೆ ಇತ್ತು. 18ನೇ ಓವರ್‌ನ ಕೊನೆಯ ಎಸೆತದಲ್ಲಿ ಭಾರತ ಮೇಲುಗೈ ಸಾಧಿಸಿದರೆ, 19ನೇ ಓವರ್‌ನ ಆರಂಭಿಕ ಮೂರು ಎಸೆತದಲ್ಲಿ ನಿರೀಕ್ಷಿತ ರನ್ ಬರಲಿಲ್ಲ. ಆದರೆ ನಾಲ್ಕನೇ ಎಸೆತದ ಬೌಂಡರಿ ಕೊಂಚ ನಿರಾಳರನ್ನಾಗಿ ಮಾಡಿತ್ತು. ಆದರೆ ಶಿವಂ ದುಬೆ 33 ರನ್ ಸಿಡಿಸಿ ಔಟಾದರು.

ಅಂತಿಮ 6 ಎಸೆತದಲ್ಲಿ ಭಾರತದ ಗಲುವಿಗೆ 10 ರನ್

ಕೊನೆಯ 6 ಎಸೆತದಲ್ಲಿ ಭಾರತದ ಗೆಲುವಿಗೆ 10 ರನ್ ಬೇಕಿತ್ತು. ಎರಡನೇ ಎಸೆತದಲ್ಲಿ ತಿಲಕ್ ವರ್ಮಾ ಭರ್ಜರಿ ಸಿಕ್ಸರ್ ಪಂದ್ಯದ ಗತಿ ಬದಲಿಸಿತ್ತು. ಬಳಿಕ 4 ಎಸೆತದಲ್ಲಿ ಭಾರತದ ಗೆಲುವಿಗೆ 2 ರನ್ ಅವಶ್ಯಕತೆ ಇತ್ತು. ರಿಂಕು ಸಿಂಗ್ ಬೌಂಡರಿ ಮೂಲಕ ಭಾರತ 5 ವಿಕೆಟ್ ಗೆಲುವು ಸಾಧಿಸಿತು. ತಿಲಕ್ ವರ್ಮಾ ಅಜೇಯ 69 ರನ್ ಸಿಡಿಸಿದರು.

PREV
Read more Articles on

Recommended Stories

ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ
ಗ್ಯಾರಂಟಿ ನಿಲ್ಲಿಸಲು ಆರ್ಥಿಕ ಸಮೀಕ್ಷೆ ಮಾಡುತ್ತಿಲ್ಲ: ಡಿ.ಕೆ.ಶಿವಕುಮಾರ್‌