ಭಾರತದಲ್ಲಿ ಇವಿಎಂ ಯಂತ್ರಕ್ಕಿಂತ ಬ್ಯಾಲೆಟ್‌ ಪೇಪರ್‌ ಗುಡ್‌ : ಮುಖ್ಯಮಂತ್ರಿ ಸಿದ್ಧರಾಮಯ್ಯ

Published : Nov 30, 2024, 09:20 AM IST
cm siddaramaiah

ಸಾರಾಂಶ

ಭಾರತದಲ್ಲಿ ಇವಿಎಂ ಯಂತ್ರದ ಬದಲು ಮರಳಿ ಬ್ಯಾಲೆಟ್‌ ಪೇಪರ್‌ ತರಬೇಕು ಎಂಬ ಕಾಂಗ್ರೆಸ್‌ ಬೇಡಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂಬು ನೀಡಿದ್ದಾರೆ. ಇವಿಎಂ ಬದಲು ಬ್ಯಾಲೆಟ್ ಪೇಪರ್‌ಗೆ ಹೋಗುವುದು ಒಳ್ಳೆಯದು’ ಎಂದು ಹೇಳಿವ ಮೂಲಕ ಇವಿಎಂ ಬಗ್ಗೆ ತಮ್ಮ ಅಸಮ್ಮತವನ್ನು ವ್ಯಕ್ತಪಡಿಸಿದ್ದಾರೆ.

ನವದೆಹಲಿ : ಭಾರತದಲ್ಲಿ ಇವಿಎಂ ಯಂತ್ರದ ಬದಲು ಮರಳಿ ಬ್ಯಾಲೆಟ್‌ ಪೇಪರ್‌ ತರಬೇಕು ಎಂಬ ಕಾಂಗ್ರೆಸ್‌ ಬೇಡಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂಬು ನೀಡಿದ್ದಾರೆ. ಇವಿಎಂ ಬದಲು ಬ್ಯಾಲೆಟ್ ಪೇಪರ್‌ಗೆ ಹೋಗುವುದು ಒಳ್ಳೆಯದು’ ಎಂದು ಹೇಳಿವ ಮೂಲಕ ಇವಿಎಂ ಬಗ್ಗೆ ತಮ್ಮ ಅಸಮ್ಮತವನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ದೆಹಲಿ ಭೇಟಿ ವೇಳೆ ಮಾತನಾಡಿದ ಅವರು, ಜಗತ್ತಿನಲ್ಲಿ ಮುಂದುವರೆದ ದೇಶಗಳು ಇವಿಎಂ ಯಂತ್ರದಿಂದ ಬ್ಯಾಲೆಟ್‌ ಪೇಪರ್‌ಗೆ ಹೋಗಿವೆ. ಭಾರತದಲ್ಲಿಯೇ ಇದು ಆಗಬೇಕು ಎಂದರು. ಇವಿಎಂ ಯಂತ್ರದ ವಿಷಯದಲ್ಲಿ ಅನಗತ್ಯವಾಗಿ ಅನುಮಾನಕ್ಕೆ ಎಡೆ ಮಾಡಿಕೊಡುವುದು ಆಗುತ್ತಿವೆ. ಇವಿಎಂ ಯಂತ್ರವನ್ನು ತಂತ್ರಜ್ಞಾನದಿಂದ ತಿರುಚಬಹುದಾದ ಅವಕಾಶವಿದೆ. ಹೀಗಾಗಿ ಮರಳಿ ಬ್ಯಾಲೆಟ್‌ ಪೇಪರ್‌ ಜಾರಿ ತರಬೇಕು ಎಂದು ಆಗ್ರಹಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌
ರಾಜ್ಯಪಾಲರನ್ನೇ ಶಾಸಕರು ಅಡ್ಡಗಟ್ಟಿದ್ದು ಸರಿಯೇ?