30 ಲಕ್ಷ ಬಿಜೆಪಿ ಸದಸ್ಯರಿಂದ ಗಾಂವ್‌ ಚಲೋ ಅಭಿಯಾನ!

KannadaprabhaNewsNetwork |  
Published : Jan 21, 2024, 01:30 AM ISTUpdated : Jan 21, 2024, 07:07 AM IST
ಭಾರತೀಯ ಜನತಾ ಪಕ್ಷ | Kannada Prabha

ಸಾರಾಂಶ

ಲೋಕಸಭೆ ಚುನಾವಣೆಗೂ ಮುನ್ನ ಸಮಾಜದ ವಿವಿಧ ವರ್ಗಗಳನ್ನು ತಲುಪಲು ನಾನಾ ಆಂದೋಲನ ರೂಪಿಸುತ್ತಿರುವ ಬಿಜೆಪಿ, ಗ್ರಾಮೀಣ ಪ್ರದೇಶದಲ್ಲಿ ಪ್ರತ್ಯೇಕ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಅದಕ್ಕೆ ‘ಗಾಂವ್ ಚಲೋ’ ಎಂದು ಹೆಸರಿಟ್ಟಿದೆ. ಫೆ.4 ಮತ್ತು 11ರ ನಡುವೆ ಈ ಅಭಿಯಾನ ನಡೆಯಲಿದೆ.

ಪಿಟಿಐ ನವದೆಹಲಿ

ಲೋಕಸಭೆ ಚುನಾವಣೆಗೂ ಮುನ್ನ ಸಮಾಜದ ವಿವಿಧ ವರ್ಗಗಳನ್ನು ತಲುಪಲು ನಾನಾ ಆಂದೋಲನ ರೂಪಿಸುತ್ತಿರುವ ಬಿಜೆಪಿ, ಗ್ರಾಮೀಣ ಪ್ರದೇಶದಲ್ಲಿ ಪ್ರತ್ಯೇಕ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಅದಕ್ಕೆ ‘ಗಾಂವ್ ಚಲೋ’ ಎಂದು ಹೆಸರಿಟ್ಟಿದೆ. 

ಫೆ.4 ಮತ್ತು 11ರ ನಡುವೆ ಈ ಅಭಿಯಾನ ನಡೆಯಲಿದೆ.ಅಭಿಯಾನದ ಅಂಗವಾಗಿ, ಬಿಜೆಪಿಯ 30 ಲಕ್ಷ ಸದಸ್ಯರು 7 ಲಕ್ಷ ಗ್ರಾಮೀಣ ಮತಗಟ್ಟೆಗಳು ಮತ್ತು ಎಲ್ಲಾ ನಗರ ಮತಗಟ್ಟೆಗಳಲ್ಲಿ ಸಂಚರಿಸಿ ಮೋದಿ ಸರ್ಕಾರದ ಸಾಧನೆಗಳ ಪ್ರಚಾರ ನಡೆಸಲಿದ್ದಾರೆ. 

ಈ ನಿಮಿತ್ತ ಕಾರ್ಯಕರ್ತರಿಗೆ ತರಬೇತಿ ನೀಡುವ ಕಾರ್ಯಾಗಾರವನ್ನು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಶನಿವಾರ ಉದ್ಘಾಟಿಸಿ ಮಾತನಾಡಿ, ಮೋದಿ ನೇತೃತ್ವದ ಸರ್ಕಾರದ ಯಶಸ್ಸಿನ ಸಂದೇಶಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು ಎಂದು ಕರೆ ನೀಡಿದರು.

ಕಾರ್ಯಾಗಾರದಲ್ಲಿ 37 ಸಾಂಸ್ಥಿಕ ರಾಜ್ಯಗಳ ಬಿಜೆಪಿ ಸದಸ್ಯರು ಭಾಗವಹಿಸಿದ್ದರು. ಇನ್ನು ಈ ರಾಜ್ಯಗಳ 988 ಸಾಂಸ್ಥಿಕ ಜಿಲ್ಲೆಗಳು ಮತ್ತು 16,188 ‘ಮಂಡಲ’ಗಳಲ್ಲಿ ಇದೇ ರೀತಿಯ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು.

ಇತ್ತೀಚೆಗೆ ಯುವ ಮತದಾರರನ್ನು ಆಕರ್ಷಿಸಲು ಹಾಗೂ ಮುಸ್ಲಿಂ ಮತದಾರರ ಆಕರ್ಷಿಸಲು ಕೆಲವು ಆಂದೋಲನಗಳಿಗೆ ಬಿಜೆಪಿ ಚಾಲನೆ ನೀಡಿತ್ತು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ