ಅಮರಾವತಿ: ಕೌಶಲ್ಯಾಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಯಾಗಿರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆರೋಗ್ಯದ ತುಂಬಾ ಹದಗೆಟ್ಟಿದೆ. ಅವರ ತೂಕ ದಿಢೀರನೆ 5 ಕೇಜಿ ಇಳಿದಿದೆ ಎಂದು ಅವರ ಪುತ್ರ ನಾರಾ ಲೋಕೇಶ್ ಹೇಳಿದ್ದಾರೆ. ‘ಚಂದ್ರಬಾಬು ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ರಾಜಮಂಡ್ರಿ ಜೈಲಿನಲ್ಲಿ ಸೊಳ್ಳೆ, ಅಲರ್ಜಿ, ಮಾಲಿನ್ಯಕರ ನೀರು, ರೋಗ ರುಜಿನುಗಳಿಂದ ಸಿಬಿಎನ್ ಆರೋಗ್ಯ ಅವನತಿಯಾಗುತ್ತಿದೆ. ಆಂಧ್ರಪ್ರದೇಶ ಸರ್ಕಾರ ಸರಿಯಾದ ವೈದ್ಯಕೀಯ ಸೌಕರ್ಯವನ್ನು ನೀಡದೇ ಜೀವನವನ್ನು ಆತಂಕಕ್ಕೆ ದೂಡುತ್ತಿದೆ. ಜೈಲಿನಲ್ಲಿ ಕುಡಿವ ನೀರು ಕೂಡ ಕಲುಷಿತವಾಗಿದೆ. ಓರ್ವ ಮಾಜಿ ಮುಖ್ಯಮಂತ್ರಿಯನ್ನು ಸರ್ಕಾರ ಈ ರೀತಿ ನಡೆಸಿಕೊಳ್ಳುತ್ತಿದೆ’ ಎಂದು ಟ್ವೀಟರ್‌ನಲ್ಲಿ ಆರೋಪಿಸಿದ್ದಾರೆ.